ಲಾವ್ಪುರ( ಪಶ್ಚಿಮ ಬಂಗಾಳ): ಲಾವ್ಪುರದ ಬಿಜೆಪಿ ಅಭ್ಯರ್ಥಿ ಬಿಸ್ವಾಜಿತ್ ಸಹಾ ತಮ್ಮ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಆದರೆ ಅವರಿಗೆ ಪ್ರಚಾರಕ್ಕೆ ಹೋದಲ್ಲೆಲ್ಲ ಶೂ ಮತ್ತು ಚಪ್ಪಲಿಗಳ ಪ್ರದರ್ಶನವಾಗ್ತಿದೆ.
ಟಿಎಂಸಿ ಕಾರ್ಯಕರ್ತರು ತಮಗೆ ಹೀಗೆ ಮಾಡುತ್ತಿದ್ದಾರೆ ಎಂದು ಬಿಸ್ವಾಜಿತ್ ಸಹಾ ಆರೋಪಿಸಿದ್ದಾರೆ. ಅವರು ಪ್ರಚಾರ ಮಾಡುತ್ತಿರುವ ಸ್ಥಳಗಳಲ್ಲಿ ಚಪ್ಪಲಿ ಹಾರಗಳನ್ನ ಎಸೆಯಲಾಗುತ್ತಿದೆ. ಇಲ್ಲವೇ ತೋರಿಸಲಾಗುತ್ತಿದೆ.
ಕ್ಷೇತ್ರದ ಸೋಮದಂಗ್ ಪ್ರದೇಶದಲ್ಲಿ ಈ ತರಹದ ಘಟನೆ ನಡೆದಿದೆ. ಇಷ್ಟೆಲ್ಲಾ ಮಾಡಿದರೂ ಎದೆಗುಂದದೆ ಬಿಜೆಪಿ ಅಭ್ಯರ್ಥಿ ತಮ್ಮ ಪ್ರಚಾರ ಕಾರ್ಯ ಮುಂದುವರೆಸಿದ್ದಾರೆ.