ETV Bharat / bharat

ಸ್ಟೇಷನ್​ಗೆ ನುಗ್ಗಿ ಪೊಲೀಸರಿಗೆ ಥಳಿತ: ಆರೋಪಿ ಬಿಡುಗಡೆಗೆ ಒತ್ತಾಯ

ಪ್ರಕರಣವೊಂದರ ಆರೋಪಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಪೊಲೀಸ್ ಠಾಣೆಗೆ ನುಗ್ಗಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

ಸ್ಟೇಷನ್​ಗೆ ನುಗ್ಗಿ ಪೊಲೀಸರಿಗೆ ಥಳಿತ
Mob thrashes cops
author img

By

Published : Sep 13, 2022, 2:33 PM IST

ಪರಲಖೆಮುಂಡಿ (ಗಜಪತಿ, ಒಡಿಶಾ): ಒಡಿಶಾದ ಗಜಪತಿ ಜಿಲ್ಲೆಯ ಅಡವಾ ಪೊಲೀಸ್ ಠಾಣೆಗೆ ಸ್ಥಳೀಯರು ನುಗ್ಗಿ ಪೊಲೀಸರಿಗೆ ಥಳಿಸಿದ ಕಾರಣ ಸ್ಥಳದಲ್ಲಿ ಭಾರಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಗಾಂಜಾ ಕಳ್ಳಸಾಗಣೆ ಪ್ರಕರಣದಲ್ಲಿ ಗ್ರಾಮಸ್ಥನ ಬಂಧನವನ್ನು ವಿರೋಧಿಸಿ ಸ್ಥಳೀಯರು ಇಂದು ಬೆಳಗ್ಗೆ ಪೊಲೀಸ್ ಠಾಣೆಗೆ ಘೇರಾವ್ ಹಾಕಿದ್ದರು. ನಿನ್ನೆ ರಾತ್ರಿ ಜಾರನ್‌ಪುರ ಗ್ರಾಮದ ನಿವಾಸಿಯಾಗಿರುವ ಆರೋಪಿಯನ್ನು ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಆದರೆ, ಆತನ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೂಡಲೇ ಆರೋಪಿ ಬಿಡುಗಡೆ ಮಾಡಿ ಪ್ರಕರಣ ಹಿಂಪಡೆಯಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಕೆಲ ಪ್ರತಿಭಟನಕಾರರು ಹಿಂಸಾಚಾರಕ್ಕಿಳಿದು ಪೊಲೀಸ್ ಠಾಣೆಯ ಗೇಟ್ ಮುರಿದು ಕಟ್ಟಡದೊಳಗೆ ನುಗ್ಗಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಪೊಲೀಸ್ ಠಾಣೆಯ ಪೀಠೋಪಕರಣಗಳನ್ನು ಧ್ವಂಸ ಮಾಡಿದ ಪ್ರತಿಭಟನಾಕಾರರು ಕೆಲವು ಪೊಲೀಸ್ ಸಿಬ್ಬಂದಿಯನ್ನು ಥಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: ದಂಡ ವಿಧಿಸಿದ ಪೊಲೀಸರಿಗೆ ಆತ ನೀಡಿದ 'ಶಾಕ್' ಎಂಥಾದ್ದು ಗೊತ್ತಾ..?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.