ETV Bharat / bharat

ಕಣ್ಮನ ತಣಿಸುವ ಭಾರತದ ಪುರಾತನ ನಾಟ್ಯ ಪ್ರಕಾರಗಳಿವು.. - ರಾಜ್ಯಗಳನ್ನು ಪ್ರತಿಬಿಂಬಿಸುವ ಅನೇಕ ವಿಶಿಷ್ಟ ನರ್ತನ

ಭಾರತದಲ್ಲಿ ಹಲವು ನೃತ್ಯ ಶೈಲಿಗಳನ್ನು ಕಾಣಬಹುದು. ಇವುಗಳು ದೇಶದ ಪುರಾತನ ಸಾಂಸ್ಕೃತಿಕ ಹಿರಿಮೆಯನ್ನು ಸಾರುತ್ತವೆ. ವಿಶಿಷ್ಟ ಸಂಪ್ರದಾಯ, ದಿರಿಸಿನಲ್ಲಿ ಈ ನಾಟ್ಯಗಳು ನೋಡುಗರ ಕಣ್ಮನ ಸೆಳೆಯುತ್ತವೆ.

the-beautiful-dance-styles-of-india-are-what-is-special

author img

By

Published : Apr 5, 2023, 5:49 PM IST

ವಿವಿಧ ಸಂಸ್ಕೃತಿಗಳ ತವರೂರು ಭಾರತ. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ದೇಶದಲ್ಲಿ ಹಲವು ನೃತ್ಯ ಪ್ರಕಾರಗಳಿದ್ದು, ಪ್ರೇಕ್ಷಕರಲ್ಲಿ ರಸಾನುಭವ ಉಂಟು ಮಾಡುತ್ತವೆ. ವಿವಿಧ ರಾಜ್ಯಗಳನ್ನು ಪ್ರತಿಬಿಂಬಿಸುವ ಅನೇಕ ವಿಶಿಷ್ಟ ನೃತ್ಯ ಪ್ರಕಾರಗಳು ದೇಶದ ಹೆಮ್ಮೆ. ಈ ಪೈಕಿ ಆರು ಸಾಂಪ್ರದಾಯಿಕ ನೃತ್ಯ ಪ್ರಕಾರಗಳನ್ನು ಕ್ಲಾಸಿಕಲ್‌ ಡ್ಯಾನ್ಸಸ್‌ ಎಂದು ಕರೆಯಲಾಗುತ್ತದೆ.

ದೇಶದ ಜನಪದ ನೃತ್ಯದಲ್ಲಿ ದೈಹಿಕ ಚಲನೆಗಳಿಗೆ ಹೆಚ್ಚಿನ ಆದ್ಯತೆ ಕಂಡರೆ, ಸಾಂಪ್ರದಾಯಿಕ ನಾಟ್ಯ ಪ್ರಕಾರಗಳಲ್ಲಿ ಶಿಸ್ತು ಮತ್ತು ದೇವರ ಆರಾಧನೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ವಿವಿಧ ರಾಜ್ಯಗಳಲ್ಲಿರುವ ಪ್ರಮುಖ ನೃತ್ಯ ಪ್ರಕಾರಗಳನ್ನು ನೋಡೋಣ.

ಬಿಹು- ಅಸ್ಸಾಂ: ಈಶಾನ್ಯ ಭಾರತದ ಬಿಹು ನೃತ್ಯದಲ್ಲಿ ಹೆಚ್ಚಾಗಿ ಕೈ ಚಲನೆ ಇರುತ್ತದೆ. ಕಲಾವಿದರು ಎರಡೂ ಕೈಗಳನ್ನು ರಿದಂಗೆ ತಕ್ಕಂತೆ ಚಲನೆ ಮಾಡುತ್ತಾರೆ. ಅಸ್ಸಾಂನ ಸಾಂಪ್ರದಾಯಿಕ ಉಡುಗೆ ಮತ್ತು ಆಭರಣಗಳನ್ನು ಧರಿಸುವ ನೃತ್ಯಗಾರರು ಕಣ್ಸೆಳೆಯುತ್ತಾರೆ. ಇಲ್ಲಿ ರಂಗಲಿ ಬಿಹುವನ್ನು ವಸಂತ ಋತುವಿನಲ್ಲಿ ಆಚರಿಸುತ್ತಾರೆ. ಈ ನೃತ್ಯಕ್ಕೆ ಅಲ್ಲಿನ ಸಾಂಪ್ರದಾಯಿಕ ಸಂಗೀತವನ್ನೇ ಬಳಸುವರು.

ಲಾವಣಿ- ಮಹಾರಾಷ್ಟ್ರ: ಮಹಾರಾಷ್ಟ್ರದ ಜನಪದ ಪ್ರಕಾರ ಲಾವಣಿ. ಮರಾಠ ಸಾಮ್ರಾಜ್ಯದಲ್ಲಿ ಈ ನೃತ್ಯ ಪ್ರಕಾರ ಹುಟ್ಟಿಕೊಂಡಿದೆ ಎನ್ನಲಾಗಿದೆ. ಸಾಂಪ್ರದಾಯಿಕ ಸಂಗೀತ ಮತ್ತು ಕಥೆ ಹೇಳುವ ಮೂಲಕ ಈ ನರ್ತನವನ್ನು ಮಹಿಳೆಯರು ಆಕರ್ಷಕವಾಗಿ ಪ್ರದರ್ಶಿಸುತ್ತಾರೆ. ಲಾವಣ್ಯ ಎಂಬ ಶಬ್ದದಿಂದ ಲಾವಣಿ ಬಂದಿದ್ದು, ಇದರ ಅರ್ಥ ಸೌಂದರ್ಯ ಎಂದಾಗಿದೆ.

ಗೂಮರ್​- ರಾಜಸ್ಥಾನ್​: ರಾಜಸ್ಥಾನದ ಈ ನೃತ್ಯದ ವೈಶಿಷ್ಟ್ಯತೆ ಎಂದರೆ ರಿದಂಗೆ ತಕ್ಕಂತೆ ಕುಣಿತದ ಜೊತೆಗೆ ಮಹಿಳೆಯರ ಉಡುಗೆ ತೊಡುಗೆ. ಕಣ್ಣು ಕೋರೈಸುವ ಆಭರಣ ಮತ್ತು ದಿರಿಸಿನೊಂದಿಗೆ ಮಾಡುವ ಈ ನೃತ್ಯ ವೃತ್ತಾಕಾರದಲ್ಲಿ ಸುತ್ತುವುದನ್ನು ಕಾಣಬಹುದು.

ರೊಫ್​- ಕಾಶ್ಮೀರ: ರೊಫ್​ ಎಂಬುದು ಕಾಶ್ಮೀರದ ಸಾಂಪ್ರದಾಯಿಕ ನೃತ್ಯವಾಗಿದ್ದು, ಮಹಿಳೆಯರು ಪ್ರದರ್ಶಿಸುತ್ತಾರೆ. ಕಾಶ್ಮೀರಿಗಳು ಹಬ್ಬ ಮತ್ತು ಇನ್ನಿತರ ಪ್ರಮುಖ ಸಮಾರಂಭಗಳಲ್ಲಿ ಇದನ್ನು ಪ್ರದರ್ಶಿಸುತ್ತಾರೆ.

ಗರ್ಭಾ- ಗುಜರಾತ್​​: ನವರಾತ್ರಿ ಸಮಯದಲ್ಲಿ ದುರ್ಗಾ ಮಾತೆಗೆ ನಮಿಸುವ ಸಾಂಪ್ರದಾಯಿಕ ನೃತ್ಯವಿದು. ಗುಜರಾತಿ ಸಂಗೀತದೊಂದಿಗೆ ಈ ನಾಟ್ಯ ಕಣ್ಮನ ಸೆಳೆಯುತ್ತದೆ.

ಭಂಗ್ರ/ ಗಿಡ್ಡ- ಪಂಜಾಬ್​: ಪಂಜಾಬ್​ನ ಭಂಗ್ರ ದೇಶ, ಭಾಷೆೆಯ ಗಡಿ ಮೀರಿ ಖ್ಯಾತಿ ಪಡೆದಿದೆ. ಡೋಲ್​ ಸದ್ದಿಗೆ ಪಂಜಾಬಿ ದಿರಿಸಿನಲ್ಲಿ ಹಬ್ಬ- ಹರಿದಿನದಲ್ಲಿ ಈ ಪ್ರದರ್ಶನ ನಡೆಯುತ್ತದೆ.

ಒಡಿಸ್ಸಿ- ಒಡಿಶಾ: ಮುದ್ರೆ ಮತ್ತು ಸನ್ಹೆ ಈ ನೃತ್ಯದ ಪ್ರಮುಖ ಅಂಶ. ಹಿಂದೂ ದೇವತೆಗಳ ಪುರಾಣಗಳನ್ನು ಅದರಲ್ಲೂ ಶಿವ ಮತ್ತು ಸೂರ್ಯ ದೇವತೆಗಳನ್ನು ನೃತ್ಯ ಪ್ರಕಾರದಲ್ಲಿ ಕಾಣಬಹುದು.

ಕೂಚಿಪುಡಿ- ಆಂಧ್ರ ಪ್ರದೇಶ: ಆಂಧ್ರ ಪ್ರದೇಶದ ಸಂಪ್ರಾದಾಯಿಕ ನೃತ್ಯ ಶೈಲಿ ಇದಾಗಿದೆ. ಭಾರತದ ಸಾಂಪ್ರದಾಯಿಕ ನೃತ್ಯಗಳಲ್ಲೇ ಕ್ಲಿಷ್ಟಕರವಾದದ್ದು ಎಂದೇ ಹೇಳಲಾಗುತ್ತದೆ. ಇದು ಕೇವಲ ನೃತ್ಯವಲ್ಲ, ದೇವರ ಆರಾಧನೆಯಾಗಿದೆ. ಸಂಪ್ರದಾಯಿಕ ಉಡುಗೆ ಮೂಲಕ ಪವಿತ್ರ ನೀರು ಸಿಂಪಡಿಸುವ ಮೂಲಕ ನೃತ್ಯ ಮಾಡುತ್ತಾರೆ.

ಭರತನಾಟ್ಯ- ತಮಿಳುನಾಡು: ಕರ್ನಾಟಿಕ್ ಸಂಗೀತ ಮಾಧುರ್ಯವನ್ನು ಇದು ಹೊಂದಿದೆ. ಈ ನೃತ್ಯವನ್ನು ಕ್ರಿ.ಪೂ 100ರಲ್ಲೇ ತಮಿಳುನಾಡಿನ ದೇಗುಲದಲ್ಲಿ ಮಹಿಳೆಯರು ಪ್ರದರ್ಶಿಸಿದ್ದರು ಎಂದು ಐತಿಹಾಸಿಕ ಉಲ್ಲೇಖವಿದೆ.

ಇದನ್ನೂ ಓದಿ: ಪ್ರತಿನಿತ್ಯ ಮುಡಿಯಷ್ಟು ಒಣ ಹಣ್ಣು ಸೇವಿಸಿ; ಹೃದಯದ ಸಮಸ್ಯೆ ಕಡಿಮೆಯಾಗುತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.