ETV Bharat / bharat

42 ವರ್ಷದ ಬಳಿಕ ಮಕ್ಕಳಿಂದ ವೃದ್ಧ ದಂಪತಿಗೆ ನಡೀತು ಗೌಣ ಪದ್ಧತಿ.. - 42 ವರ್ಷಗಳ ಬಳಿಕ ಗೌಣ ಪದ್ಧತಿ ನೆರವೆರಿಸಿದ ರಾಜಕುಮಾರ್​ ಕುಟುಂಬ

ಆ ಜೋಡಿಗೆ 42 ವರ್ಷಗಳ ಬಳಿಕ ಗೌಣ ಪದ್ಧತಿಯನ್ನು ಮದುವೆಯಂತೆ ಮಕ್ಕಳು, ಅಳಿಯಂದಿರು ಸೇರಿ ಮಾಡಿರುವ ಘಟನೆ ಬಿಹಾರದ ಸರನ್​ನಲ್ಲಿ ನಡೆದಿದೆ.

Unique Marriage in Bihar  Saran Unique Marriage  70 Year Old Man Barat in Chapra  Aamdadhi village Chapra  barat of seventy year old man in Chapra  ಮದುವೆ ಸಂಭ್ರಮದಲ್ಲಿ ಮುಳುಗಿದ ಬಿಹಾರದ ಆಮ್ದಾಧಿ ಗ್ರಾಮ  ಸರನ್​ ಜಿಲ್ಲೆಯಲ್ಲಿ ವಿಶಿಷ್ಠ ಮದುವೆ  ಗೌಣ ಪದ್ಧತಿ ಎಂದರೇನು  42 ವರ್ಷಗಳ ಹಿಂದೆ ಮದುವೆ ರಾಜ್​ಕುಮಾರ್​ ಸಿಂಗ್​ 42 ವರ್ಷಗಳ ಬಳಿಕ ಗೌಣ ಪದ್ಧತಿ ನೆರವೆರಿಸಿದ ರಾಜಕುಮಾರ್​ ಕುಟುಂಬ  ಬಿಹಾರ್​ ಪೊಲೀಸ್​ ಇಲಾಖೆ ಮತ್ತು ಸೇನೆಯಲ್ಲಿ ಮಕ್ಕಳ ಕಾರ್ಯ
42 ವರ್ಷಗಳ ಬಳಿಕ ಮಕ್ಕಳಿಂದ ನಡೆದ ಗೌಣ ಪದ್ಧತಿ
author img

By

Published : May 7, 2022, 1:22 PM IST

Updated : May 7, 2022, 1:50 PM IST

ಸರನ್ (ಛಾಪ್ರಾ): 70 ವರ್ಷದ ವೃದ್ಧನೊಬ್ಬನಿಗೆ 42 ವರ್ಷಗಳ ನಂತರ ವಧುವಿನ ಡೊಂಗಾವನ್ನು (ಗಾಂವ್) ಕುಟುಂಬಸ್ಥರು ಮಾಡಿದ್ದಾರೆ. ಈ ಸಮಯದಲ್ಲಿ, ಮೆರವಣಿಗೆ ಸಂಪೂರ್ಣ ರಾಜ ವೈಭವದಿಂದ ಕಂಗೊಳಿಸುತ್ತಿತ್ತು. ಈ ವಿಶಿಷ್ಟ ಮೆರವಣಿಗೆಯನ್ನು ನೋಡಲು ಜನಸಾಗರವೇ ನೆರೆದಿತ್ತು. ಸಾವಿರಾರು ಜನರು ಮೆರವಣಿಗೆಗೆ ಸಾಕ್ಷಿಯಾದರು. 70ವರ್ಷ ವಯಸ್ಸಿನ ವಯಸ್ಸಿನ ರಾಜ್‌ಕುಮಾರ್ ಸಿಂಗ್ ಅವರಿಗೆ ಅವರು ಜೀವನದ ಈ ಹಂತವನ್ನು ಸ್ಮರಣೀಯವಾಗಿಸಿದ್ದಾರೆ. ಈ ಘಟನೆಯು ಛಾಪ್ರಾ ಜಿಲ್ಲೆಯ ಎಕ್ಮಾ ಬ್ಲಾಕ್‌ನ ಆಮ್ದಾಧಿ ಗ್ರಾಮದಲ್ಲಿ ನಡೆದಿದೆ.

42 ವರ್ಷಗಳ ಬಳಿಕ ಮಕ್ಕಳಿಂದ ನಡೆದ ಗೌಣ ಪದ್ಧತಿ

ಮದುವೆ ಸಂಭ್ರಮದಲ್ಲಿ ಮುಳುಗಿದ ಗ್ರಾಮ: ಮದುವೆಯಾಗಿ 42 ವರ್ಷಗಳ ಬಳಿಕ ರಾಜ್‌ಕುಮಾರ್ ಸಿಂಗ್ ಮತ್ತು ಅವರ ಪತ್ನಿ ಗೌಣ ಪದ್ಧತಿ ನೆರವೇರಿಸಲು ರಥವೇರಿ ಅಚ್ಚರಿ ಮೂಡಿಸಿದ್ದಾರೆ. ಗ್ರಾಮದಿಂದ ಹೊರಟ ಈ ಮೆರವಣಿಗೆ ಕಂಡು ಜನರು ಬೆರಗಾದರು. ರಾಜಮನೆತನದ ಶೈಲಿಯಲ್ಲಿ ಮೆರವಣಿಗೆ ನಡೆಸಲಾಯಿತು. ಆನೆ, ಕುದುರೆ, ಒಂಟೆ, ಬ್ಯಾಂಡ್ ಪಾರ್ಟಿ, ಡಿಜೆ, ವಾದ್ಯ ಮೇಳಗಳೊಂದಿಗೆ ಮೆರವಣಿಗೆಯನ್ನು ಅದ್ಧೂರಿಯಾಗಿ ನಡೆಸಲಾಯಿತು.

ಗೌಣ ಪದ್ಧತಿ: 42 ವರ್ಷಗಳ ಹಿಂದೆ ತನ್ನ ಮದುವೆಯಲ್ಲಿ ನಚಾಪ್ ಗ್ರಾಮದಿಂದ ಮದುವೆ 'ಬಾರತ್'(ಮದುವೆ ಮೆರವಣಿಗೆ) ಬಂದಿತ್ತು. ಮದುವೆಯಾದ ಬಳಿಕ ಈ ಬಾರತ್​ಅನ್ನು ಮತ್ತೆ ನಮ್ಮ ಅತ್ತೆ ಮನೆಗೆ ವಾಪಸ್​ ಕಳಿಸುವ ಪದ್ಧತಿ ಇರುತ್ತೆ. ಆ ಸಮಯದಲ್ಲಿ ಬಾರತ್​ ಜತೆ ನಮ್ಮ ಪತ್ನಿಯೂ ತೆರಳುತ್ತಾರೆ. ಅದಾದ ನಂತರ ಅತ್ತೆ ಮನೆಯಿಂದ ಹೆಂಡ್ತಿಯನ್ನು ಕರೆದುಕೊಂಡು ಬರುವ ಪದ್ಧತಿ ಇರುತ್ತೆ. ಈ ಪದ್ಧತಿಗೆ ಗೌಣ ಎನ್ನುತ್ತಾರೆ. ಆದ್ರೆ ಆ ಸಮಯದಲ್ಲಿ ನಾವು ಈ ಪದ್ಧತಿಯನ್ನು ಮಾಡಿರಲಿಲ್ಲ ಎಂದು ಮದುಮಗನಾಗಿರುವ ರಾಜ್‌ಕುಮಾರ್ ಸಿಂಗ್ ಹೇಳಿದ್ದಾರೆ.

ಜನ ಸಾಗರ: 70 ವರ್ಷದ ವೃದ್ಧರೊಬ್ಬರ ಗೌಣ ಪದ್ಧತಿಯ ಮೆರವಣಿಗೆಯಲ್ಲಿ ಅವರ ಏಳು ಹೆಣ್ಣುಮಕ್ಕಳು, ಒಬ್ಬ ಮಗ ಮತ್ತು ಮೊಮ್ಮಕ್ಕಳು ಸೇರಿ ಇಡೀ ಊರೇ ಭಾಗಿಯಾಗಿತ್ತು. ಎಲ್ಲರೂ ಬ್ಯಾಂಡ್-ಬಾಜಾ ಮತ್ತು ಡಿಜೆ ಸೌಂಡ್​ಗೆ ಕುಣಿದು ಕುಪ್ಪಳಿಸಿದರು. ಇಡೀ ಗ್ರಾಮವೇ ಮದುವೆಯ ಗೌಣ ಸಂಭ್ರಮದಲ್ಲಿ ಮುಳುಗಿತ್ತು. ಈ ವಿಶಿಷ್ಟ ಮದುವೆ ಪದ್ಧತಿಯನ್ನು ನೋಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ಮದುವೆಯಿಂದಾಗಿ ವೃದ್ಧ ದಂಪತಿ ಸಂತಸಪಟ್ಟರು.

Unique Marriage in Bihar  Saran Unique Marriage  70 Year Old Man Barat in Chapra  Aamdadhi village Chapra  barat of seventy year old man in Chapra  ಮದುವೆ ಸಂಭ್ರಮದಲ್ಲಿ ಮುಳುಗಿದ ಬಿಹಾರದ ಆಮ್ದಾಧಿ ಗ್ರಾಮ  ಸರನ್​ ಜಿಲ್ಲೆಯಲ್ಲಿ ವಿಶಿಷ್ಠ ಮದುವೆ  ಗೌಣ ಪದ್ಧತಿ ಎಂದರೇನು  42 ವರ್ಷಗಳ ಹಿಂದೆ ಮದುವೆ ರಾಜ್​ಕುಮಾರ್​ ಸಿಂಗ್​ 42 ವರ್ಷಗಳ ಬಳಿಕ ಗೌಣ ಪದ್ಧತಿ ನೆರವೆರಿಸಿದ ರಾಜಕುಮಾರ್​ ಕುಟುಂಬ  ಬಿಹಾರ್​ ಪೊಲೀಸ್​ ಇಲಾಖೆ ಮತ್ತು ಸೇನೆಯಲ್ಲಿ ಮಕ್ಕಳ ಕಾರ್ಯ
42 ವರ್ಷಗಳ ಬಳಿಕ ಮಕ್ಕಳಿಂದ ನಡೆದ ಗೌಣ ಪದ್ಧತಿ

42 ವರ್ಷಗಳ ಹಿಂದೆ ಮದುವೆ: ರಾಜ್‌ಕುಮಾರ್ ಸಿಂಗ್ 42 ವರ್ಷಗಳ ಹಿಂದೆ ಮೇ 5 ರಂದು ವಿವಾಹವಾಗಿದ್ದರು. ಆದರೆ ಅವರು ತಮ್ಮ ಪತ್ನಿಯನ್ನು ಆಕೆಯ ತವರು ಮನೆಗೆ ಕಳಿಸುವ ಪದ್ಧತಿಯನ್ನು ಮಾಡಿರಲಿಲ್ಲ. ಹೆಂಡತಿ ತನ್ನ ತಾಯಿಯ ಮನೆಯಿಂದ ತನ್ನ ಗಂಡನ ಮನೆಗೆ ಎರಡನೇ ಬಾರಿಗೆ ತೆರಳುವ ಆಚರಣೆಗೆ ಗೌಣ ಎನ್ನುತ್ತಾರೆ. ಈಗ ಈ ಆಚರಣೆಯನ್ನು ರಾಜ್‌ಕುಮಾರ್ ಸಿಂಗ್ ಮತ್ತು ಅವರ ಮಕ್ಕಳು ಸ್ಮರಣೀಯವಾಗಿಸಿದ್ದಾರೆ.

ಪೊಲೀಸ್​ ಇಲಾಖೆ, ಸೇನೆಯಲ್ಲಿ ಕಾರ್ಯ: ರಾಜ್‌ಕುಮಾರ್ ಸಿಂಗ್ ತಮ್ಮ ಗ್ರಾಮದಲ್ಲಿ ಹಿಟ್ಟಿನ ಗಿರಣಿ ನಡೆಸಿ ಜೀವನ ಸಾಗಿಸಿದರು. ಅವರು ಜೀವನದುದ್ದಕ್ಕೂ ಸಾಕಷ್ಟು ಕಷ್ಟಪಟ್ಟು ತನ್ನ ಏಳು ಮಂದಿ ಹೆಣ್ಣುಮಕ್ಕಳು ಮತ್ತು ಮಗನಿಗೆ ಓದಿಸಿದ್ದಾರೆ. ಏಳು ಜನ ಹೆಣ್ಮಕ್ಕಳು ಬಿಹಾರ ಪೊಲೀಸ್ ಮತ್ತು ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಒಬ್ಬನೇ ಮಗ ಇಂಜಿನಿಯರ್ ಪದವಿ ಮುಗಿಸಿದ್ದಾರೆ.

ಪತ್ನಿಯನ್ನು ಮನೆಗೆ ಕರೆತಂದ ರಾಜ್​ಕುಮಾರ್​: ಗೌಣ ಪದ್ಧತಿ ನಡೆದಿಲ್ಲವೆಂಬುದು ಬೆಳೆದು ನಿಂತ ಮಕ್ಕಳಿಗೆ ತಿಳಿದಿದೆ. ಅವರೆಲ್ಲರೂ ಕೂಡಿ ತಂದೆ-ತಾಯಿಗೆ ಗೌಣ ಪದ್ಧತಿ ಮಾಡಲು ಮುಂದಾದರು. ಅದರಂತೆ ಭರ್ಜರಿ ತಯಾರಿ ನಡೆಸಿದ್ದರು. ಮಕ್ಕಳ ಒತ್ತಾಯದ ಮುಂದೆ ರಾಜ್‌ಕುಮಾರ್ ಸಿಂಗ್ ತಲೆಬಾಗಬೇಕಾಯಿತು. ಮದುಮಗ ರಾಜ್​ಕುಮಾರ್​ ಸಿಂಗ್​ ತನ್ನ ಹೆಂಡತಿಯನ್ನು ಕರೆತರಲು ಮೆರವಣಿಗೆಯೊಂದಿಗೆ ತನ್ನ ಅತ್ತೆ ಮನೆಗೆ ತೆರಳಿದರು. ವರನ ಈ ಶೈಲಿ ಪತ್ನಿಗೂ ಇಷ್ಟವಾಗಿತ್ತು. ರಾಜ್‌ಕುಮಾರ್ ಸಿಂಗ್ ಅವರ ಈ ಮದುವೆಯ ಗೌಣ ಪದ್ಧತಿ ಇಡೀ ಗ್ರಾಮದಲ್ಲಿ ಸಂಭ್ರಮದಂತೆ ಕಂಡುಬಂತು.

Last Updated : May 7, 2022, 1:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.