ಬೆಂಗಳೂರು: ನವರತ್ನ ರಕ್ಷಣಾ ಸಾರ್ವಜನಿಕ ವಲಯದ ಉದ್ಯಮ ಭಾರತ್ ಎಲೆಕ್ಟ್ರಿಕಲ್ ಲಿಮಿಟೆಡ್ (ಬಿಇಎಲ್) ಈ ವರ್ಷದ ಅಂದರೆ 2023 ಜುಲೈ ಮತ್ತು ಆಗಸ್ಟ್ನಲ್ಲಿ 3,289 ಕೋಟಿ ಮೊತ್ತದ ಹೊಸ ರಕ್ಷಣ ಮತ್ತು ರಕ್ಷಣೆತ್ತರ ಆರ್ಡರ್ ಅನ್ನು ಪಡೆಯುವ ಮೂಲಕ ಸಾಧನೆ ಮಾಡಿದೆ.
ಉದ್ಯಮದ ವಿವಿಧ ರೀತಿಯ ಎಲೆಕ್ಟ್ರಾನಿಕ್ ಸಾಧನಗಳ ಪೂರೈಕೆಯನ್ನು ಈ ಆರ್ಡರ್ ಹೊಂದಿದೆ. ಇದರಲ್ಲಿ ಕಡಿಮೆ ಮಟ್ಟದ ಲೈಟ್ ವೈಟ್ ರಾಡಾರ್, ಸೋನಾರ್ಸ್, ಐಎಫ್ಎಫ್ ವ್ಯವಸ್ಥೆ, ಸ್ಟಾಟ್ಕೊಮ್ ವ್ಯವಸ್ಥೆ, ಇಒ/ಐಆರ್ ಪೇಲೋಡ್, ಟಿಆರ್ಎಂ/ಡಿಟಿಆರ್ಎಂಗಳು, ಜಾಮರ್, ಎನಕ್ರಿಪ್ಟರ್ಸ್, ಡಾಟಾ ಲಿಂಕ್ ಸಿಸ್ಟಂ, ಫೈರ್ ಕಂಟ್ರೊಲ್ ಸಿಸ್ಟಂ, ಡೈರೆಕ್ಟ್ ಎನರ್ಜಿ ಸಿಸ್ಟಂಗಳಿಗೆ ರಾಡಾರ್, ಸೆಮಿ ರಗ್ಡ್ ಟೆಲಿಫೋನ್ ಎಕ್ಸ್ಚೆಂಜ್, ಸಾಫ್ಟ್ವೇರ್ ಡಿಫೈನ್ಡ್ ರೆಡಿಯೋಗಳು ಮತ್ತು ಇತರ ವಿವಿಧ ರೀತಿಯ ರೇಡಿಯೋ, ಎಲೆಕ್ಟ್ರಾನಿಕ್ ವೊಟಿಂಗ್ ಮೆಷಿನ್, ಎಎಂಸಿ ಮತ್ತು ಬಿಡಿಭಾಗಗಳು ಹೊಂದಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಹಿಂದೂಸ್ತಾನ್ ಶಿಪ್ಯಾರ್ಡ್ ಲಿಮಿಟೆಡ್ (ಎಚ್ಎಸ್ಎಲ್) ನಿಂದ 1,075 ಕೋಟಿ ಮೌಲ್ಯದ ಆರ್ಡರ್ನ ಲೆಟರ್ ಆಫ್ ಇಂಡೆಂಟ್ (ಎಲ್ಒಐ) ಅನ್ನು ಇದು ಒಳಗೊಂಡಿದೆ. ಇದರಲ್ಲಿ ಸಿಎಂಎಸ್, ಕಮ್ಯೂನಿಕೇಷನ್ ಸಿಸ್ಟಂ, ಇಬ್ಲ್ಯೂ ಸಿಸ್ಟಂ ಮತ್ತು ಫ್ಲಿಟ್ ಸಪೋರ್ಟ್ ಶಿಪ್ಸ್ಗೆ ಇತರ ಸೆನ್ಸಾರ್ಗಳ ಪೂರೈಕೆ ಹೊಂದಿದೆ ಎಂದು ಬೆಂಗಳೂರಿನ ಮುಖ್ಯ ಕಚೇರಿಯ ಬಿಇಎಲ್ ತಮ್ಮ ಹೇಳಿಕೆಯಲ್ಲಿ ತಿಳಿಸಿದೆ. ಈ ಅಧಿಕ ಮೌಲ್ಯದ ಆರ್ಡರ್ಗಳು ಸಾರ್ವಜನಿಕ ವಲಯದ ಉದ್ಯಮಕ್ಕೆ ಭವಿಷ್ಯದಲ್ಲಿ ಹೆಚ್ಚು ಅಭಿವೃದ್ಧಿಗೆ ಕಾರಣವಾಗಲಿದೆ.
ಈ ಆರ್ಡರ್ಗಳು 8,091 ಕೋಟಿ ಮೌಲ್ಯದ ಆರ್ಡರ್ಗೆ ಹೆಚ್ಚುವರಿ ಸೇರ್ಪಡೆಯಾಗಿದೆ. ಈಗಾಗಲೇ ಈ 8,091 ಕೋಟಿ ಆರ್ಡರ್ ಅನ್ನು ಸ್ವೀಕರಿಸಲಾಗಿದೆ. ಇದರ ಇತ್ತೀಚಿನ ಬೆಳವಣಿಗೆ ಜೊತೆಗೆ ಬಿಇಎಲ್ ಒಟ್ಟಾರೆಯಾಗಿ 11,380 ಕೋಟಿಯ ಆರ್ಡರ್ ಅನ್ನು 2023-24ರ ಆರ್ಥಿಕ ವರ್ಷದಲ್ಲಿ ಇಲ್ಲಿಯವರೆಗೆ ಪಡೆದಿದೆ ಎಂದು ವರದಿ ತಿಳಿಸಿದೆ.
ಏನಿದು ಬಿಇಎಲ್: ಭಾರತ ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಮತ್ತುರಕ್ಷಣಾ ಎಲೆಕ್ಟ್ರಾನಿಕ್ ಕಂಪನಿ ಇದಾಗಿದೆ. ಇದು ಏರೋಸ್ಪೆಸ್ ಅಪ್ಲೆಕೇಷನ್ ಮತ್ತು ಪ್ರಾಥಮಿಕ ಸುಧಾರಿತ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ತಯಾರಿಸುತ್ತದೆ. ಭಾರತ ರಕ್ಷಣಾ ಸಚಿವಾಲಯದ 9 ಸಾರ್ವಜನಿಕ ವಲಯದ ಉದ್ಯಮದಲ್ಲಿ ಬಿಇಎಲ್ ಒಂದಾಗಿದೆ. ಬೆಂಗಳೂರಿನಲ್ಲಿ ಇದರ ಮುಖ್ಯ ಕಚೇರಿ ಇದೆ. (ಪಿಟಿಐ)
ಇದನ್ನೂ ಓದಿ: 450 ಎಲೆಕ್ಟ್ರಿಕ್ ಬಸ್ಗಳ ಸಂಚಾರಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಿದ್ಧತೆ