ETV Bharat / bharat

ಜಮ್ಮು ಮತ್ತು ಕಾಶ್ಮೀರ: ಹೈಸ್ಪೀಡ್ ಇಂಟರ್ನೆಟ್ ನಿಷೇಧ ಜ.22ರವರೆಗೆ ವಿಸ್ತರಣೆ - ಜಮ್ಮು ಮತ್ತು ಕಾಶ್ಮೀರದಲ್ಲಿ ಹೈಸ್ಪೀಡ್ ಇಂಟರ್ನೆಟ್ ನಿಷೇಧ

ಹೈಸ್ಪೀಡ್ ಇಂಟರ್ನೆಟ್​ನ ದುರುಪಯೋಗದ ಬಗ್ಗೆ ಆತಂಕ ವ್ಯಕ್ತಪಡಿಸಿ ಜಮ್ಮು ಮತ್ತು ಕಾಶ್ಮೀರ ಆಡಳಿತವು 18 ಜಿಲ್ಲೆಗಳಲ್ಲಿ ಜನವರಿ 22ರವರೆಗೆ ಕೇವಲ 2ಜಿ ಮೊಬೈಲ್ ಡೇಟಾ ಸೇವೆಗಳನ್ನು ಮುಂದುವರಿಸಲು ಆದೇಶಿಸಿದೆ.

phone
phone
author img

By

Published : Jan 9, 2021, 8:23 AM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದಲ್ಲಿ ಹೈಸ್ಪೀಡ್ ಇಂಟರ್ನೆಟ್ ನಿಷೇಧ ಜನವರಿ 22ರವರೆಗೆ ಜಾರಿಯಲ್ಲಿರುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತ ತಿಳಿಸಿದೆ.

ಗಂದರ್‌ಬಲ್ ಮತ್ತು ಉಧಮ್​ಪುರ ಜಿಲ್ಲೆಗಳನ್ನು ಹೊರತುಪಡಿಸಿ ಹೈಸ್ಪೀಡ್ 3ಜಿ ಮತ್ತು 4ಜಿ ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಜನವರಿ 22ರವರೆಗೆ ವಿಸ್ತರಿಸಲಾಗಿದೆ.

Barring 2 districts, high speed internet ban in Jammu and Kashmir extended till Jan 22
ಜಮ್ಮು ಮತ್ತು ಕಾಶ್ಮೀರ ಆಡಳಿತದ ಆದೇಶ

"ಉಗ್ರರ ಒಳನುಸುಳುವಿಕೆ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ಸಂಘಟಿಸಲು ಹೈ-ಸ್ಪೀಡ್ ಮೊಬೈಲ್ ಡೇಟಾ ಸೇವೆಗಳನ್ನು ದುರುಪಯೋಗಪಡಿಸಿಕೊಳ್ಳುವ ಕುರಿತು ಪ್ರಕರಣಗಳ ತನಿಖೆ ನಡೆಯುತ್ತಿದೆ." ಎಂದು ಗೃಹ ಇಲಾಖೆ ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಬೆಂಕಿ ಅವಘಡ... ಹತ್ತು ನವಜಾತ ಶಿಶುಗಳ ಸಜೀವ ದಹನ!

"ಆದ್ದರಿಂದ ಭದ್ರತಾ ಸನ್ನಿವೇಶ ಮತ್ತು ಸಾಮಾಜಿಕ ಮಾಧ್ಯಮಗಳ ದುರುಪಯೋಗವನ್ನು ತಡೆಗಟ್ಟಲು ಮೊಬೈಲ್ ಡೇಟಾ ಸೇವೆಗಳ ಮೇಲೆ ವೇಗ ಸಂಬಂಧಿತ ನಿರ್ಬಂಧಗಳನ್ನು ಮುಂದುವರೆಸುವ ಅಗತ್ಯವಿದೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.