ನವದೆಹಲಿ : ದೇಶಾದ್ಯಂತ 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊರೊನಾ ಲಸಿಕೆ ವಿತರಣೆ ಶೀಘ್ರದಲ್ಲೇ ಆರಂಭವಾಗಲಿದೆ. ಇದೇ ವೇಳೆಯೇ ಭಾರತ್ ಬಯೋಟೆಕ್ ತನ್ನ ಕೋವ್ಯಾಕ್ಸಿನ್ ಅನ್ನು 2 ರಿಂದ 18 ವರ್ಷದೊಳಗಿನ ಮಕ್ಕಳಿಗೆ 'ಬೂಸ್ಟರ್ ಡೋಸ್' ಆಗಿ ನೀಡುವ ಕುರಿತು ಅಂತಿಮ ಪ್ರಯೋಗಕ್ಕೆ ಅನುಮತಿ ನೀಡಬೇಕು ಎಂದು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಜಿಸಿಎ)ಗೆ ಪ್ರಸ್ತಾವನೆ ಸಲ್ಲಿಸಿದೆ.
ಇದರ ಭಾಗವಾಗಿ, ಕೊವ್ಯಾಕ್ಸಿನ್ ಲಸಿಕೆಯ ಎರಡನೇ ಮತ್ತು ಮೂರನೇ (ಅಂತಿಮ) ಪ್ರಯೋಗಗಳನ್ನು ಮಾಡಲು ಡಿಸಿಜಿಐಗೆ ಭಾರತ್ ಬಯೋಟೆಕ್ ಅನುಮತಿ ಕೋರಿದೆ. ಈ ಸಂಬಂಧ ಭಾರತ್ ಬಯೋಟೆಕ್ ಏಪ್ರಿಲ್ 29ರಂದು ಅರ್ಜಿಯನ್ನೂ ಸಲ್ಲಿಸಿದೆ ಎಂದು ತಿಳಿದು ಬಂದಿದೆ.
ಪ್ರಯೋಗದ ಅಂತಿಮ ಹಂತದ ಭಾಗವಾಗಿ, ಲಸಿಕೆ ಸುರಕ್ಷತೆ, ಪ್ರತಿಕೂಲ ಪರಿಣಾಮಗಳು ಮತ್ತು ರೋಗನಿರೋಧಕ ಶಕ್ತಿಯಂತಹ ವಿಷಯಗಳ ಕುರಿತು ಭಾರತ್ ಬಯೋಟೆಕ್ ಸ್ವಯಂಸೇವಕರನ್ನು ಹುಡುಕುತ್ತಿದೆ. ಅಂತಿಮ ಪ್ರಯೋಗಗಳು ದೇಶಾದ್ಯಂತ 6 ಸ್ಥಳಗಳಲ್ಲಿ ನಡೆಸುವ ಸಾಧ್ಯತೆಯಿದೆ. ಇದಲ್ಲದೇ, ಎರಡನೇ ಮತ್ತು ಮೂರನೇ ಪ್ರಯೋಗಗಳನ್ನು ದೆಹಲಿ ಏಮ್ಸ್ ಮತ್ತು ಪಾಟ್ನಾ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಡೆಸಲಾಗುವುದು ಎಂದು ಕಂಪನಿ ಹೇಳಿದೆ.
ಪ್ರಸ್ತುತ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್ ಆಗಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ವಿತರಿಸಲಾಗುತ್ತಿದೆ. ಎರಡನೇ ಡೋಸ್ ತೆಗೆದುಕೊಂಡ ನಂತರ ಒಂಬತ್ತು ತಿಂಗಳು ಪೂರೈಸಿದವರಿಗೆ ಮಾತ್ರ ಬೂಸ್ಟರ್ ಡೋಸ್ ನೀಡಲಾಗುತ್ತಿದೆ.
ಓದಿ: ವಲಸಿಗರಿಗೆ ಕೆಲಸದ ಅನುಮತಿ ಕಾರ್ಡ್ಗಳ ಅವಧಿ ವಿಸ್ತರಿಸಿದ ಅಮೆರಿಕ ಸರ್ಕಾರ