ETV Bharat / bharat

ಹೆಡ್‌​​ ಕಾನ್​ಸ್ಟೆಬಲ್​ ಕೊಲೆ ಪ್ರಕರಣ: ನಾಲ್ವರು ಕಬಡ್ಡಿ ಆಟಗಾರರು ಸೆರೆ, ಓರ್ವನಿಗೆ ಗುಂಡೇಟು

author img

By ETV Bharat Karnataka Team

Published : Oct 24, 2023, 4:41 PM IST

Updated : Oct 24, 2023, 4:50 PM IST

ಪಂಜಾಬ್​​ನ ಬರ್ನಾಲಾ ಜಿಲ್ಲೆಯಲ್ಲಿ ಹೆಡ್​​ ಕಾನ್​ಸ್ಟೆಬಲ್​ವೊಬ್ಬರನ್ನು​ ಕೊಲೆ ಮಾಡಿದ ಆರೋಪದಡಿ ನಾಲ್ವರು ಕಬಡ್ಡಿ ಆಟಗಾರರನ್ನು ಪೊಲೀಸರು ಬಂಧಿಸಿದ್ದಾರೆ.

Barnala policemans murder: All four kabaddi players arrested, says DGP Punjab
ರೆಸ್ಟೋರೆಂಟ್​ನಲ್ಲಿ ಗಲಾಟೆ ಬಿಡಿಸಲು ಹೋದ ಹೆಡ್​​ ಕಾನ್​ಸ್ಟೇಬಲ್​ ಕೊಲೆ: ನಾಲ್ವರು ಕಬಡ್ಡಿ ಆಟಗಾರರ ಸೆರೆ

ಬರ್ನಾಲಾ (ಪಂಜಾಬ್​): ರೆಸ್ಟೋರೆಂಟ್​ ಬಿಲ್​ ವಿಚಾರವಾಗಿ ನಡೆದ ಗಲಾಟೆ ಬಿಡಿಸಲು ಹೋದ ಪೊಲೀಸ್ ಹೆಡ್​​ ಕಾನ್​ಸ್ಟೆಬಲ್​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಕಬಡ್ಡಿ ಆಟಗಾರರನ್ನು ಪಂಜಾಬ್​​ನ ಬರ್ನಾಲಾ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಓರ್ವ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಸೆರೆಹಿಡಿಯಲಾಗಿದೆ. ಗಾಯಾಳುವನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬರ್ನಾಲಾ ನಗರದ ರೆಸ್ಟೋರೆಂಟ್​ವೊಂದರಲ್ಲಿ ಭಾನುವಾರ ರಾತ್ರಿ ಬಿಲ್​ ವಿಚಾರವಾಗಿ ಕಬಡ್ಡಿ ಆಟಗಾರರು ಹಾಗೂ ರೆಸ್ಟೋರೆಂಟ್​ ಸಿಬ್ಬಂದಿ ನಡುವೆ ಜಗಳ ನಡೆದಿತ್ತು. ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಪೊಲೀಸರೊಂದಿಗೂ ಗಲಾಟೆ ಮಾಡಿದ್ದ ಆಟಗಾರರು, ಹೆಡ್​​ ಕಾನ್​ಸ್ಟೆಬಲ್​ ದರ್ಶನ್ ಸಿಂಗ್​ ಎಂಬವರ ಮೇಲೆ ದಾಳಿ ಮಾಡಿದ್ದರು. ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದರು.

ಈ ಕೊಲೆಯಲ್ಲಿ ಭಾಗಿಯಾದ ಆರೋಪಿಗಳಾದ ನಾಲ್ವರು ಆಟಗಾರರನ್ನು ಒಂದೇ ದಿನದಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪರಮ್​ಜೀತ್​ ಸಿಂಗ್​ ಪಮ್ಮ ಲಖಕ್ರಿವಾಲಾ, ಜುಗರಾಜ್​ ಸಿಂಗ್​, ಗುರುಮೀತ್​ ಸಿಂಗ್​ ಹಾಗೂ ವಜೀರ್​ ಸಿಂಗ್​ ಎಂಬವರು ಬಂಧಿತರಾಗಿದ್ದು, ಒಂದು ಪಿಸ್ತೂಲ್​ ಹಾಗೂ ಎರಡು ಜೀವಂತ ಕ್ಯಾರ್ಟ್ರಿಜ್​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧನದ ವೇಳೆ ಎನ್​ಕೌಂಟರ್​​: ಆರೋಪಿಗಳ ಬಂಧನಕ್ಕೆ ಪೊಲೀಸರು ತೆರಳಿದಾಗ ಗುಂಡಿನ ಚಕಮಕಿ ನಡೆದಿದೆ. ಪೊಲೀಸರ ಮೇಲೆಯೇ ಆರೋಪಿಗಳು ಗುಂಡು ಹಾರಿಸಲು ಮುಂದಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡಿನ ದಾಳಿ ಮಾಡಿದ್ದಾರೆ. ಇದರಿಂದ ಅಂತರರಾಷ್ಟ್ರಿಯ ಕಬಡ್ಡಿ ಆಟಗಾರ ಪರಮ್​ಜೀತ್​ ಸಿಂಗ್ ಕಾಲಿ​ಗೆ ಗುಂಡೇಟು ಬಿದ್ದಿದೆ. ಸದ್ಯ ಈತನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಡಿಜಿಪಿ ಮಾಹಿತಿ​​​: ''ಹೆಡ್​ ಕಾನ್​ಸ್ಟೆಬಲ್​ ದರ್ಶನ್ ಸಿಂಗ್​ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಎಲ್ಲ ನಾಲ್ವರು ಆರೋಪಿಗಳನ್ನು 24 ಗಂಟೆಯೊಳಗೆ ಬರ್ನಾಲಾ ಪೊಲೀಸರು ಬಂಧಿಸಿದ್ದಾರೆ. ಎನ್​ಕೌಂಟರ್​ನಲ್ಲಿ ಓರ್ವ ಆರೋಪಿ ಗಾಯಗೊಂಡಿದ್ದಾನೆ. ಬಂಧಿತರಿಂದ ಒಂದು ಪಿಸ್ತೂಲ್​, ಎರಡು ಜೀವಂತ ಕ್ಯಾರ್ಟ್ರಿಜ್​ಗಳು ಜಪ್ತಿ ಮಾಡಲಾಗಿದೆ'' ಎಂದು ಪಂಜಾಬ್​ ಡಿಜಿಪಿ ಗೌರವ್​ ಯಾದವ್​ ಸೋಮವಾರ ಸಾಮಾಜಿಕ ಜಾಲತಾಣ 'ಎಕ್ಸ್​'ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಆರೋಪಿಗಳ ಕ್ರಿಮಿನಲ್​ ಮನಸ್ಥಿತಿ: ಈ ಘಟನೆ ಹಾಗೂ ಆರೋಪಿಗಳ ಬಂಧನ ಕುರಿತು ಹಿರಿಯ ಪೊಲೀಸ್​ ವರಿಷ್ಠಾಧಿಕಾರಿ ಸಂದೀಪ್​ ಕುಮಾರ್​ ಮಲೀಕ್​ ಸುದ್ದಿಗೋಷ್ಠಿ ನಡೆಸಿ ಹೆಚ್ಚಿನ ವಿವರ ನೀಡಿದ್ದು, ''ರೆಸ್ಟೋರೆಂಟ್​ ಬಿಲ್​ ಪಾವತಿಸುವ ವಿಚಾರವಾಗಿ ಆರೋಪಿಗಳು ಮಾಲೀಕರೊಂದಿಗೆ ತೀವ್ರ ವಾಗ್ವಾದ ನಡೆಸಿದ್ದರು. ಹೀಗಾಗಿ ಪೊಲೀಸರಿಗೆ ಮಾಲೀಕರು ಮಾಹಿತಿ ನೀಡಿದ್ದರು. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸ್ಥಳಕ್ಕೆ ತೆರಳಿದ್ದ ಪೊಲೀಸ್​ ತಂಡ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಇದರಲ್ಲಿ ಕಾನ್​​ಸ್ಟೆಬಲ್​ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿತ್ತು'' ಎಂದು ಹೇಳಿದರು.

''ಈ ಘಟನೆ ಬಳಿಕ ಎಲ್ಲ ಆರೋಪಿಗಳು ಪರಾರಿಯಾಗಿದ್ದರು. ಸೋಮವಾರ ಸಂಜೆ ಧನೌಲಾ ಪೊಲೀಸ್ ವ್ಯಾಪ್ತಿಯ ಚೆಕ್​ ಪೋಸ್ಟ್​ನಲ್ಲಿ ಕಾರೊಂದನ್ನು ತಪಾಸಣೆ ನಡೆಸಿದಾಗ ಅದರಲ್ಲಿ ಈ ಆರೋಪಿಗಳಿದ್ದರು. ಆಗ ತಪ್ಪಿಸಿಕೊಳ್ಳುವ ಉದ್ದೇಶದಿಂದ ಪೊಲೀಸರತ್ತ ಆರೋಪಿ ಪರಮ್​ಜೀತ್​ ಸಿಂಗ್ ಗುಂಡು ಹಾರಿಸಿದ್ದ. ಎನ್​ಕೌಂಟರ್ ನಡೆಸಿ ಆರೋಪಿಗಳನ್ನು ಸೆರೆಹಿಡಿಯಲಾಗಿದೆ. ಬಂಧಿತ ಎಲ್ಲರು ಕುಖ್ಯಾತ ಹಾಗೂ ಕ್ರಿಮಿನಲ್​ ಮನಸ್ಥಿತಿ ಹೊಂದಿದವರಾಗಿದ್ದಾರೆ'' ಎಂದು ವಿವರಿಸಿದರು.

ಇದನ್ನೂ ಓದಿ: ಎರಡನೇ ಮದುವೆಗಾಗಿ ಪತ್ನಿಗೆ ವಿದ್ಯುತ್​ ಶಾಕ್​ ನೀಡಿ ಹತ್ಯೆ ಮಾಡಲು ಯತ್ನಿಸಿದ ಪತಿ ಬಂಧನ

Last Updated : Oct 24, 2023, 4:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.