ETV Bharat / bharat

ಯುವತಿಯರ ಮಧ್ಯೆ ಪ್ರೀತಿ.. ಮದುವೆ ನೋಂದಣಿಗಾಗಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ ಪ್ರೇಮಿಗಳು

ಉತ್ತರಪ್ರದೇಶದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಬ್ಬರು ಹುಡುಗಿಯರ ನಡುವಣ ಸ್ನೇಹ ಪ್ರೀತಿಗೆ ತಿರುಗಿದೆ. ಬಳಿಕ ಇವರಿಬ್ಬರೂ ಮದುವೆಯಾಗಲು ನಿರ್ಧರಿಸಿದ್ದು, ನ್ಯಾಯಾಲಯದಲ್ಲಿ ಮದುವೆಯ ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣ ವಿವರ ಇಲ್ಲಿದೆ ನೋಡಿ..

two girl friends love story  girls applied for marriage registration  bareilly two girl friends love story  bareilly sdm court  love of two girls of bareilly  ಯುವತಿಯರ ಮಧ್ಯೆ ಪ್ರೀತಿ  ಮದುವೆ ನೋಂದಣಿಗಾಗಿ ಕೋರ್ಟ್​ಗೆ ಅರ್ಜಿ  ಕೋರ್ಟ್​ಗೆ ಅರ್ಜಿ ಸಲ್ಲಿಸಿದ ಪ್ರೇಮಿಗಳು  ಉತ್ತರಪ್ರದೇಶದಲ್ಲಿ ವಿಚಿತ್ರ ಪ್ರಕರಣ  ಇಬ್ಬರು ಹುಡುಗಿಯರ ಸ್ನೇಹ ಪ್ರೀತಿ  ನಡುವೆ ಅಗಾಧ ಪ್ರೇಮ  ಅವಳಲ್ಲ ಅವನಾದ ಯುವತಿ  ಬದೌನ್‌ನ ಹುಡುಗಿ ಬರೇಲಿಯ ಹುಡುಗಿಯನ್ನು ಭೇಟಿ  ಎಸ್‌ಡಿಎಂ ನ್ಯಾಯಾಲಯದ ನ್ಯಾಯಮೂರ್ತಿ
ಮದುವೆ ನೋಂದಣಿಗಾಗಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ ಪ್ರೇಮಿಗಳು
author img

By

Published : Jul 13, 2023, 6:20 PM IST

ಬರೇಲಿ, ಉತ್ತರಪ್ರದೇಶ: ಸ್ನೇಹಿತರಿಬ್ಬರ ನಡುವೆ ಅಗಾಧ ಪ್ರೇಮ ಬೆಳೆದಿತ್ತು. ಇಬ್ಬರೂ ಒಟ್ಟಿಗೆ ಬದುಕುತ್ತೇನೆ, ಸಾಯುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಲೇ ಮದುವೆಗೆ ಸಿದ್ಧರಾಗಿದ್ದರು. ಇಷ್ಟೇ ಅಲ್ಲ ಯುವತಿಯೊಬ್ಬಳು ಮದುವೆಗಾಗಿ ತನ್ನ ಲಿಂಗವನ್ನೇ ಬದಲಿಸಿಕೊಂಡಿದ್ದಳು. ಬಳಿಕ ಎಸ್​ಡಿಎಂ ನ್ಯಾಯಾಲಯದಲ್ಲಿ ಮದುವೆ ನೋಂದಣಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರದಲ್ಲಿ ಎಸ್‌ಡಿಎಂ ನ್ಯಾಯಾಲಯ ಸರ್ಕಾರಿ ವಕೀಲರಿಂದ ಅಭಿಪ್ರಾಯ ಕೇಳಿದೆ.

ಬರೇಲಿಯಲ್ಲಿ ಖಾಸಗಿ ಉದ್ಯೋಗ ಮಾಡುತ್ತಿದ್ದ ಇಬ್ಬರು ಯುವತಿಯರ ಸ್ನೇಹ ಪ್ರೀತಿಗೆ ತಿರುಗಿದೆ. ನಂತರ ಇಬ್ಬರೂ ಪತಿ-ಪತ್ನಿಯಾಗಿ ಜೀವನ ನಡೆಸಲು ನಿರ್ಧರಿಸಿದ್ದಾರೆ. ಒಬ್ಬ ಹುಡುಗಿ ಬದೌನ್‌ ನಿವಾಸಿ ಮತ್ತು ಇನ್ನೊಬ್ಬಳು ಬರೇಲಿ ನಿವಾಸಿ ಎಂದು ಹೇಳಲಾಗುತ್ತಿದೆ.

ಬದೌನ್‌ನ ಹುಡುಗಿ ಬರೇಲಿಯ ಹುಡುಗಿಯನ್ನು ಭೇಟಿಯಾಗಿದ್ದಾರೆ. ಮೊದಲಿಗೆ ಇವರಿಬ್ಬರ ಭೇಟಿ ಸ್ನೇಹವಾಗಿ ಮಾರ್ಪಟ್ಟಿತ್ತು. ಬಳಿಕ ಈ ಗೆಳೆತನ ಕ್ರಮೇಣವಾಗಿ ಪ್ರೀತಿಯ ಮಟ್ಟಕ್ಕೆ ತಲುಪಿತು. ಇಬ್ಬರೂ ಪತಿ-ಪತ್ನಿಯಾಗಿ ಬಾಳಲು ನಿರ್ಧರಿಸಿದರು. ಸ್ನೇಹಿತರಿಬ್ಬರ ಪ್ರೀತಿ ಎಷ್ಟಿತ್ತೆಂದರೆ ಮನೆಯವರ ವಿರೋಧದ ನಡುವೆಯೂ ಪತಿ - ಪತ್ನಿಯಾಗಿ ಜೀವನ ನಡೆಸಲು ಇವರಿಬ್ಬರೂ ಮದುವೆಗೆ ಒಪ್ಪಿಗೆ ಸೂಚಿಸಿದ್ದರು.

ಅವಳಲ್ಲ ಅವನಾದ ಯುವತಿ: ವೈದ್ಯಕೀಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಇಬ್ಬರು ಹುಡುಗಿಯರಲ್ಲಿ ಒಬ್ಬಳು ತನ್ನ ಲಿಂಗವನ್ನು ಬದಲಾಯಿಸಿದ್ದಾಳೆ ಎಂದು ಹೇಳಲಾಗುತ್ತಿದೆ. ಇದಾದ ಬಳಿಕ ಇಬ್ಬರೂ ಎಸ್ ಡಿಎಂ ಸದರ್ ನ್ಯಾಯಾಲಯದಲ್ಲಿ ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸಿದ್ದರು. ಮದುವೆ ನೋಂದಣಿಗೆ ಅರ್ಜಿಯನ್ನು ಸ್ವೀಕರಿಸಿದ ನಂತರ, ಎಸ್‌ಡಿಎಂ ನ್ಯಾಯಾಲಯದ ನ್ಯಾಯಮೂರ್ತಿ ಪ್ರತ್ಯೂಷ್ ಪಾಂಡೆ ಈ ವಿಷಯದಲ್ಲಿ ಸರ್ಕಾರಿ ವಕೀಲರಿಂದ ಕಾನೂನು ಅಭಿಪ್ರಾಯವನ್ನು ಕೇಳಿದ್ದಾರೆ.

ವಿಶೇಷ ವಿವಾಹ ಕಾಯ್ದೆಯಡಿ ಅರ್ಜಿ ಬಂದಿದೆ ಎಂದು ಎಸ್‌ಡಿಎಂ ನ್ಯಾಯಾಲಯದ ನ್ಯಾಯಮೂರ್ತಿ ಪ್ರತ್ಯೂಷ್ ಪಾಂಡೆ ತಿಳಿಸಿದ್ದಾರೆ. ಅದರ ಪ್ರಕಾರ ಯಾರಾದರೂ ಇಲ್ಲಿ ತಮ್ಮ ಮದುವೆಯನ್ನು ನೋಂದಾಯಿಸಲು ಬಯಸಿದರೆ ಅವರು ಎಸ್‌ಡಿಎಂಗೆ ಅರ್ಜಿಯನ್ನು ನೀಡಬಹುದಾಗಿದೆ. ಸದ್ಯ ಈ ಪ್ರಕರಣದಲ್ಲಿ ಲಿಂಗವನ್ನು ಬದಲಾಯಿಸಿದ ನಂತರ ಅರ್ಜಿ ಬಂದಿದೆ. ಆದ್ದರಿಂದ ಕಾನೂನು ಅಭಿಪ್ರಾಯವನ್ನು ಕೇಳಲಾಗಿದೆ. ಏಕೆಂದರೆ, ಮೊದಲ ಬಾರಿಗೆ ಇಂತಹ ಪ್ರಕರಣ ನಮ್ಮ ಮುಂದೆ ಬಂದಿದ್ದು, ಇದರಲ್ಲಿ ಕಾನೂನು ನಿಯಮ ಏನು ಮತ್ತು ನಿಯಮದ ಪ್ರಕಾರ ಏನು ಮಾಡಲಾಗುವುದು ಎಂದು ಕೋರ್ಟ್​ ವಕೀಲರ ಮೂಲಕ ಸರ್ಕಾರಕ್ಕೆ ಪ್ರಶ್ನಿಸಿದೆ.

ಓದಿ: Online wedding: ಆನ್​ಲೈನ್​ ಮದುವೆ.. ಸಪ್ತಪದಿ ತುಳಿದಿಲ್ಲ, ತಾಳಿ ಕಟ್ಟಿಲ್ಲ, ಆದರೂ ಪತಿ - ಪತ್ನಿ!

ಕಳೆದ ವರ್ಷ ತುಮಕೂರಿನಲ್ಲಿ ಯುವತಿಯರ ಲವ್​ ಬಹಿರಂಗ: ಕಳೆದ ವರ್ಷ ತುಮಕೂರಲ್ಲಿ ಅಪರೂಪದ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಪರಸ್ಪರ ಪ್ರೀತಿಸುತ್ತಿದ್ದ ಯುವತಿಯರಿಬ್ಬರು ವಿವಾಹವಾಗಲು ಅವಕಾಶ ಮಾಡಿಕೊಡುವಂತೆ ಕೋರಿ ಪೊಲೀಸರ ಮೊರೆ ಹೋಗಿದ್ದರು. ಆದರೆ ಪೊಲೀಸರು ಅವಕಾಶ ಮಾಡಿಕೊಟ್ಟಿರಲಿಲ್ಲ ಮತ್ತು ವಿಷಯ ತಿಳಿದ ಪೋಷಕರು, ಯುವತಿಯರನ್ನು ಮನವೊಲಿಸಿ ಮನೆಗೆ ಕರೆದುಕೊಂಡು ಹೋಗಿದ್ದರು.

ಓದಿ: ಮಳೆಗಾಗಿ ವಿಚಿತ್ರ ಆಚರಣೆಗಳು: ಬಂಡೆಯ ಮೇಲೆ ಸಾಮೂಹಿಕ ಊಟ ಮಾಡುವ ಈ ಪದ್ಧತಿ ನಿಮಗೆ ತಿಳಿದಿದೆಯೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.