ನವದೆಹಲಿ: ಬಾಂಗ್ಲಾದೇಶದ ಪಿತಾಮಹ ದಿವಂಗತ ಬಂಗ ಬಂಧು ಶೇಖ್ ಮುಜಿಬುರ್ ರಹಮಾನ್ ಹಾಗೂ ಒಮನ್ನ ದಿವಂಗತ ಸುಲ್ತಾನ್ ಕಬೂಸ್ ಅವರಿಗೆ ಪ್ರತಿಷ್ಠಿತ 'ಗಾಂಧಿ ಪ್ರಶಸ್ತಿ' ನೀಡಿ ಗೌರವಿಸಲಾಗುತ್ತಿದೆ.
ಬಾಂಗ್ಲಾದೇಶದ ಮಾಜಿ ಅಧ್ಯಕ್ಷರಾಗಿರುವ ಬಂಗಬಂಧು ಶೇಖ್ ಅವರು ಬಾಂಗ್ಲಾದ ಪ್ರಧಾನಿ ಶೇಖ್ ಹಸೀನಾ ಅವರ ತಂದೆಯಾಗಿದ್ದಾರೆ. ಬಂಗಬಂಧು ಅವರು 2020ರ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿಗೆ ಹಾಗೂ ಸುಲ್ತಾನ್ ಕಬೂಸ್ ಅವರು 2019ನೇ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ತಿಳಿಸಿದೆ. ಇದೇ ಮೊದಲ ಬಾರಿಗೆ ಮರಣೋತ್ತರವಾಗಿ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಇದನ್ನೂ ಓದಿ: ಜಯಾ ಪಾತ್ರಕ್ಕೆ ಜೀವ ತುಂಬಿದ ಕಂಗನಾ: 'ತಲೈವಿ' ಟ್ರೈಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್
1995ರಲ್ಲಿ ಗಾಂಧೀಜಿಯ 125ನೇ ಜನ್ಮ ದಿನಾಚರಣೆಯ ನಿಮಿತ್ತ ಭಾರತ ಸರ್ಕಾರ ವಿವಿಧ ದೇಶಗಳಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನೀಡಲು ಆರಂಭಿಸಿತು.