ETV Bharat / bharat

'ನಾನು 2 ತಿಂಗಳ ಗರ್ಭಿಣಿ, ಅಪ್ಪ ನನ್ನನ್ನು ಕೊಲ್ಲಲು ಬಯಸಿದ್ದಾರೆ, ಓಡಿಹೋಗಿ ಮದುವೆಯಾಗಿರುವೆ' - ಮನೆಯಿಂದ ಓಡಿ ಹೋದ ಲವರ್ಸ್​

ಕುಟುಂಬಸ್ಥರ ಭಯದಲ್ಲಿ ಮನೆಯಿಂದ ಓಡಿ ಹೋಗಿರುವ ಜೋಡಿವೊಂದು ಇದೀಗ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ.

GIRL VIDEO VIRAL AFTER MARRIAGE
GIRL VIDEO VIRAL AFTER MARRIAGE
author img

By

Published : Apr 26, 2022, 8:41 PM IST

ಪಾಟ್ನಾ(ಬಿಹಾರ): ಬಿಹಾರದ ಬೆಟ್ಟಿಯಾ ಜಿಲ್ಲೆಯಲ್ಲಿ ವಾಸವಾಗಿದ್ದ ಹುಡುಗಿಯೋರ್ವಳು ಕುಟುಂಬಸ್ಥರ ವಿರೋಧದ ನಡುವೆ ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ಮದುವೆ ಮಾಡಿಕೊಂಡಿದ್ದು, ಇದರ ಬೆನ್ನಲ್ಲೇ ವಿಡಿಯೋ ತುಣುಕೊಂದನ್ನು ಹರಿಬಿಟ್ಟಿದ್ದಾಳೆ. ನಮ್ಮಿಬ್ಬರ ನಡುವೆ ಬಹಳ ದಿನಗಳಿಂದ ಪ್ರೇಮ ಸಂಬಂಧವಿತ್ತು. ಇದೀಗ ನಾನು ಎರಡು ತಿಂಗಳ ಗರ್ಭಿಣಿಯಾಗಿದ್ದೇನೆ. ನನ್ನ ಕುಟುಂಬದ ಸದಸ್ಯರು ಕೊಲ್ಲಲು ಪ್ರಯತ್ನಿಸಿದ್ದರಿಂದ, ನಾನು ಪ್ರೀತಿಸುತ್ತಿದ್ದ ಗೆಳೆಯನೊಂದಿಗೆ ಓಡಿ ಹೋಗಿ ಮದುವೆ ಮಾಡಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

ಮನೆಯಿಂದ ಓಡಿ ಹೋದ ಲವರ್​ಗಳಿಂದ ವಿಡಿಯೋ

ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ದೇವಸ್ಥಾನದಲ್ಲಿ ನಾವು ಈಗಾಗಲೇ ಮದುವೆ ಮಾಡಿಕೊಂಡಿದ್ದೇವೆ. ಎರಡು ಲಕ್ಷ ರೂಪಾಯಿ ಹಾಗೂ ಚಿನ್ನಾಭರಣಗಳೊಂದಿಗೆ ಮನೆಯಿಂದ ಓಡಿ ಹೋಗಿದ್ದೇನೆಂದು ನನ್ನ ಕುಟುಂಬದ ಸದಸ್ಯರು ಆರೋಪ ಮಾಡಿದ್ದಾರೆ. ಆದರೆ, ಇದು ಸತ್ಯಕ್ಕೆ ದೂರವಾಗಿದೆ. ನಾನು ಪೊಲೀಸ್ ಠಾಣೆಗೆ ಬರಲು ಸಿದ್ಧವಾಗಿದ್ದೇನೆ. ಅಲ್ಲಿ ಎಲ್ಲ ಸತ್ಯವನ್ನೂ ಹೇಳುತ್ತೇನೆ. ನಾನು ಪ್ರೀತಿಸುತ್ತಿರುವ ಹುಡುಗನೊಂದಿಗೆ ಬದುಕುತ್ತೇನೆ. ಅತನೊಂದಿಗೆ ಸಾಯುತ್ತೇನೆ ಎಂದು ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: 10 ಸಾವಿರ ಕೇಳಿದ ಆಂಬ್ಯುಲೆನ್ಸ್‌ ಚಾಲಕ; ಮಗನ ಶವ ಹೊತ್ತು ಬೈಕ್​ನಲ್ಲೇ 90 ಕಿಮೀ ಸಾಗಿದ ಬಡಪಾಯಿ ತಂದೆ!

ಬಿಹಾರದ ಭಾರತಪಟ್ಟಿ ಗ್ರಾಮದ ಕಾಜಲ್ ಹಾಗೂ ಗುಲ್ತೇನಿ ಯಾದವ್​ ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದಾದ ಬಳಿಕ ಇಬ್ಬರು ಮನೆಯಿಂದ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನವಲಪುರ ಪೊಲೀಸ್ ಠಾಣೆಯಲ್ಲಿ ಹುಡುಗಿಯ ತಂದೆ ದೂರು ದಾಖಲು ಮಾಡಿದ್ದು, ನನ್ನ ಮಗಳಿಗೆ ಆಮಿಷವೊಡ್ಡಿ ಕರೆದುಕೊಂಡು ಹೋಗಿದ್ದಾನೆಂದು ಪ್ರಕರಣ ದಾಖಲು ಮಾಡಿದ್ದಾರೆ.

ಇದರ ಮಧ್ಯೆ ಹುಡುಗಿ ಈ ವಿಡಿಯೋ ವೈರಲ್​ ಮಾಡಿದ್ದು, ತಾನು ಇಷ್ಟಪಟ್ಟಿರುವ ಯುವಕನೊಂದಿಗೆ ಓಡಿ ಹೋಗಿದ್ದಾಗಿ ಹೇಳಿಕೊಂಡಿದ್ದಾಳೆ. ಇದೀಗ ಇಬ್ಬರಿಗೋಸ್ಕರ ಹುಡುಕಾಟ ಆರಂಭಗೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.