ETV Bharat / bharat

ಪ್ರವಾಸಿಗರ ಮೇಲೆ ಮುಗಿಬಿದ್ದ ಜೇನುನೊಣಗಳು​; ಇಬ್ಬರು ಸಾವು, ಐವರಿಗೆ ಗಾಯ - ಮೃತ ಗುಲಾಬ್ರಾವ್

ಮಹಾರಾಷ್ಟ್ರ ಚಂದ್ರಾಪುರ ಜಿಲ್ಲೆಯಲ್ಲಿ ಪ್ರವಾಸಿಗರ ಮೇಲೆ ಜೇನುನೊಣಗಳು ದಾಳಿ ಮಾಡಿವೆ.

bee attack
ಜೇನುನೊಣ ಅಟ್ಯಾಕ್
author img

By

Published : Apr 9, 2023, 4:57 PM IST

ಚಂದ್ರಾಪುರ (ಮಹಾರಾಷ್ಟ್ರ): ಪ್ರವಾಸಕ್ಕೆಂದು ಕಾಡಿಗೆ ತೆರಳಿದ್ದ ಜನರ ಮೇಲೆ ಜೇನುನೊಣಗಳು ದಾಳಿ ನಡೆಸಿದ್ದು, ಇಬ್ಬರು ಸಾವನ್ನಪ್ಪಿದ್ದು ಐವರು ಗಾಯಗೊಂಡಿದ್ದಾರೆ. ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಶನಿವಾರ ಮಧ್ಯಾಹ್ನ ಘಟನೆ ನಡೆದಿದೆ. ಮೃತರನ್ನು ನಾಗ್ಪುರ ನಿವಾಸಿಗಳಾದ ಅಶೋಕ್ ವಿಭೀಷಣ ಮೆಂಧೆ (62) ಮತ್ತು ಗುಲಾಬ್ರಾವ್ ಪೋಚೆ (58) ಎಂದು ಗುರುತಿಸಲಾಗಿದೆ. ಗಾಯಾಳುಗಳಲ್ಲಿ ಮಹಿಳೆ ಮತ್ತು 6 ತಿಂಗಳ ಮಗು ಸೇರಿದೆ.

ಚಂದ್ರಾಪುರ ಜಿಲ್ಲೆಯ ತಲೋಧಿ ಬಾಲಾಪುರ ಅರಣ್ಯ ವ್ಯಾಪ್ತಿಯ ಗೋವಿಂದಪುರ ಪ್ರದೇಶದಲ್ಲಿ ಮಧ್ಯಾಹ್ನದ ಸುಮಾರಿಗೆ ಘಟನೆ ನಡೆಯಿತು. ವಿಚಾರ ತಿಳಿದ ಕೂಡಲೇ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಗುಲಾಬ್ರಾವ್ ಎಂಬವರನ್ನು ಪರ್ವತದಿಂದ ಕೆಳಗಿಳಿಸಿ ಆಂಬ್ಯುಲೆನ್ಸ್ ಮೂಲಕ ಕರೆ ತರಲಾಗಿತ್ತು. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಅವರು ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದರು. ಜೇನುನೊಣಗಳ ಕಡಿತದಿಂದ ಅಶೋಕ ಮೆಂಡೆ ಎಂಬವರು ಸ್ಥಳದಲ್ಲೇ ಅಸುನೀಗಿದ್ದರು. ಈ ಹಿಂದೆಯೂ ಇಲ್ಲಿ ಇಂತಹ ಜೇನುನೊಣಗಳ ದಾಳಿ ಪ್ರಕರಣಗಳು ನಡೆದಿವೆ. ಹೀಗಾಗಿ ಪೆರ್ಜಗಡ ಪ್ರದೇಶದಲ್ಲಿ ಅರಣ್ಯ ಇಲಾಖೆ ಮತ್ತು ಪೊಲೀಸರು ಪ್ರವಾಸೋದ್ಯಮಕ್ಕೆ ನಿರ್ಬಂಧ ಹೇರಿದ್ದಾರೆ.

ಇಲ್ಲಿ ಪ್ರವಾಸೋದ್ಯಮಕ್ಕೆ ಅರಣ್ಯ ಇಲಾಖೆ ನಿರಾಕರಿಸಿದರೂ ನಾಗ್ಪುರ ಪ್ರವಾಸಿಗರು ಇಲ್ಲಿಗೆ ಬರುವುದು ಸಾಮಾನ್ಯವಾಗುತ್ತಿದೆ. ಅದರಲ್ಲಿಯೂ ನಾಗ್ಪುರದ ಪ್ರವಾಸಿ ಕಂಪನಿಯೊಂದು ಇಲ್ಲಿನ ಬೆಳಗಿನ ಸೂರ್ಯೋದಯ ಮತ್ತು ರಾತ್ರಿಯ ಶಿಬಿರ, ರಾತ್ರಿ ಪರ್ವತ ಚಾರಣದ ಕಾರಣವೊಡ್ಡಿ ಶಿಬಿರಗಳನ್ನು ಆಯೋಜಿಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಪ್ರದೇಶದಲ್ಲಿ ಹುಲಿ, ಚಿರತೆ, ಕರಡಿ, ಜೇನುನೊಣಗಳಿವೆ. ನಾಲ್ಕು ದಿನದ ಹಿಂದಷ್ಟೇ ಉಮ್ರೆಡ್‌ ಎಂಬಲ್ಲಿ ಕೆಲವರು ಜೇನುನೊಣಗಳ ದಾಳಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಇದನ್ನೂ ಓದಿ: ಕೋವಿಡ್​ ಕೇಸ್ ಮತ್ತೆ​ ಹೆಚ್ಚಳ: ಕಳೆದ 24 ಗಂಟೆಯಲ್ಲಿ 5,357 ಹೊಸ ಪ್ರಕರಣಗಳು ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.