ಚಿತ್ತೋರಗಢ(ರಾಜಸ್ಥಾನ): ಬೆಂಗಳೂರಿನ ಜ್ಯುವೆಲ್ಲರಿ ಶಾಪ್ನಿಂದ ಸುಮಾರು 2 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳು ಚಿತ್ತೋರಗಢ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ ಲೂಟಿ ಮಾಡಿದ ಚಿನ್ನಾಭರಣಗಳು, ಎರಡು ರಿವಾಲ್ವರ್‌ಗಳು ಮತ್ತು ನಾಲ್ಕು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಬೆಂಗಳೂರಿಗೆ ಕರೆತರಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಕಳೆದ ಜೂನ್ 4 ರಂದು ಬೆಂಗಳೂರಿನ ಚಂದಾ ಮಿಲ್ ಗ್ರಾಮದಲ್ಲಿರುವ ರಾಮದೇವ್ ಜ್ಯುವೆಲರ್ಸ್ ಶೋ ರೂಂನಲ್ಲಿ ದರೋಡೆ ನಡೆದಿತ್ತು. ಇದರಲ್ಲಿ ಶೋರೂಂ ಮಾಲೀಕರಿಗೆ ಪಿಸ್ತೂಲ್ ತೋರಿಸಿ 3 ಕೆಜಿ 900 ಗ್ರಾಂ ಚಿನ್ನಾಭರಣ, 13 ಕೆಜಿ 640 ಗ್ರಾಂ ಬೆಳ್ಳಿ ಆಭರಣ ದೋಚಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಓರ್ವ ಆರೋಪಿಯನ್ನು ಹಿಂಬಾಲಿಸಿದ್ದು, ಆತ ಪರಾರಿಯಾಗಿದ್ದ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯನ್ನು ಗುರುತಿಸಿದ ಪೊಲೀಸರು ಈ ಪ್ರಕರಣ ಎಲ್ಲಾ ಆರೋಪಿಗಳು ಇರುವ ಸ್ಥಳವನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಆರೋಪಿಗಳು ಗಡಿನಾಡಿನಲ್ಲಿರುವುದು ಪೊಲೀಸ್ ಸಿಬ್ಬಂದಿಗೆ ತಿಳಿದು ಬಂತು.
ಓದಿ: ವೃದ್ದೆಯ ಕೈ ಕಾಲು ಕಟ್ಟಿ ದರೋಡೆ ಮಾಡಿದ್ದ ನೇಪಾಳಿ ದಂಪತಿ ಸೇರಿ ಮೂವರು ಅರೆಸ್ಟ್
ಕರ್ನಾಟಕ ಪೊಲೀಸರು ಉದಯಪುರ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದರು. ಉದಯಪುರ ಪೊಲೀಸರ ನೆರವಿನೊಂದಿಗೆ ಬೇಗು ಜೋಗನಿಯಾ ಮಾತಾ ಮಾರ್ಗದ ತುಕ್ರೈ ಛೇದಕದಲ್ಲಿ ದಿಗ್ಬಂಧನ ಹಾಕಲಾಗಿತ್ತು. ಕಾರು ಕಂಡ ತಕ್ಷಣ ಆರೋಪಿಗಳಿಗೆ ನಿಲ್ಲಿಸುವಂತೆ ಪೊಲೀಸರು ಸೂಚಿಸಿದ್ದರು. ಆದರೆ ಆರೋಪಿಗಳು ದಿಗ್ಬಂಧನಕ್ಕೆ ಹಾಕಲಾಗಿದ್ದ ಬೇಲಿಯನ್ನು ಮುರಿದು ಮುಂದೆ ಹೋದರು. ಪೊಲೀಸರು ಸುಮಾರು 3 ಕಿ.ಮೀ.ವರೆಗೆ ಖದೀಮರನ್ನು ಬೆನ್ನತ್ತಿದ್ದರು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಇದಕ್ಕೆ ಪೊಲೀಸರೂ ಸಹ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ. ಎನ್‌ಕೌಂಟರ್ ವೇಳೆ ಆರೋಪಿಗಳ ಕಾರು ಹೊಂಡಕ್ಕೆ ಉರುಳಿ ಬಿದ್ದಿದೆ. ಈ ವೇಳೆ ಕಾರಿನಿಂದ ಇಳಿದ ಆರೋಪಿಗಳು ಹೊಲದಲ್ಲಿ ಓಡಲಾರಂಭಿಸಿದರು. ಈ ವೇಳೆ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದವರು ಪೊಲೀಸರ ಸಹಾಯಕ್ಕೆ ದೌಡಾಯಿಸಿದರು. ಕೆಲಸಗಾರರ ಸಹಾಯದಿಂದ ಪೊಲೀಸರು ನಾಲ್ವರು ಆರೋಪಿಗಳನ್ನು ಹಿಡಿದರು.
ಬೇಗಂನ ಉಪ ಪೊಲೀಸ್ ವರಿಷ್ಠಾಧಿಕಾರಿ ರತ್ನರಾಮ್ ದೇವಸಿ ಕೂಡ ಸ್ಥಳಕ್ಕಾಗಮಿಸಿ ಘಟನೆಯ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಉನ್ನತ ಅಧಿಕಾರಿಗಳಿಗೆ ತಿಳಿಸಿದರು. ದರೋಡೆಕೋರರನ್ನು ದೇವರಾಂ ಚೌಧರಿ, ಪಾಲಿ ಜಿಲ್ಲೆಯ ಅನಿಲ್ ಮೇಘವಾಲ್, ಜೋಧ್‌ಪುರದ ರಾಮ್ ಸಿಂಗ್ ಮತ್ತು ಮೌಂಟ್ ಅಬುವಿನ ರಾಹುಲ್ ಸೋಲಂಕಿ ಎಂದು ಗುರುತಿಸಲಾಗಿದೆ. ಈ ದರೋಡೆಯ ಗ್ಯಾಂಗ್ ಲೀಡರ್ ದೇವರಾಂ ಚೌಧರಿ ಎಂದು ಹೇಳಲಾಗಿದೆ. ಇವರ ವಿರುದ್ಧ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಆರೋಪಿಯನ್ನು ಬೆಂಗಳೂರಿಗೆ ಕರೆತರಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಆರೋಪಿಗಳಿಂದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಎರಡು ರಿವಾಲ್ವರ್‌ಗಳು ಮತ್ತು ಜೀವಂತ ಕಾಟ್ರಿಡ್ಜ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.