ETV Bharat / bharat

ಚೀನಾ ಸೇನೆಯ ಆಕ್ರಮಣ ಯತ್ನಗಳಿಗೆ ತಕ್ಕ ಪ್ರತ್ಯುತ್ತರ: ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ

ಲಡಾಖ್ ವಲಯದಲ್ಲಿ ಚೀನಾದ ಆಕ್ರಮಣಕಾರಿ ಪ್ರವೃತ್ತಿಗೆ ಭಾರತೀಯ ಸೇನಾಪಡೆಗಳು ದಿಟ್ಟ ಪ್ರತ್ಯುತ್ತರ ನೀಡಲಿವೆ ಎಂದು ಚೀಫ್ ನಾರ್ದರ್ನ್ ಕಮಾಂಡ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ. ಎಲ್‌ಎಸಿಯಲ್ಲಿ ಯಥಾಸ್ಥಿತಿ ಬದಲಾಯಿಸುವ ಚೀನಾ ಪ್ರಯತ್ನಗಳಿಗೆ ಭಾರತದ ಸಶಸ್ತ್ರ ಪಡೆಗಳು ಸೂಕ್ತ ಉತ್ತರ ನೀಡಲಿವೆ ಎಂದು ಅವರು ತಿಳಿಸಿದರು.

Army commander on Ladakh situation
Army commander on Ladakh situation
author img

By

Published : Feb 7, 2023, 7:49 PM IST

ಶ್ರೀನಗರ : ಲಡಾಖ್ ವಲಯದಲ್ಲಿ ಭಾರತ ಮತ್ತು ಚೀನಾ ಸೇನೆಯ ನಡುವಿನ ಬಿಕ್ಕಟ್ಟಿನ ಮಧ್ಯೆ, ಚೀನಾ ಸೇನೆಯ ಯಾವುದೇ ಆಕ್ರಮಣಕ್ಕೆ ತಕ್ಕ ರೀತಿಯ ಪ್ರತ್ಯುತ್ತರ ನೀಡಲು ಸಿದ್ಧ ಎಂದು ಸೇನಾಪಡೆ ಇಂದು ಹೇಳಿದೆ. ಭೌತಿಕ ಗಸ್ತು ಮತ್ತು ತಾಂತ್ರಿಕ ವಿಧಾನಗಳ ಮೂಲಕ ಲಡಾಖ್‌ನಲ್ಲಿ ದೇಶದ ಸಮಗ್ರತೆ ಖಾತ್ರಿ ಪಡಿಸಲಾಗುತ್ತಿದೆ ಎಂದು ಚೀಫ್ ನಾರ್ದರ್ನ್ ಕಮಾಂಡ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.

ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಶ್ರೀನಗರದ ಜಿಒಸಿ ಪ್ರಧಾನ ಕಚೇರಿಯಲ್ಲಿ ನಡೆದ ಉತ್ತರ ಕಮಾಂಡ್ ಇನ್ವೆಸ್ಟಿಟ್ಯೂಟ್​​ ಸಮಾರಂಭದಲ್ಲಿ ಪ್ರಶಂಸನಾ ಪತ್ರ ವಿತರಿಸಿ ಮಾತನಾಡಿದರು. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ಉಗ್ರಗಾಮಿ ವಿರೋಧಿ ಕಾರ್ಯಾಚರಣೆಗಳಲ್ಲಿ ಅಸಾಧಾರಣ ಸಾಧನೆ ತೋರಿದ್ದಕ್ಕಾಗಿ ಕಮಾಂಡರ್ 77 ಸೇನಾ ಬೆಟಾಲಿಯನ್‌ಗಳು ಮತ್ತು ಘಟಕಗಳಿಗೆ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು.

ಯಾವುದೇ ದಾಳಿಗೆ ಪ್ರತ್ಯುತ್ತರ ಕೊಡಲು ಭಾರತೀಯ ಸೇನೆ ಸಮರ್ಥ: ಎಲ್‌ಎಸಿಯಲ್ಲಿ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಚೀನೀ ಪ್ರಯತ್ನಗಳಿಗೆ ಭಾರತೀಯ ಸಶಸ್ತ್ರ ಪಡೆಗಳು ತ್ವರಿತ, ನಿರ್ಭೀತ ಮತ್ತು ಸಂಯೋಜಿತ ಪ್ರತಿಕ್ರಿಯೆ ನೀಡಿವೆ. ಯಾವುದೇ ಪ್ರತಿಕೂಲ ಆಕ್ರಮಣಕಾರಿ ಬದಲಾವಣೆ ಅಥವಾ ಪ್ರಯತ್ನಗಳಿಗೆ ಖಂಡಿತವಾಗಿಯೂ ಸೇನಾಪಡೆಗಳ ಪ್ರಬಲ ಶಕ್ತಿಯನ್ನು ಬಳಸಿ ಉತ್ತರ ನೀಡಲಾಗುವುದು ಅವರು ಹೇಳಿದರು.

ರಾಜತಾಂತ್ರಿಕ ಮತ್ತು ಕಾರ್ಯಾಚರಣೆ ಹಂತಗಳಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿನ (ಎಲ್‌ಎಸಿ) ಪರಿಸ್ಥಿತಿ ಸುಧಾರಿಸುವ ಕ್ರಮಗಳು ಸಹ ಏಕಕಾಲದಲ್ಲಿ ನಡೆಯುತ್ತಿವೆ. ಪೂರ್ವ ಲಡಾಖ್‌ನಲ್ಲಿರುವ ಎಲ್‌ಎಸಿಯಲ್ಲಿ ನಮ್ಮ ಭೌತಿಕ ಗಸ್ತು ಮತ್ತು ತಾಂತ್ರಿಕ ವಿಧಾನಗಳ ಮೂಲಕ ನಾವು ನಿಯಂತ್ರಣ ಹೊಂದಿದ್ದೇವೆ ಎಂದು ಅವರು ತಿಳಿಸಿದರು. ಪ್ರಸ್ತುತ ನಡೆಯುತ್ತಿರುವ ರಷ್ಯಾ ಉಕ್ರೇನ್ ಯುದ್ಧವು ವಿಧ್ವಂಸಕ ಮತ್ತು ಡ್ಯುಯಲ್ ಯೂಸ್ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಅನೇಕ ಪಾಠಗಳನ್ನು ಕಲಿಸಿದೆ ಎಂದು ದ್ವಿವೇದಿ ಹೇಳಿದರು.

ಉಗ್ರರ ಹಾವಳಿ ಪ್ರಾಕ್ಸಿ ಯುದ್ಧ ತಂತ್ರದ ಭಾಗ: ಕಾಶ್ಮೀರದ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, ಕಾಶ್ಮೀರದಲ್ಲಿ ಮಾದಕ ದ್ರವ್ಯ ಭಯೋತ್ಪಾದನೆಯಲ್ಲಿ ಹೆಚ್ಚಳವಾಗಿದೆ. ಇದು ಪ್ರಾಕ್ಸಿ ಯುದ್ಧದ ಹೊಸ ಸಾಧನವಾಗಿದೆ ಎಂದು ಅವರು ಹೇಳಿದರು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಶಾಂತಿಗೆ ಭಂಗ ತರುವ ನಿಟ್ಟಿನಲ್ಲಿ ಡ್ರೋನ್‌ಗಳ ಮೂಲಕ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಕಳುಹಿಸುವ ದ್ವಂದ್ವ ತಂತ್ರವನ್ನು ಬಳಸಲಾಗುತ್ತಿದೆ. ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆಯು ಭಯೋತ್ಪಾದನೆಗೆ ಸಹಾಯ ನೀಡುತ್ತದೆ. ಭದ್ರತಾ ಪಡೆಗಳು ಈ ಪ್ರವೃತ್ತಿ ಕಡಿವಾಣ ಹಾಕಲು ಈಗಾಗಲೇ ಕೌಂಟರ್ ಡ್ರೋನ್ ಕ್ರಮಗಳನ್ನು ಪ್ರಾರಂಭಿಸಿವೆ ಎಂದು ಅವರು ಹೇಳಿದರು. ನಿಯಂತ್ರಣ ರೇಖೆಯ ಉದ್ದಕ್ಕೂ ಪರಿಸ್ಥಿತಿಯು ಸ್ಥಿರವಾಗಿದೆ ಮತ್ತು ಕದನ ವಿರಾಮದ ತಿಳಿವಳಿಕೆಯು ಮುಂದುವರಿಯುತ್ತದೆ ಎಂದು ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ ಭಾರತದ ಅವಿಭಾಜ್ಯ ಅಂಗ: ಪ್ರತಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಗಡಿ ಸಮಸ್ಯೆಯ ಬಗ್ಗೆ ತಕರಾರು ಎತ್ತುವ ಕೆಟ್ಟ ಅಭ್ಯಾಸವನ್ನು ಹೊಂದಿರುವ ಪಾಕಿಸ್ತಾನವು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಭಾರತದಿಂದ ತಕ್ಕ ತಿರುಗೇಟು ಪಡೆದಿದೆ. ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ಕೇಂದ್ರಾಡಳಿತ ಪ್ರದೇಶ ಮತ್ತು ಲಡಾಖ್ ಮತ್ತು ಯಾವಾಗಲೂ ದೇಶದ ಅವಿಭಾಜ್ಯ ಅಂಗವಾಗಿರುತ್ತದೆ ಎಂದು ಭಾರತ ಸೋಮವಾರ ಪ್ರತಿಪಾದಿಸಿದೆ.

ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಗಡಿ ಪ್ರದೇಶಗಳ ಕುರಿತು ಪಾಕಿಸ್ತಾನದ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯಿಸಿದ UN ನಲ್ಲಿನ ಭಾರತೀಯ ಪ್ರತಿನಿಧಿ, ಪಾಕಿಸ್ತಾನದ ಪ್ರತಿನಿಧಿಯು ಏನನ್ನು ನಂಬುತ್ತಾರೆ ಅಥವಾ ಅಪೇಕ್ಷಿಸುತ್ತಾರೆ ಎಂಬುದನ್ನು ಲೆಕ್ಕಿಸದೆ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ ಸಂಪೂರ್ಣ ಕೇಂದ್ರಾಡಳಿತ ಪ್ರದೇಶವು ಯಾವಾಗಲೂ ಭಾರತದ ಅವಿಭಾಜ್ಯ ಇರುತ್ತದೆ ಎಂದರು.

ಇದನ್ನೂ ಓದಿ: ಪರಸ್ಪರ ಕೈಕುಲುಕಿದ ಚೀನಾ ಅಧ್ಯಕ್ಷ, ಪ್ರಧಾನಿ ಮೋದಿ: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.