ಹೈದರಾಬಾದ್: ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಪ್ರಸ್ತುತ ವಿದ್ಯುತ್ ಚಾರ್ಜಿಂಗ್ ಅಗತ್ಯವಿಲ್ಲದ ಅಲ್ಯೂಮಿನಿಯಂ ಬ್ಯಾಟರಿ ಚಾಲಿತ ಕಾರುಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ. 'ಈಟಿವಿ ಭಾರತ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಶನ್(ಐಒಸಿ)ನ ಸಂಶೋಧನೆ ಮತ್ತು ಅಭಿವೃದ್ಧಿ ನಿರ್ದೇಶಕ ಹಾಗೂ ಮಂಡಳಿಯ ಸದಸ್ಯರೂ ಆಗಿರುವ ಡಾ ಎಸ್.ಎಸ್.ವಿ ರಾಮಕುಮಾರ್ ಮಾತನಾಡಿ, 'ಅಲ್ಯೂಮಿನಿಯಂ ಚಾಲಿತ ಬ್ಯಾಟರಿಗಳು' ಮಾರುಕಟ್ಟೆಯಲ್ಲಿ ಲಭ್ಯವಾದ ನಂತರ ಆಟೋ ಮೊಬೈಲ್ ಕ್ಷೇತ್ರವು ವ್ಯಾಪಕವಾದ ಬದಲಾವಣೆಗಳಿಗೆ ಒಳಗಾಗಲಿದೆ ಎಂದು ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ಅಲ್ಯೂಮಿನಿಯಂ ಬ್ಯಾಟರಿ ಚಾಲಿತ ವಾಹನ ಲಭ್ಯತೆ ಕುರಿತು ಡಾ.ರಾಮಕುಮಾರ್ ಪ್ರತಿಕ್ರಿಯಿಸಿದ್ದು, 2024ರ ಅಂತ್ಯದ ವೇಳೆಗೆ ದೇಶದಲ್ಲಿ ಮೊದಲ ಹಂತದ ಬ್ಯಾಟರಿ ಚಾಲಿತ ಕಾರುಗಳು ಲಭ್ಯವಾಗಲಿದೆ. ಸಂಶೋಧನೆ ಅಂತಿಮ ಹಂತದಲ್ಲಿದೆ. ಇತ್ತೀಚೆಗೆ, ಅಲ್ಯೂಮಿನಿಯಂ ಏರ್ ಬ್ಯಾಟರಿ ಹೊಂದಿದ ತ್ರಿಚಕ್ರ ವಾಹನವು 450 ಕಿಲೋ ಮೀಟರ್ ಪ್ರಯಾಣಿಸಿದೆ. ಅದೇ ವಾಹನವನ್ನು ಲಿಥಿಯಂ ಬ್ಯಾಟರಿ ಬಳಸಿ ಓಡಿಸಿದರೆ ಅದು 80 ರಿಂದ 100 ಕಿಮೀ ಕ್ರಮಿಸುತ್ತದೆ ಎಂದು ಅವರು ಹೇಳಿದರು.
"ಬ್ಯಾಟರಿಯನ್ನು ರೀಚಾರ್ಜ್ ಮಾಡಲು ವಿದ್ಯುತ್ ಅಗತ್ಯವಿಲ್ಲ. ಮಾರುಕಟ್ಟೆಯಲ್ಲಿ ಪ್ರಸ್ತುತ ಬ್ಯಾಟರಿಗೆ ಹೋಲಿಸಿದರೆ ಮೈಲೇಜ್ ಹೆಚ್ಚು. ಹೆಚ್ಚು ಸುರಕ್ಷತೆ ಮತ್ತು ಮಾಲಿನ್ಯ ಇಲ್ಲ. ನಾವು ಅಡುಗೆ ಅನಿಲ ಸಿಲಿಂಡರ್‌ನೊಂದಿಗೆ ಮಾಡುವಂತೆ ಇದನ್ನು ಬದಲಾಯಿಸಬಹುದು. ಉತ್ಪಾದನೆಯನ್ನು ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ. ಸಂಪನ್ಮೂಲಗಳು ದೇಶಿಯವಾಗಿ ಹೇರಳವಾಗಿ ಲಭ್ಯವಿರುವ ಅಲ್ಯೂಮಿನಿಯಂ ಪ್ರಮುಖವಾಗಿದೆ" ಎಂದು ಡಾ.ರಾಮಕುಮಾರ್ ಹೇಳಿದ್ದಾರೆ.
ವಿದ್ಯುತ್ ಅಗತ್ಯವಿಲ್ಲ: ಅಲ್ಯೂಮಿನಿಯಂ ಬ್ಯಾಟರಿಗಳಿಗೆ ರೀಚಾರ್ಜ್ ಮಾಡುವ ಅಗತ್ಯವಿಲ್ಲ. ಈ ಬ್ಯಾಟರಿಗಳಿಗೆ ವಿದ್ಯುತ್ ಅಗತ್ಯವಿಲ್ಲ. ಬ್ಯಾಟರಿ ಸ್ಫೋಟಗೊಳ್ಳುವ ಭಯವಿಲ್ಲ. ಚಾರ್ಜಿಂಗ್ ಕಡಿಮೆಯಾದಾಗ, ಪೆಟ್ರೋಲ್ ಬಂಕ್ ಅಥವಾ ಔಟ್ಲೆಟ್ನಲ್ಲಿ ಬ್ಯಾಟರಿಯನ್ನು ನಿಮಿಷಗಳಲ್ಲಿ ಬದಲಾಯಿಸಬಹುದು. ಕಂಪನಿಗಳು ಖರೀದಿಸಿದಾಗ ಬ್ಯಾಟರಿಗಳಿಲ್ಲದ ಕಾರುಗಳನ್ನು ಪೂರೈಸುತ್ತವೆ. ಬ್ಯಾಟರಿಗಾಗಿ ಠೇವಣಿಯು ಅಡುಗೆ ಅನಿಲ ಸಿಲಿಂಡರ್‌ಗೆ ಠೇವಣಿ ಇದ್ದಂತೆ. ಠೇವಣಿ ಮೊತ್ತ ಮತ್ತು ಬ್ಯಾಟರಿ ವಿನಿಮಯದ ಬೆಲೆಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ವಾಹನ ನಿರ್ವಹಣೆ ಲಿಥಿಯಂ ಬ್ಯಾಟರಿಗಳಿಗೆ ಹೋಲಿಸಿದರೆ ವೆಚ್ಚವು ಶೇ.50 ರಷ್ಟು ಕಡಿಮೆಯಾಗಿದೆ ಎಂದು ಅವರು ಹೇಳಿದರು.
ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುತ್ತಿವೆ: ಆಟೋ ಮೊಬೈಲ್ ಕಂಪನಿಗಳ ಜೊತೆಗಿನ ಪಾಲುದಾರಿಕೆ ಬಗ್ಗೆ ಉತ್ತರಿಸಿದ ಅವರು, "ಈ ಬ್ಯಾಟರಿ ಚಾಲಿತ ವಾಹನಗಳನ್ನು ತಯಾರಿಸಲು ನಾವು ಮಾರುತಿ, ಮಹೀಂದ್ರ ಮತ್ತು ಟಾಟಾ ಮೋಟಾರ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಟಾಟಾ ಮೋಟಾರ್ಸ್‌ನ ಕಾರುಗಳು 500 ಕಿಲೋ ಮೀಟರ್‌ಗಳಿಗಿಂತ ಹೆಚ್ಚು ಪ್ರಯಾಣಿಸಬಲ್ಲವು ಎಂದು ನಾವು ಕಂಡುಕೊಂಡಿದ್ದೇವೆ. ಅಲ್ಯೂಮಿನಿಯಂ ಬ್ಯಾಟರಿಯನ್ನು ಬಳಸಲಾಗುತ್ತಿದೆ. ಮಾರುತಿ, ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿಗಳು ಸಹ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುತ್ತಿವೆ. ಮಾಲಿನ್ಯವನ್ನು ಕಡಿಮೆ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ ಎಂದರು.
ಅಲ್ಯೂಮಿನಿಯಂನಿಂದ ಬ್ಯಾಟರಿ ತಯಾರಿಸುವ ಸಂಶೋಧನೆಯ ಕುರಿತು ವಿವರಿಸಿದ ಅವರು, "ಆಮದು ಅವಲಂಬಿಸದ ನೈಸರ್ಗಿಕ ಸಂಪನ್ಮೂಲಗಳ ಬ್ಯಾಟರಿಗಳನ್ನು ತಯಾರಿಸುವ ಅಧ್ಯಯನವು ಅಲ್ಯೂಮಿನಿಯಂ ಅನ್ನು ಪ್ರಮುಖವಾಗಿ ಗುರುತಿಸಿದೆ. ಆ ನಿಕ್ಷೇಪಗಳು ಹೇರಳವಾಗಿರುವ ಅಂಶವೂ ಪ್ಲಸ್ ಪಾಯಿಂಟ್ ಆಗಿದೆ. ಸರ್ಕಾರವು ಧನಾತ್ಮಕವಾಗಿ ಪ್ರತಿಕ್ರಿಯಿಸಿದೆ. ಇಸ್ರೇಲ್ನ ಬಾರ್-ಇಲಾನ್ ವಿಶ್ವವಿದ್ಯಾಲಯ (BIU) ಈ ಸಂಶೋಧನೆ ಮಾಡಿದೆ ಎಂದರು.
50:50 ಅನುಪಾತದಲ್ಲಿ ಜಂಟಿ ಉದ್ಯಮ: ಫಿನರ್ಜಿ ಆಫ್ ಇಸ್ರೇಲ್ನೊಂದಿಗಿನ ಒಪ್ಪಂದದ ಕುರಿತು ವಿವರಿಸಿದ ಅವರು, "ನಾವು ಬಾರ್-ಇಲಾನ್ ವಿಶ್ವವಿದ್ಯಾನಿಲಯವನ್ನು ಸಂಪರ್ಕಿಸಿದಾಗ, ಅವರು ಪೇಟೆಂಟ್ ಮತ್ತು ಸಂಶೋಧನೆಯನ್ನು ಫಿನರ್ಜಿ (ಇಸ್ರೇಲ್) ಎಂಬ ಸ್ಟಾರ್ಟ್-ಅಪ್ ಕಂಪನಿಗೆ ಮಾರಾಟ ಮಾಡಿದ್ದಾರೆ ಎಂದು ನಮಗೆ ತಿಳಿಸಿದರು. ಅದು ಮೆಟಲ್-ಏರ್ ತಂತ್ರಜ್ಞಾನದೊಂದಿಗೆ ಕೆಲಸ ಮಾಡುತ್ತದೆ. ಲೋಹಗಳು ಶುದ್ಧ ವಾಹಕಗಳಾಗಿ ಮಾರ್ಪಡುತ್ತವೆ. ಆದ್ದರಿಂದ ನಾವು ಆ ಕಂಪನಿಯನ್ನು ಸಂಪರ್ಕಿಸಿದ್ದೇವೆ ಮತ್ತು ಭಾರತದಲ್ಲಿ ಆ ತಂತ್ರಜ್ಞಾನದೊಂದಿಗೆ ಬ್ಯಾಟರಿಗಳನ್ನು ತಯಾರಿಸಲು ಒಪ್ಪಿಕೊಂಡಿದ್ದೇವೆ. ಇದು 50:50 ಅನುಪಾತದಲ್ಲಿ ಜಂಟಿ ಉದ್ಯಮವಾಗಿದೆ. ಮೊದಲ ಹಂತದಲ್ಲಿ ನಾವು ಅದನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತೇವೆ ಎಂದು ವಿವರಿಸಿದರು.
ಈ ವಾಹನಗಳ ಗರಿಷ್ಠ ಮೈಲೇಜ್ ಕುರಿತು ಪ್ರಶ್ನಿಸಿದಾಗ, "ಲಿಥಿಯಂ ಪ್ರತಿ ಕಿಲೋಗ್ರಾಂಗೆ ನಾಲ್ಕು ಕಿಲೋ ವ್ಯಾಟ್ ಶಕ್ತಿಯ ಸಾಂದ್ರತೆಯನ್ನು ಹೊಂದಿದೆ. ಅಲ್ಯೂಮಿನಿಯಂ ಪ್ರತಿ ಕಿಲೋ ಗ್ರಾಂಗೆ ಎಂಟು ಕಿಲೋವ್ಯಾಟ್ಗಳನ್ನು ಒದಗಿಸುತ್ತದೆ. ಪ್ರಸ್ತುತ ನಾವು ಕೇವಲ ನಾಲ್ಕು ಕಿಲೋ ವ್ಯಾಟ್ ಸಾಂದ್ರತೆಯನ್ನು ಹೊರತೆಗೆಯುತ್ತಿದ್ದೇವೆ. ಈ ಸಾಂದ್ರತೆಯನ್ನು ಇನ್ನಷ್ಟು ಸುಧಾರಿಸಲು ಫಿನರ್ಜಿಯೊಂದಿಗೆ ಸಂಶೋಧನೆ ಅಗತ್ಯ. ಈ ಸಾಂದ್ರತೆಯು ಹೆಚ್ಚಾದಂತೆ ಮೈಲೇಜ್ ಹೆಚ್ಚಾಗುತ್ತದೆ. ಸಾಂದ್ರತೆಯು ಆರರಿಂದ ಏಳು ಕಿಲೋವ್ಯಾಟ್‌ಗಳಿಗೆ ಹೆಚ್ಚಾದರೆ, ಮೈಲೇಜ್ 800 ಕಿಲೋಮೀಟರ್‌ಗಳವರೆಗೆ ಹೆಚ್ಚಾಗುತ್ತದೆ" ಎಂದರು.
ಟೆಸ್ಲಾರು ನಮ್ಮ ಮುಂದೆ ಅಲ್ಯೂಮಿನಿಯಂ ತಂತ್ರಜ್ಞಾನವನ್ನು ಕಂಡುಹಿಡಿದರು. ಆ ಹೊತ್ತಿಗೆ, BIU ನಡೆಸಿದ ಸಂಶೋಧನೆಯು ತೃಪ್ತಿಕರವಾಗಿರಲಿಲ್ಲ ಮತ್ತು ಟೆಸ್ಲಾ ಹಿಂದೆ ಸರಿದರು. ನಂತರ ಫಿನರ್ಜಿ ನಡೆಸಿದ ಸಂಶೋಧನೆಯು ಉತ್ತಮ ಫಲಿತಾಂಶಗಳನ್ನು ನೀಡಿತು ಮತ್ತು IOC ಒಪ್ಪಂದದೊಂದಿಗೆ ಮುಂದುವರೆಯಿತು" ಎಂದು ಡಾ ರಾಮಕುಮಾರ್ ಹೇಳಿದ್ದಾರೆ.
ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ: "ಅಲ್ಯೂಮಿನಿಯಂ ಬ್ಯಾಟರಿಯು ವಾಹನ ಚಾಲಕರಿಗೆ ಮಾತ್ರವಲ್ಲದೆ ದೇಶದ ಆರ್ಥಿಕತೆಯಲ್ಲಿಯೂ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ದೇಶದಲ್ಲಿ ಅಲ್ಯೂಮಿನಿಯಂ ನಿಕ್ಷೇಪಗಳು ದೊಡ್ಡದಾಗಿದೆ. ಈ ಬ್ಯಾಟರಿಯು ವಾಹನಗಳಲ್ಲಿ ಬಳಸುವುದರಿಂದ, ಇದು ಸಕ್ರಿಯ ಅಲ್ಯೂಮಿನಿಯಂ ಟ್ರೈಆಕ್ಸೈಡ್ ಆಗಿ ರೂಪಾಂತರಗೊಳ್ಳುತ್ತದೆ. ಇದರಿಂದ ಅಲ್ಯೂಮಿನಿಯಂ ಅನ್ನು ಮರುಬಳಕೆ ಮಾಡಬಹುದು. ಈ ಪುನರುತ್ಪಾದನೆಗಾಗಿ ನಾವು ಹಿಂಡಾಲ್ಕೊ ಇಂಡಸ್ಟ್ರೀಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ಅಲ್ಯೂಮಿನಿಯಂ ಬ್ಯಾಟರಿಯನ್ನು ಲಿಥಿಯಂ ಬ್ಯಾಟರಿಯ ವೆಚ್ಚಕ್ಕಿಂತ ಕನಿಷ್ಠ 50 ಪ್ರತಿಶತದಷ್ಟು ಕಡಿಮೆಗೆ ಬಳಸಬಹುದು" ಎಂದು ಅವರು ಹೇಳಿದರು.
ವಾಹನ ಕ್ಷೇತ್ರದಲ್ಲಿ ಕ್ರಾಂತಿ: ಅಲ್ಯೂಮಿನಿಯಂ ಬ್ಯಾಟರಿಯ ಆವಿಷ್ಕಾರದ ಬಗ್ಗೆ ವಿವರಿಸಿದ ಅವರು, "ಇಸ್ರೇಲ್ ವಿಶ್ವವಿದ್ಯಾನಿಲಯವು ನಡೆಸಿದ ಮೂಲಭೂತ ಸಂಶೋಧನೆಯು ಅದೇ ದೇಶದ ಸ್ಟಾರ್ಟ್ಅಪ್ ಅಲ್ಯೂಮಿನಿಯಂ-ಏರ್ ಬ್ಯಾಟರಿ ಸಂಶೋಧನೆಯನ್ನು ಚುರುಕುಗೊಳಿಸಿತು. ಆದರೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅದನ್ನು ಸಂಸ್ಕರಿಸಿ ಕಂಡು ಹಿಡಿದಿದೆ. ಇದು ವಾಹನ ಕ್ಷೇತ್ರದಲ್ಲಿ ಕ್ರಾಂತಿ. ಅಷ್ಟೇ ಅಲ್ಲ, ವಾಹನ ಚಾಲಕರಿಗೆ ನಿರ್ವಹಣಾ ವೆಚ್ಚ ಅರ್ಧಕ್ಕಿಂತ ಹೆಚ್ಚು ಕಡಿಮೆಯಾಗುತ್ತದೆ. ಸಂಶೋಧನೆಗಳು ಹೆಚ್ಚು ನಿರ್ಣಾಯಕವಾಗಿದ್ದರೆ ಮೈಲೇಜ್ ಮತ್ತಷ್ಟು ಹೆಚ್ಚಾಗುತ್ತದೆ. ಈ ಬ್ಯಾಟರಿಗಳು 2024ರ ಅಂತ್ಯದ ವೇಳೆಗೆ ಲಭ್ಯವಿರುತ್ತವೆ ಎಂದರು.
ರಾಮಕುಮಾರ್ ಯಾರು?: ಎಸ್.ಎಸ್.ವಿ. ರಾಮಕುಮಾರ್ ಆಂಧ್ರಪ್ರದೇಶದ ಮಚಲಿಪಟ್ಟಣಂ ಮೂಲದವರು. ಆಂಧ್ರದ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ (ರಸಾಯನಶಾಸ್ತ್ರ) ಪದವಿ ಪಡೆದಿದ್ದಾರೆ. ಮೂರು ದಶಕಗಳಿಗೂ ಹೆಚ್ಚು ಕಾಲ ಹಲವು ರೀತಿಯ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿರುವ ಇವರು ಬರೆದಿರುವ 150ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಅವರು ಸುಮಾರು 55 ಪೇಟೆಂಟ್‌ಗಳನ್ನು ತಮ್ಮ ಹೆಸರಿಗೆ ಪ್ರತ್ಯೇಕವಾಗಿ ನೋಂದಾಯಿಸಿಕೊಂಡಿದ್ದಾರೆ ಮತ್ತು ಅವರ ಅಧಿಕಾರಾವಧಿಯಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಾವಿರಕ್ಕೂ ಹೆಚ್ಚು ಪೇಟೆಂಟ್‌ಗಳನ್ನು ಪಡೆದುಕೊಂಡಿದೆ. ಅನೇಕ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ದೇಶ ಮತ್ತು ಜಗತ್ತಿನಾದ್ಯಂತ ಅನೇಕ ಸಂಸ್ಥೆಗಳಲ್ಲಿ ಮಂಡಳಿಯ ಸದಸ್ಯ ಮತ್ತು ಸಲಹೆಗಾರರಾಗಿದ್ದಾರೆ.
ಇದನ್ನೂ ಓದಿ: BharOS.. ಮೊದಲ ಸ್ವದೇಶಿ ಮೊಬೈಲ್ ಆಪರೇಟಿಂಗ್ ಸಿಸ್ಟಮ್: ಏನಿದರ ವಿಶೇಷತೆ?