ETV Bharat / bharat

ಪಶ್ಚಿಮ ಬಂಗಾಳದಲ್ಲಿ 4ನೇ ಹಂತದ ಮತದಾನ: ಬೆ. 11 ಗಂಟೆವರೆಗೆ ಶೇ.16.65ರಷ್ಟು ವೋಟಿಂಗ್​ - ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಪ್ರಕ್ರಿಯೆ ಚುರುಕುಗೊಂಡಿದ್ದು, 7 ಗಂಟೆಯಿಂದ 11 ಗಂಟೆವರೆಗೆ ಶೇ. 16.65ರಷ್ಟು ಮತದಾನವಾಗಿದೆ.

Bengal polls phase 4
ಪಶ್ಚಿಮ ಬಂಗಾಳದಲ್ಲಿ 4 ನೇ ಹಂತದ ಮತದಾನ ಆರಂಭ
author img

By

Published : Apr 10, 2021, 7:59 AM IST

Updated : Apr 10, 2021, 12:08 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದ್ದು, ಬೆ.11 ಗಂಟೆವರೆಗೆ ಶೇ. 16.65ರಷ್ಟು ಮತದಾನವಾಗಿದೆ.

ನಾಲ್ಕನೇ ಹಂತದ ಚುನಾವಣೆಗೆ, ಕೂಚ್ ಬೆಹಾರ್, ಅಲಿಪುರ್ದುರ್, ದಕ್ಷಿಣ 24 ಪರಗಣ, ಹೌರಾ ಮತ್ತು ಹೂಗ್ಲಿ ಈ ಐದು ಜಿಲ್ಲೆಗಳಲ್ಲಿ 44 ಕ್ಷೇತ್ರಗಳಿಗೆ 373 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಈ ಹಂತದಲ್ಲಿ ಒಟ್ಟು 1,15,81,022 ಮತದಾರರು ಮತ ಚಲಾಯಿಸಲಿದ್ದಾರೆ. ಇಂದಿನ ಹಂತದಲ್ಲಿ 12,361 ಮುಖ್ಯ ಮತ್ತು 3,579 ಸಹಾಯಕ ಮತಗಟ್ಟೆಗಳು ಸೇರಿದಂತೆ ಒಟ್ಟು 15,940 ಮತಗಟ್ಟೆಗಳಲ್ಲಿ ವೋಟಿಂಗ್​ ನಡೆಯಲಿದೆ. ಚುನಾವಣೆ ಹಿನ್ನೆಲೆ ಎಲ್ಲ ಕಡೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

2016 ರಲ್ಲಿ ಪಶ್ಚಿಮ ಬಂಗಾಳದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜಯ ಗಳಿಸಿದ್ದ ಭಬಾನಿಪುರ ಕ್ಷೇತ್ರದಲ್ಲಿ ಈ ಬಾರಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರುದ್ರಾನಿಲ್ ಘೋಷ್ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.

ಚುನಾವಣಾ ಕಾವು ಹೆಚ್ಚಿರುವ ಮತ್ತೊಂದು ಕ್ಷೇತ್ರವಾದ ಟೋಲಿಗಂಜ್ ಕ್ಷೇತ್ರದಲ್ಲಿ ಟಿಎಂಸಿ ಶಾಸಕ ಅರೂಪ್ ಬಿಸ್ವಾಸ್ ವಿರುದ್ಧ ಬಿಜೆಪಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರನ್ನು ಕಣಕ್ಕಿಳಿಸಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಸಂಪುಟದಲ್ಲಿ ಸಚಿವರಾಗಿರುವ ಬಿಸ್ವಾಸ್ ಕಳೆದ ಮೂರು ಅವಧಿಗಳಿಂದ ಟೋಲಿಗಂಜ್ ಅಸೆಂಬ್ಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಮತ್ತೊಂದೆಡೆ, ಕೋಲ್ಕತ್ತಾ ಮಾಜಿ ಮೇಯರ್ ಸೋವನ್ ಚಟರ್ಜಿಯವರ ಪತ್ನಿ ರತ್ನ ಚಟರ್ಜಿಯನ್ನು ಟಿಎಂಸಿ ಕಣಕ್ಕಿಳಿಸಿರುವುದರಿಂದ ಪೂರ್ವ ಬೆಹಲಾ ಕ್ಷೇತ್ರ ಕೂಡ ಸಹ ಪ್ರಮುಖ ಕ್ಷೇತ್ರ ಎನಿಸಿಕೊಂಡಿದೆ. ಈ ಬಾರಿ ಬೆಹಲಾ ಪೂರ್ವದಿಂದ ಟಿಕೆಟ್ ನಿರಾಕರಿಸಿದ ಬಳಿಕ ಸೋವನ್ ಬಿಜೆಪಿ ತೊರೆದು ಟಿಎಂಸಿ ಸೇರಿದ್ದಾರೆ. ಪೂರ್ವ ಬೆಹಲಾ ಕ್ಷೇತ್ರದಿಂದ ಬಿಜೆಪಿಯು ನಟ ಪಯಾಲ್ ಸರ್ಕಾರ್ ಅವರನ್ನು ಕಣಕ್ಕಿಳಿಸಿದೆ.

ಪಶ್ಚಿಮ ಬೆಹಲಾ ಚಟರ್ಜಿ ವರ್ಸಸ್ ಚಟರ್ಜಿ: ಈ ಕ್ಷೇತ್ರವನ್ನು 20 ವರ್ಷಗಳಿಂದ ರಾಜ್ಯ ಶಿಕ್ಷಣ ಸಚಿವ ಡಾ.ಪಾರ್ಥ ಚಟರ್ಜಿ ಪ್ರತಿನಿಧಿಸಿದ್ದಾರೆ. ಈಗ, ಪಾರ್ಥ ಅವರು ಐದನೇ ಅವಧಿಗೆ ವಿಧಾನಸಭೆ ಪ್ರವೇಶಿಸಲು ಮುಂದಾಗಿದ್ದು, ಅವರ ವಿರುದ್ಧ ಬಿಜೆಪಿಯು ನಟ ಶ್ರಬಂತಿ ಚಟರ್ಜಿಯನ್ನು ಅಖಾಡಕ್ಕಿಳಿಸಿದೆ.

ವಿಧಾನಸಭಾ ಚುನಾವಣೆಯ ಐದನೇ ಹಂತ ಏಪ್ರಿಲ್ 17 ರಂದು ನಡೆಯಲಿದೆ. ಮತ ಎಣಿಕೆ ಮೇ 2 ರಂದು ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ಅಂದೇ ನಿರ್ಧಾರವಾಗಲಿದೆ.

Last Updated : Apr 10, 2021, 12:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.