ಚೆನ್ನೈ(ತಮಿಳುನಾಡು) : ತನ್ನ ಮಗಳನ್ನು ನಿತ್ಯಾನಂದ ಆಶ್ರಮದಿಂದ ರಕ್ಷಿಸುವಂತೆ ಬೆಂಗಳೂರಿನ ವ್ಯಕ್ತಿ ದೂರು ಸಲ್ಲಿಸಿದ್ದಾರೆ. ನಾಗೇಶ್ ಎಂಬುವರು ಬೆಂಗಳೂರಿನ ಆರ್‌ಆರ್‌ನಗರದ ನಿವಾಸಿಯಾಗಿದ್ದಾರೆ. ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ಪತ್ನಿ ಮಾಲಾ ಪ್ರಾಧ್ಯಾಪಕಿಯಾಗಿದ್ದು, ಅವರಿಗೆ ವೈಷ್ಣವಿ ಮತ್ತು ವರುದುನಿ (22) ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಇನ್ನು ನಾಗೇಶ್ ಮತ್ತು ಅವರ ಕುಟುಂಬ ಬೆಂಗಳೂರಿನ ನಿತ್ಯಾನಂದ ಆಶ್ರಮಕ್ಕೆ ಸೇರಿದ್ದರು. ಆದರೆ, ಕಾರಣಾಂತರದಿಂದ ಕೆಲ ದಿನಗಳ ನಂತರ ನಾಗೇಶ್ ಮತ್ತು ಅವರ ಪತ್ನಿ ಹಾಗೂ ಹಿರಿಯ ಮಗಳು ಆಶ್ರಮವನ್ನು ತೊರೆದಿದ್ದಾರೆ. ಆದರೆ, ಕಿರಿಯ ಮಗಳು ವರುದುನಿ ಆಶ್ರಮದಲ್ಲಿಯೇ ಉಳಿದಿದ್ದಾಳೆ.
ಇದೇ ವೇಳೆ ನಾಗೇಶ್ ಆಶ್ರಮದ ಆಡಳಿತ ಮಂಡಳಿಗೆ ತಮ್ಮ ಮಗಳನ್ನು ತನ್ನೊಂದಿಗೆ ಕಳುಹಿಸುವಂತೆ ಕೋರಿದ್ದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಬೆಂಗಳೂರಿನ ಆಶ್ರಮದಿಂದ ವರುದುನಿಯನ್ನು ಸ್ಥಳಾಂತರಿಸಲಾಗಿದೆ ಎಂದು ಆಶ್ರಮದ ಅಧಿಕಾರಿಗಳು ತಿಳಿಸಿದ್ದಾರೆ.
ವರುಧುನಿಯ ತಂದೆ ನಾಗೇಶ್ ಒಮ್ಮೆ ತಿರುವಣ್ಣಾಮಲೈನಲ್ಲಿರುವ ನಿತ್ಯಾನಂದ ಆಶ್ರಮಕ್ಕೆ ಭೇಟಿ ನೀಡಿದಾಗ ಅವರ ಮಗಳು ಅಲ್ಲೇ ಕಾಣಿಸಿಕೊಂದ್ದಾಳಂತೆ. ಆದರೂ ಅವರ ಮಗಳು ಇಲ್ಲಿಲ್ಲ ಎಂದು ಆಶ್ರಮದ ಆಡಳಿತ ಮಂಡಳಿಯವರು ಪದೇ ಪದೇ ಹೇಳುತ್ತಿದ್ದಾರಂತೆ.
ಮಗಳನ್ನು ಅಲ್ಲಿಂದ ಬಿಡಿಸುವುದು ಹೇಗೆಂದು ತಿಳಿಯದೇ ಮಗಳನ್ನು ರಕ್ಷಿಸುವಂತೆ ಕೋರಿ ತಿರುವಣ್ಣಾಮಲೈ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಗೇಶ್ ದೂರು ದಾಖಲು ಮಾಡಿದ್ದಾರೆ.
ಇದನ್ನೂ ಓದಿ: ಖಜಾನೆಯಲ್ಲೇ ಉಳಿದ ಜಯಲಲಿತಾ ಬೆಲೆಬಾಳುವ ಸೀರೆ, ವಾಚ್, ಚಪ್ಪಲಿ: ಹರಾಜು ಹಾಕುವಂತೆ ಸುಪ್ರೀಂಗೆ ಮನವಿ