ETV Bharat / bharat

ಮತ್ತೊಂದು ಗಡಿಯಾಚೆಗಿನ ಪ್ರೇಮ ಪ್ರಕರಣ: ಒಂದು ವರ್ಷದ ಮಗನೊಂದಿಗೆ ಪತಿ ಅರಸಿ ನೋಯ್ಡಾಕ್ಕೆ ಬಂದ ಬಾಂಗ್ಲಾ ಮಹಿಳೆ

Bangladeshi woman arrives in Noida: ಬಾಂಗ್ಲಾದೇಶದ ಮಹಿಳೆಯೊಬ್ಬರು ತಮ್ಮ ಒಂದು ವರ್ಷದ ಮಗನೊಂದಿಗೆ ಉತ್ತರ ಪ್ರದೇಶದ ನೋಯ್ಡಾಕ್ಕೆ ಬಂದಿದ್ದಾರೆ. ಸುಮಾರು ಮೂರು ವರ್ಷಗಳ ಹಿಂದೆ ಭಾರತ ಮೂಲದ ವ್ಯಕ್ತಿಯನ್ನು ತನ್ನ ದೇಶದಲ್ಲಿ ಮದುವೆಯಾಗಿದ್ದೇನೆ. ಈಗ ತನ್ನ ಪತಿಯೊಂದಿಗೆ ವಾಸಿಸಲು ಬಯಸುತ್ತೇನೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

Noida
ನೋಯ್ಡಾ
author img

By ETV Bharat Karnataka Team

Published : Aug 22, 2023, 11:09 AM IST

ನವದೆಹಲಿ/ನೋಯ್ಡಾ: ಇತ್ತೀಚಿಗೆ ಗಡಿಯಾಚೆಗಿನ ಪ್ರೇಮ ಕಥೆಗಳು ಹೆಚ್ಚಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯ, ದೇಶದ ಗಡಿಯಾಚೆಗಿನ ವ್ಯಕ್ತಿಗಳ ಜೊತೆ ಮದುವೆ ಸರಣಿ ಪ್ರಕರಣಗಳಿಗೆ ಇನ್ನೊಂದು ಸೇರ್ಪಡೆಯಾಗಿದೆ. ಪಾಕಿಸ್ತಾನದ ಸೀಮಾ ಹೈದರ್ ನಂತರ ಇದೀಗ ಬಾಂಗ್ಲಾದೇಶದ ಮಹಿಳೆಯೊಬ್ಬರು ತನ್ನ ಒಂದು ವರ್ಷದ ಮಗುವಿನೊಂದಿಗೆ ನೋಯ್ಡಾಕ್ಕೆ ಆಗಮಿಸಿದ್ದಾರೆ.

ಮಹಿಳೆ ಭಾರತದ ನಿವಾಸಿ ಸೌರಭಕಾಂತ್ ತಿವಾರಿ ಎಂಬಾತನನ್ನು ಮೂರು ವರ್ಷಗಳ ಹಿಂದೆ ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಮದುವೆಯಾಗಿ ಕೆಲವು ಸಮಯದ ನಂತರ ಭಾರತಕ್ಕೆ ಮರಳಿದ ಪತಿ ಬಳಿಕ ಹಿಂದಿರುಗಲಿಲ್ಲ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಮಹಿಳೆಯ 20 ಸೆಕೆಂಡ್​​ಗಳ ವಿಡಿಯೋ ಮಾಡಿದ್ದಾರೆ. ಇದರಲ್ಲಿ ಮಹಿಳೆ ಪತಿಯನ್ನು ಹುಡುಕಿಕೊಂಡು ಭಾರತಕ್ಕೆ ಬಂದಿರುವ ಬಗ್ಗೆ ಮಾತನಾಡುತ್ತಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸ್ ಕಾರಿನಲ್ಲಿ ಕುಳಿತಿರುವ ಬಾಂಗ್ಲಾ ಮಹಿಳೆಯ ಸುತ್ತ ಮಹಿಳಾ ಪೊಲೀಸರು ಕೂಡ ಇದ್ದಾರೆ.

ಈ ಕುರಿತು ಸೋಮವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾರೆ. ಎಸಿಪಿ ಮಹಿಳಾ ಭದ್ರತಾ ಸಿಬ್ಬಂದಿ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ದೂರಿನಲ್ಲಿ ಬಾಂಗ್ಲಾದೇಶದ ಢಾಕಾದ ಮಹಿಳೆಯೊಬ್ಬರು ಸೌರಭಕಾಂತ್ ತಿವಾರಿ ಎಂಬ ಯುವಕ ತನ್ನನ್ನು 14 ಏಪ್ರಿಲ್ 2021ರಂದು ಬಾಂಗ್ಲಾದೇಶದಲ್ಲಿ ವಿವಾಹವಾಗಿದ್ದರು ಎಂದು ಹೇಳಿದ್ದಾರೆ. ಈಗ ಸೌರಭಕಾಂತ್ ಅವರನ್ನು ಬಿಟ್ಟು ಭಾರತಕ್ಕೆ ವಾಪಸ್​ ಆಗಿದ್ದಾರೆ. ಈ ನಡುವೆ, ಮಹಿಳೆ ಮತ್ತು ಸೌರಭ್‌ಗೆ ಒಬ್ಬ ಮಗ ಕೂಡ ಜನಿಸಿದ್ದಾನೆ. ಆದರೆ, ಸೌರಭ್ ಈಗಾಗಲೇ ಮದುವೆಯಾಗಿದ್ದು, ಈ ಸಂಗತಿಯನ್ನು ತನ್ನಿಂದ ಮುಚ್ಚಿಟ್ಟಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಸೌರಭಕಾಂತ್ ಢಾಕಾದಲ್ಲಿರುವ ಕಲ್ಟಿ ಮ್ಯಾಕ್ಸ್ ಎನರ್ಜಿ ಪ್ರೈವೇಟ್ ಲಿಮಿಟೆಡ್‌ನಲ್ಲಿ ಜನವರಿ 2017 ರಿಂದ ಡಿಸೆಂಬರ್ 2021 ರವರೆಗೆ ಕೆಲಸ ಮಾಡುತ್ತಿದ್ದರು ಎಂದು ಮಹಿಳೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಮಹಿಳೆ ತನ್ನ ಮತ್ತು ಮಗನ ಪಾಸ್‌ಪೋರ್ಟ್, ವೀಸಾ ಮತ್ತು ಸಿಟಿಜನ್ ಕಾರ್ಡ್ ಅನ್ನು ಕೂಡ ಪೊಲೀಸರಿಗೆ ನೀಡಿದ್ದಾರೆ. ಸೌರಭಕಾಂತ್ ತಿವಾರಿ ಬಾಂಗ್ಲಾದೇಶದಲ್ಲಿ ಮಹಿಳೆಯನ್ನು ವಿವಾಹವಾಗಿದ್ದಾರೆ ಎಂದು ಗೌತಮ್ ಬುದ್ಧ ನಗರ ಕಮಿಷನರೇಟ್‌ನ ಮಾಧ್ಯಮ ಕೋಶ ಹೇಳಿದೆ. ಘಟನೆ ನಡೆದ ಸ್ಥಳ ಬಾಂಗ್ಲಾದೇಶದ್ದು. ಈ ಪ್ರಕರಣದ ತನಿಖೆಯನ್ನು ಮಹಿಳಾ ಎಸಿಪಿಗೆ ನೀಡಲಾಗಿದೆ. ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸೌರಭ್ ಎಲ್ಲಿಂದ ಬಂದಿದ್ದಾನೆ ಎಂಬ ಸಂಪೂರ್ಣ ಮಾಹಿತಿ ಮಹಿಳೆಗೆ ಇಲ್ಲ. ತನಿಖೆ ನಂತರ ಎಲ್ಲ ಮಾಹಿತಿ ಹೊರಬೀಳಲಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಪಾಕಿಸ್ತಾನ ಮೂಲದ ಸೀಮಾ ಹೈದರ್ ಎಂಬ ಮಹಿಳೆ ತನ್ನ ನಾಲ್ಕು ಮಕ್ಕಳೊಂದಿಗೆ ಪ್ರಿಯಕರರನಿಗಾಗಿ ನೇಪಾಳದ ಮೂಲಕ ನೋಯ್ಡಾಕ್ಕೆ ಬಂದಿದ್ದಳು. ಸೀಮಾ ಹೈದರ್ ಈಗ ತನ್ನ ಗೆಳೆಯ ಸಚಿನ್ ಜೊತೆ ನೋಯ್ಡಾದಲ್ಲಿ ವಾಸಿಸುತ್ತಿದ್ದಾರೆ. ಆನ್‌ಲೈನ್ ಪಬ್​ಜಿ ಗೇಮ್ ಆಡುವಾಗ ಸೀಮಾ ಮತ್ತು ಸಚಿನ್ ನಡುವೆ ಪ್ರೇಮಾಂಕುರವಾಗಿತ್ತು.

ಇದನ್ನೂ ಓದಿ: ಸೀಮಾ ಹೈದರ್‌ ಪಾಕಿಸ್ತಾನದ ಐಎಸ್‌ಐ ಮಹಿಳಾ ಏಜೆಂಟ್​ ​ ಎಂಬ ಅನುಮಾನ: ತೀವ್ರಗೊಂಡ ತನಿಖೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.