ETV Bharat / bharat

ದೇಶದ ಆಂತರಿಕ ವಿಷಯಗಳ ಬಗ್ಗೆ ಕಾಮೆಂಟ್​ ಮಾಡುವ ಮುನ್ನ ಯೋಚಿಸಿ: ಎಂಇಎ - ವಿದೇಶಾಂಗ ಸಚಿವಾಲಯ

ಭಾರತದ ಸಂಸತ್ತು, ಪೂರ್ಣ ಚರ್ಚೆ ಮತ್ತು ಚರ್ಚೆಯ ನಂತರ, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸುಧಾರಣಾವಾದಿ ಶಾಸನವನ್ನು ಜಾರಿಗೆ ತಂದಿತು. ಆದರೆ ವಿದೇಶಿ ವ್ಯಕ್ತಿಗಳು ರೈತರ ಪ್ರತಿಭಟನೆಗಳಲ್ಲಿ ಮೂಗು ತೂರಿಸಬಾರದು ಎಂದು ಎಂಇಎ ಎಚ್ಚರಿಸಿದೆ.

MEA
ವಿದೇಶಾಂಗ ಸಚಿವಾಲಯ
author img

By

Published : Feb 3, 2021, 1:16 PM IST

ನವದೆಹಲಿ: ಒಂದು ದೇಶದ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವ ಮುನ್ನ ಸತ್ಯವನ್ನು ಕಂಡುಹಿಡಿಯಬೇಕು ಹಾಗೂ ಸಮಸ್ಯೆಗಳ ಬಗ್ಗೆ ಸರಿಯಾದ ತಿಳಿವಳಿಕೆಯನ್ನು ಇಟ್ಟುಕೊಂಡು ಪ್ರತಿಕ್ರಿಯಿಸಬೇಕು ಎಂದು ವಿದೇಶಾಂಗ ಸಚಿವಾಲಯವು ಒತ್ತಾಯಿಸಿದೆ.

ಸಂವೇದನಾಶೀಲ ಸಾಮಾಜಿಕ ಮಾಧ್ಯಮದ ವೇದಿಕೆಯಲ್ಲಿ ಹ್ಯಾಶ್‌ಟ್ಯಾಗ್‌ಗಳು ಮತ್ತು ಕಾಮೆಂಟ್‌ಗಳು ಮಾಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಸೆಲೆಬ್ರಿಟಿಗಳು ಇಂತಹ ವಿಷಯಗಳನ್ನು ಪ್ರಕಟಿಸುವುದು ಸಮಂಜಸವಲ್ಲ ಎಂದು ಇತ್ತೀಚಿನ ಪಾಪ್​ ಗಾಯಕಿಯು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ವಿಚಾರವಾಗಿ ತಿಳಿಸಿದೆ.

ಭಾರತದ ಸಂಸತ್ತು, ಸಂಪೂರ್ಣ ಚರ್ಚೆ ನಂತರವೇ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸುಧಾರಣಾವಾದಿ ಶಾಸನವನ್ನು ಜಾರಿಗೆ ತಂದಿತು. ಈ ಸುಧಾರಣೆಗಳು ವಿಸ್ತೃತ ಮಾರುಕಟ್ಟೆ ಪ್ರವೇಶವನ್ನು ನೀಡುತ್ತದೆ ಹಾಗೂ ರೈತರಿಗೆ ಹೆಚ್ಚಿನ ಕಾರ್ಯಕ್ಷಮತೆಯನ್ನೂ ಒದಗಿಸುತ್ತವೆ. ಆದರೆ, ವಿದೇಶಿ ವ್ಯಕ್ತಿಗಳು ರೈತರ ಪ್ರತಿಭಟನೆಗಳಲ್ಲಿ ಮೂಗು ತೂರಿಸಬಾರದು ಎಂದು ಎಂಇಎ ಎಚ್ಚರಿಸಿದೆ.

ಇದನ್ನೂ ಓದಿ: ರೈತರ ಪ್ರತಿಭಟನೆಗೆ ಪಾಪ್​ ತಾರೆ ರಿಹಾನ್ನಾ ಬೆಂಬಲ... ಆಕೆ ಫೂಲ್ ಎಂದ ಕಂಗನಾ!

ಕೆಲ ಪಟ್ಟಭದ್ರ ಹಿತಾಸಕ್ತಿ ಗುಂಪುಗಳು ಭಾರತದ ವಿರುದ್ಧ ಅಂತಾರಾಷ್ಟ್ರೀಯ ಬೆಂಬಲವನ್ನು ಸಜ್ಜುಗೊಳಿಸಲು ಪ್ರಯತ್ನಿಸಿವೆ. ಅಂತಹ ಅಂಶಗಳಿಂದ ಪ್ರಚೋದಿಸಲ್ಪಟ್ಟ ವಿಷಯಕ್ಕೆ ಮಹಾತ್ಮ ಗಾಂಧಿ ಪ್ರತಿಮೆಯ ಅಪವಿತ್ರವೇ ಒಂದು ನಿದರ್ಶನ. ಇದು ಭಾರತವನ್ನು ಸೇರಿ ಎಲ್ಲೆಡೆಯ ಸುಸಂಸ್ಕೃತ ಸಮಾಜಕ್ಕೆ ಅತ್ಯಂತ ತೊಂದರೆಯಾಗಿದೆ ಎಂದು ತಿಳಿಸಿದೆ.

ಜನವರಿ 26 ರಂದು ನಡೆದ ಘಟನೆ ಅದಕ್ಕೆ ಮತ್ತೊಂದು ಅತೀವ ಸಾಕ್ಷಿ ಎಂದು ರೈತರ ಪ್ರತಿಭಟನೆಯ ಬಗ್ಗೆ ವಿದೇಶಿ ವ್ಯಕ್ತಿಗಳು ಹಾಗೂ ಕೆಲ ಘಟಕಗಳು ಇತ್ತೀಚೆಗೆ ಮಾಡಿದ ಕಾಮೆಂಟ್‌ಗಳ ಕುರಿತು ಎಂಇಎ ಆಕ್ರೋಶ ವ್ಯಕ್ತಪಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.