ETV Bharat / bharat

18 ದಿನ.. 8 ರಾಜ್ಯ..12 ನಗರ.. ರೈಲಿನಲ್ಲೇ ಯೋಗಾಯೋಗ.. ಏನಿದರ ವಿಶೇಷತೆ? - ಶ್ರೀ ರಾಮಾಯಣ ಯಾತ್ರಾ ಸರ್ಕ್ಯೂಟ್‌

'ಭಾರತ್ ಗೌರವ್' ರೈಲು ಹಲವು ವಿಶೇಷತೆಗಳನ್ನು ಒಳಗೊಂಡಿದ್ದು, ಯೋಗ ದಿನದಂದು ದೆಹಲಿಯ ಸಫ್ದರ್‌ಜಂಗ್ ನಿಲ್ದಾಣದಿಂದ ಮೊದಲ ರೈಲು ಹೊರಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bharat Gaurav train
'ಭಾರತ್ ಗೌರವ್' ರೈಲು
author img

By

Published : Jun 10, 2022, 1:02 PM IST

ನವದೆಹಲಿ: ಶ್ರೀ ರಾಮ ದೇವರೊಂದಿಗೆ ನಿಕಟ ಸಂಬಂಧ ಹೊಂದಿರುವ ಭಾರತ ಮತ್ತು ನೇಪಾಳದ ಸ್ಥಳಗಳಿಗೆ ಯಾತ್ರಾರ್ಥಿಗಳನ್ನು ಕರೆದೊಯ್ಯುವ ಮೊದಲ 'ಭಾರತ್ ಗೌರವ್' ರೈಲು ಕೆಲ ವಿಶೇಷ ಸೌಲಭ್ಯ ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಜೂನ್ 21ರ ಅಂತಾರಾಷ್ಟ್ರೀಯ ಯೋಗ ದಿನದಂದು ದೆಹಲಿಯ ಸಫ್ದರ್‌ಜಂಗ್ ನಿಲ್ದಾಣದಿಂದ ರೈಲು ಹೊರಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀ ರಾಮಾಯಣ ಯಾತ್ರಾ ಸರ್ಕ್ಯೂಟ್‌ನಲ್ಲಿ 10 ಬೋಗಿಗಳ ರೈಲು ಚಾಲನೆಯಾಗಲಿದ್ದು, ಪ್ರತಿ ಬೋಗಿಯು ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಬಿಂಬಿಸುವ ಥೀಮ್ ಆಧಾರಿತವಾಗಿರುತ್ತದೆ. ಬೋಗಿಯ ಒಳಾಂಗಣವನ್ನು ರಾಮಾಯಣ ಸಂಬಂಧಿತ ಪೋಸ್ಟರ್‌ಗಳು ಮತ್ತು ವಿವಿಧ ವಿಷಯಗಳನ್ನು ಪ್ರದರ್ಶಿಸುವ ಕಲಾಕೃತಿಗಳಿಂದ ಅಲಂಕರಿಸಲಾಗಿದೆ.

ಇಬ್ಬರು ತರಬೇತುದಾರರನ್ನು ಯೋಗಕ್ಕೆ ಮೀಸಲಿಡಲಾಗಿದೆ. ವಿವಿಧ ಆಸನಗಳನ್ನು ಪ್ರದರ್ಶಿಸಲು ಬೋಧಕರು ಉಪಸ್ಥಿತರಿರುತ್ತಾರೆ ಮತ್ತು ಆಸಕ್ತ ಪ್ರಯಾಣಿಕರು ಕೋಚ್‌ನಲ್ಲಿಯೇ ಅವುಗಳನ್ನು ಪ್ರದರ್ಶಿಸಲು, ಅಭ್ಯಾಸ ಮಾಡಲು ಸಾಧ್ಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಅಂತಾರಾಷ್ಟ್ರೀಯ ಗಡಿಗಳನ್ನು ದಾಟಿ ನೆರೆಯ ನೇಪಾಳಕ್ಕೆ ಪ್ರಯಾಣಿಸುವ ಮೊದಲ ಪ್ರವಾಸಿ ರೈಲು ಇದಾಗಿದೆ. ಇದು ಎಸಿ ಬೋಗಿಗಳನ್ನು ಕೂಡಾ ಹೊಂದಿದೆ.

ಇದನ್ನೂ ಓದಿ: ತಿರುಮಲ ತಿಮ್ಮಪ್ಪನಿಗೆ ಎರಡೂವರೆ ಕೋಟಿ ಮೌಲ್ಯದ ಚಿನ್ನಾಭರಣ ದೇಣಿಗೆ ನೀಡಿದ ಭಕ್ತೆ!

ರೈಲು ತನ್ನ ಪ್ರಯಾಣವನ್ನು ಪೂರ್ಣಗೊಳಿಸಲು 18 ದಿನಗಳನ್ನು ತೆಗೆದುಕೊಳ್ಳುತ್ತದೆ. ದೇಶಾದ್ಯಂತ 8 ರಾಜ್ಯಗಳು ಮತ್ತು 12 ನಗರಗಳನ್ನು ಸುತ್ತಲಿದೆ. ರೈಲಿನಲ್ಲಿ ಆಸನಗಳ ಒಟ್ಟು ಸಾಮರ್ಥ್ಯವು 600 ಆಗಿದ್ದು, ಅದರಲ್ಲಿ ಸುಮಾರು 450 ಸೀಟುಗಳನ್ನು ಈಗಾಗಲೇ ಬುಕ್ ಮಾಡಲಾಗಿದೆ. ಪ್ರತಿ ಟಿಕೆಟ್‌ನ ಬೆಲೆ 65,000 ರೂ. ಇದ್ದು, ಜೂನ್ 17 ರಂದು ರೈಲನ್ನು, ಬೋಗಿಗಳನ್ನು ಅಧಿಕೃತವಾಗಿ ಅನಾವರಣಗೊಳಿಸಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.