ನವದೆಹಲಿ : ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರೋಧಿಸಿ ರೈತರು ದೇಶಾದ್ಯಂತ ಭಾರತ್ ಬಂದ್ಗೆ ಕರೆ ನೀಡಿದ್ದಾರೆ. ಆದರೆ, ನೀರಸ ಪ್ರಕ್ರಿಯೆ ವ್ಯಕ್ತವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿ ಮೆಟ್ರೋ ರೈಲು ನಿಗಮ ಪಂಡಿತ್ ರಾಮ್ ಶರ್ಮಾ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರ ಬಂದ್ ಮಾಡಿದೆ. ಭದ್ರತಾ ದೃಷ್ಟಿಯಿಂದ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.
-
#WATCH | Some agitating farmers, at Ghazipur border, ask Delhi Congress chief Anil Chaudhary to leave from their site of protest where he had come to join them. Farmers organisations have called a Bharat Bandh today over the three farm laws. pic.twitter.com/jJ7JH1MQ3s
— ANI UP (@ANINewsUP) September 27, 2021 " class="align-text-top noRightClick twitterSection" data="
">#WATCH | Some agitating farmers, at Ghazipur border, ask Delhi Congress chief Anil Chaudhary to leave from their site of protest where he had come to join them. Farmers organisations have called a Bharat Bandh today over the three farm laws. pic.twitter.com/jJ7JH1MQ3s
— ANI UP (@ANINewsUP) September 27, 2021#WATCH | Some agitating farmers, at Ghazipur border, ask Delhi Congress chief Anil Chaudhary to leave from their site of protest where he had come to join them. Farmers organisations have called a Bharat Bandh today over the three farm laws. pic.twitter.com/jJ7JH1MQ3s
— ANI UP (@ANINewsUP) September 27, 2021
ಹರಿಯಾಣ-ದೆಹಲಿಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮಕೈಗೊಳ್ಳಲಾಗಿತ್ತು. ಇದರ ಜೊತೆಗೆ ದೆಹಲಿಯಿಂದ ಕತ್ರಾಗೆ ತೆರಳುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇರಿ ಅನೇಕ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.
-
#WATCH | Karnataka: Several organizations carried out a rally from Bengaluru Town Hall area to Mysore bank circle to observe Bharat Bandh today against 3 farm laws pic.twitter.com/2Efp159Bi9
— ANI (@ANI) September 27, 2021 " class="align-text-top noRightClick twitterSection" data="
">#WATCH | Karnataka: Several organizations carried out a rally from Bengaluru Town Hall area to Mysore bank circle to observe Bharat Bandh today against 3 farm laws pic.twitter.com/2Efp159Bi9
— ANI (@ANI) September 27, 2021#WATCH | Karnataka: Several organizations carried out a rally from Bengaluru Town Hall area to Mysore bank circle to observe Bharat Bandh today against 3 farm laws pic.twitter.com/2Efp159Bi9
— ANI (@ANI) September 27, 2021
ಉತ್ತರ ಪ್ರದೇಶ-ದೆಹಲಿ ಮಾರ್ಗದಲ್ಲಿ ಸಂಚಾರ ದಟ್ಟಣೆ
ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಕಾರಣ ರಾಷ್ಟ್ರ ರಾಜಧಾನಿಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ದೆಹಲಿಯ ಗಡಿ ಭಾಗಗಳಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದರಿಂದ ವಾಹನ ಸವಾರರು ಇನ್ನಿಲ್ಲದ ತೊಂದರೆ ಅನುಭವಿಸುವಂತಾಯಿತು.
ಇಂದಿನ ಭಾರತ್ ಬಂದ್ಗೆ 500ಕ್ಕೂ ಅಧಿಕ ಸಂಘಟನೆಗಳು, 15 ಕಾರ್ಮಿಕ ಸಂಘಟನೆ, ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ. ದೆಹಲಿ ಗಡಿಯ ಗುರುಗಾಂವ್, ನೋಯ್ಡಾ ಪ್ರದೇಶಗಳಲ್ಲಿ ವಾಹನ ಸಂಚಾರ ದಟ್ಟಣೆ ಕಂಡು ಬಂದಿದ್ದು, ಉತ್ತರಪ್ರದೇಶದಿಂದ ಗಾಜಿಪುರ್ಗೆ ತೆರಳುವ ಸಂಚಾರದಲ್ಲೂ ಅಸ್ತವ್ಯಸ್ಥವಾಯಿತು.
ಇದನ್ನೂ ಓದಿರಿ: ಗರ್ಭಿಣಿ ಮೇಲೆ ಅತ್ಯಾಚಾರವೆಸಗಿದ ಕಾಮುಕರು, ರೈಲ್ವೆ ಟ್ರ್ಯಾಕ್ ಮೇಲೆ ಎಸೆದು ಪರಾರಿ
ತಮಿಳುನಾಡಿನ ಚೆನ್ನೈನ ಅಣ್ಣಾ ಸಲೈ ಪ್ರದೇಶದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಸಂಘರ್ಷ ನಡೆದಿದೆ. ರೈತರ ಹೋರಾಟಕ್ಕೆ ಪ್ರಮುಖವಾಗಿ ತಮಿಳುನಾಡು, ಛತ್ತೀಸ್ಗಢ, ಕೇರಳ, ಪಂಜಾಬ್, ಜಾರ್ಖಂಡ್ ಹಾಗೂ ಆಂಧ್ರಪ್ರದೇಶ ಸರ್ಕಾರದಿಂದಲೂ ಬೆಂಬಲ ವ್ಯಕ್ತವಾಗಿದೆ.