ETV Bharat / bharat

ಹಾಡ ಹಗಲೇ ATM ಕಳ್ಳತನ, ದುಷ್ಕರ್ಮಿಗಳಿಂದ ಗುಂಡಿನ ದಾಳಿ: ಹೈದರಾಬಾದ್​​ನಲ್ಲಿ ಬ್ಯಾಂಕ್​​ ಉದ್ಯೋಗಿ ಸಾವು

author img

By

Published : Apr 29, 2021, 7:45 PM IST

ದರೋಡೆಕೋರರ ಗುಂಪುವೊಂದು ಸಿನಿಮೀಯ ರೀತಿಯಲ್ಲೇ ಹಾಡಹಗಲೇ ಎಟಿಎಂ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

ATM Bank guard killed
ATM Bank guard killed

ಹೈದರಾಬಾದ್​​: ಇಲ್ಲಿನ ಕುಕ್ಕಟ್​ಪಲ್ಲಿಯ ಪಟೇಲ್​ ಕುಂಟಾ ಪಾರ್ಕ್​ ಬಳಿಯ ಎಚ್​ಡಿಎಫ್​ಸಿ ಬ್ಯಾಂಕ್​ ಎಟಿಎಂನಲ್ಲಿ ಅಪರಿಚಿತ ಬಂದೂಕುದಾರಿಗಳು ಗುಂಡು ಹಾರಿಸಿ, ದರೋಡೆ ಮಾಡಿ ಪರಾರಿಯಾಗಿದ್ದಾರೆ. ಪರಿಣಾಮ ಬ್ಯಾಂಕ್​ ಉದ್ಯೋಗಿ ಸಾವನ್ನಪ್ಪಿದ್ದಾನೆ.

ಹಾಡಹಗಲೇ ATM ಕಳ್ಳತನ

ಎಟಿಎಂ ಕಳ್ಳತನ ಮಾಡುವ ಉದ್ದೇಶದಿಂದ ಶಸ್ತ್ರಸಜ್ಜಿತ ದರೋಡೆಕೋರರು ಇಲ್ಲಿಗೆ ಆಗಮಿಸಿದ್ದಾರೆ. ಈ ವೇಳೆ ಗುಂಡು ಹಾರಿಸಿದ್ದರಿಂದ ಬ್ಯಾಂಕ್​ ಉದ್ಯೋಗಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬ್ಯಾಂಕ್​ ಸೆಕ್ಯುರಿಟಿ ಗಾರ್ಡ್​ ಆಗಿದ್ದ ಮಾಜಿ ಸೈನಿಕ ಅಲಿ ಬೇಗ್​ ಸಾವನ್ನಪ್ಪಿದ್ದು, ಮತ್ತೋರ್ವ ಬ್ಯಾಂಕ್​ ಉದ್ಯೋಗಿ ಶ್ರೀನಿವಾಸ್​ ಗಾಯಗೊಂಡಿದ್ದಾರೆ. ಈ ವೇಳೆ 5 ಲಕ್ಷ ರೂ. ದರೋಡೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ದ್ವಿಚಕ್ರ ವಾಹನದಲ್ಲಿ ಆಗಮಿಸಿರುವ ದರೋಡೆಕೋರರು ಎಟಿಎಂನಲ್ಲಿ ಹಣ ಹಾಕುತ್ತಿದ್ದಾಗ ಬ್ಯಾಂಕ್​ ನೌಕರರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಓರ್ವ ಉದ್ಯೋಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಸ್ಕ್ರ್ಯಾಪ್​​ನಲ್ಲಿ ಜೀಪ್ : ಈ ವಿಶಿಷ್ಟ ವಾಹನ ನೋಡಿದ್ರೆ ನೀವೂ ಬೆರಗಾಗ್ತೀರಿ..!

ಸೈಬರಾಬಾದ್​ ಪೊಲೀಸ್​ ಆಯುಕ್ತ ವಿ.ಸಿ ಸಜ್ಜನವರ್​ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು. ಈ ವೇಳೆ, ಮಾತನಾಡಿರುವ ಅವರು, ಅಪರಾಧಿಗಳು ನಗರ ತೊರೆಯದಂತೆ ತಡೆಯಲು ಎಲ್ಲ ಚೆಕ್​ ಪೋಸ್ಟ್​ ಬಂದ್ ಮಾಡಲಾಗಿದೆ ಎಂದಿದ್ದಾರೆ. ಘಟನೆಯಲ್ಲಿ ಅಂತಾರಾಜ್ಯ ಗ್ಯಾಂಗ್​ ಭಾಗಿಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು, ಹೆಚ್ಚಿನ ಸುಳಿವು ಪಡೆದುಕೊಳ್ಳುವ ಉದ್ದೇಶದಿಂದ ಸಿಸಿಟಿವಿ ದೃಶ್ಯಾವಳಿ ಪರೀಕ್ಷೆ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.