ETV Bharat / bharat

ಬಾವಿ ಶುಚಿಗೊಳಿಸುವಾಗ ದುರಂತ.. ಮೂವರು ಒಡಹುಟ್ಟಿದವರು ಸೇರಿ ಐವರ ಸಾವು! - ಮಧ್ಯಪ್ರದೇಶ ಅಪರಾಧ ಸುದ್ದಿ

ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ದುರಂತವೊಂದು ಸಂಭವಿಸಿದೆ. ಇಲ್ಲಿನ ಗ್ರಾಮದಲ್ಲಿ ಬಾವಿ ಸ್ವಚ್ಛಗೊಳಿಸಲು ಬಂದಿದ್ದ ಆರು ಯುವಕರಲ್ಲಿ ಮೂವರು ಸಹೋದರರು ಸೇರಿದಂತೆ ಐವರು ಸಾವನ್ನಪ್ಪಿದ್ದು, ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಈ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸಿಎಂ ಶಿವರಾಜ್ ಕೂಡ ಸಂತಾಪ ಸೂಚಿಸಿದ್ದಾರೆ.

youths dead in balaghat  Madhya Pradesh crime news  Youths cleaning well in Madhya Pradesh  ಬಾಲಘಾಟ್​ನಲ್ಲಿ ಯುವಕರ ಸಾವು  ಮಧ್ಯಪ್ರದೇಶ ಅಪರಾಧ ಸುದ್ದಿ  ಮಧ್ಯಪ್ರದೇಶದಲ್ಲಿ ಬಾವಿ ಸ್ವಚ್ಛತೆ ವೇಳೆ ಯುವಕರು ಸಾವು
ಮೂವರು ಒಡಹುಟ್ಟಿದವರು ಸೇರಿ ಐವರು ಸಾವು
author img

By

Published : Jun 9, 2022, 8:07 AM IST

Updated : Jun 9, 2022, 8:19 AM IST

ಬಾಲಘಾಟ್: ಬಿರ್ಸಾ ಪೊಲೀಸ್ ಠಾಣಾ ವ್ಯಾಪ್ತಿಯ ಕುಡಾನ್ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ನೀರಿನ ಅಭಾವದಿಂದ ಬಾವಿ ಸ್ವಚ್ಛಗೊಳಿಸಲು ತೆರಳಿದ್ದ ಆರು ಯುವಕರಲ್ಲಿ ಐವರು ಸಾವನ್ನಪ್ಪಿರುವ ದುರಂತ ಬೆಳಕಿಗೆ ಬಂದಿದೆ. ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ.

ನಡೆದಿದ್ದೇನು?: ಗ್ರಾಮದಲ್ಲಿ ಇತ್ತೀಚಿನ ದಿನಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಹೇಳಲಾಗುತ್ತಿದೆ. ಇಲ್ಲಿನ ಬಾವಿಯಲ್ಲಿ ಕಸ ಬಿದ್ದಿದ್ದರಿಂದ ಗ್ರಾಮದ ಯುವಕರು ಸ್ವಚ್ಛತೆಗೆ ಮುಂದಾಗಿದ್ದಾರೆ. ಶುಚಿಗೊಳಿಸಲು ಆರು ಯುವಕರು ಬಾವಿಗೆ ಇಳಿದಿದ್ದು, ಸ್ವಚ್ಛಗೊಳಿಸುವ ವೇಳೆ ಬಾವಿಯ ಕೆಳಭಾಗದಲ್ಲಿ ವಿಷಾನಿಲ ಸೋರಿಕೆಯಾಗಿದೆ.

  • बालाघाट के कुदान गांव में कुएं में जहरीली गैस के रिसाव से हुई दुर्घटना में अनमोल जिंदगियों के असमय निधन का दुखद समाचार प्राप्त हुआ।

    ईश्वर से दिवंगत आत्माओं को अपने श्री चरणों में स्थान और परिजनों को यह गहन दु:ख सहन करने की शक्ति देने की प्रार्थना करता हूं। विनम्र श्रद्धांजलि!

    — Shivraj Singh Chouhan (@ChouhanShivraj) June 8, 2022 " class="align-text-top noRightClick twitterSection" data=" ">

ಹೀಗಾಗಿ ಯುವಕರೆಲ್ಲರೂ ಮೂರ್ಛೆ ಹೋಗಿದ್ದಾರೆ. ಗ್ರಾಮಸ್ಥರು ಅವರನ್ನು ಹೇಗೋ ಬಾವಿಯಿಂದ ಹೊರತೆಗೆದು ಬಿರ್ಸಾ ಆಸ್ಪತ್ರೆಗೆ ಕರೆದೊಯ್ದರು. ಆದರೆ, ವೈದ್ಯರು ಐದು ಜನರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಇನ್ನೊಬ್ಬ ಯುವಕನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು. ಆದರೆ, ಮೃತರಲ್ಲಿ ಮೂವರು ಸಹೋದರರೂ ಸೇರಿರುವುದು ವಿಧಿಯಾಟವಾಗಿದೆ.

ಓದಿ: ಒಳ ಚರಂಡಿ ದುರಸ್ತಿಗೆ ತೆರಳಿದ್ದ ಮೂವರು ವಿಷ ಅನಿಲ ಸೇವಿಸಿ ಸಾವು!

ಸಂತಾಪ ವ್ಯಕ್ತಪಡಿಸಿದ ಸಿಎಂ: ಈ ದುರಂತದ ಬಗ್ಗೆ ತಿಳಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಐವರು ಯುವಕರ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬ ಸದಸ್ಯರಿಗೆ ಈ ದುಃಖವನ್ನು ಭರಿಸುವ ಶಕ್ತಿ ಆ ದೇವರು ನೀಡಲಿ ಎಂದು ಸಿಎಂ ಪ್ರಾರ್ಥಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಯುವಕ ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಕಂದಾಯ ಇಲಾಖೆ ಸುತ್ತೋಲೆಯ ನಿಬಂಧನೆಗಳ ಪ್ರಕಾರ ಪರಿಹಾರ ಪ್ರಕರಣವನ್ನು ಸಿದ್ಧಪಡಿಸಿ ಮತ್ತು ಸಂತ್ರಸ್ತ ಕುಟುಂಬಗಳಿಗೆ ತಕ್ಷಣದ ಆರ್ಥಿಕ ನೆರವು ನೀಡುವಂತೆ ಜಿಲ್ಲಾಡಳಿತಕ್ಕೆ ಸಿಎಂ ಸೂಚಿಸಿದ್ದಾರೆ.

ಪರಿಹಾರ ಮೊತ್ತ ನೀಡಲಾಗುವುದು: ಜಿಲ್ಲಾಧಿಕಾರಿ ಡಾ.ಗಿರೀಶ್ ಕುಮಾರ್ ಮಿಶ್ರಾ ಅವರು ಜಿಲ್ಲಾ ರೆಡ್ ಕ್ರಾಸ್ ಸೊಸೈಟಿಯಿಂದ ಮೃತರ ಕುಟುಂಬಕ್ಕೆ ತಲಾ 20 ಸಾವಿರ ರೂ. ಸರ್ಕಾರದ ನಿಯಮಾನುಸಾರ ಮೃತರ ಕುಟುಂಬಗಳಿಗೂ ಪರಿಹಾರ ಮೊತ್ತ ನೀಡಲಾಗುವುದು ಎಂದು ಹೇಳಿದರು. ಮೃತರನ್ನು ತಮೇಶ್ವರ್ ಬಿಲ್ಸಾರೆ (20), ಪುನೀತ್ ಖುರ್ಚಂಡೆ (32), ಪನ್ನು (28), ಮಣ್ಣು ಖುರ್ಚಂಡೆ (20), ತೇಜಲಾಲ್ ಗೊಂಡ್ (28) ಎಂದು ಗುರುತಿಸಲಾಗಿದೆ.

ಪೊಲೀಸ್ ಆಡಳಿತವು ಗಾಯಾಳುವನ್ನು ಬಿರ್ಸಾ ಆಸ್ಪತ್ರೆಗೆ ಕರೆದೊಯ್ದು ತನಿಖೆಯಲ್ಲಿ ತೊಡಗಿದೆ. ಈ ಸಂದರ್ಭದಲ್ಲಿ ಬೈಹಾರ್ ವಿಧಾನಸಭಾ ಶಾಸಕ ಸಂಜಯ್ ಉಯಿಕೆ, ಮಾಜಿ ಶಾಸಕ ಭಗತ್ ನೇತಮ್, ಜಿಲ್ಲಾಧಿಕಾರಿ ಡಾ.ಗಿರೀಶ್ ಕುಮಾರ್ ಮಿಶ್ರಾ, ಎಸ್‌ಡಿಎಂ ತನ್ಮಯ್ ವಶಿಷ್ಠ ಶರ್ಮಾ, ತಹಸೀಲ್ದಾರ್ ದೇವಂತಿ ಪಾರ್ಟೆ ಮತ್ತು ಇತರ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.

Last Updated : Jun 9, 2022, 8:19 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.