ಸೂರತ್(ಗುಜರಾತ್): ರೆಸ್ಟೋರೆಂಟ್ವೊಂದರಲ್ಲಿ ಆಯೋಜನೆ ಮಾಡಲಾಗಿದ್ದ 'ಪಾಕಿಸ್ತಾನಿ ಆಹಾರೋತ್ಸವ'ದ ಬೃಹತ್ ಬ್ಯಾನರ್ ಕಿತ್ತೆಸೆದಿರುವ ಬಜರಂಗದಳ ಕಾರ್ಯಕರ್ತರು, ಅದಕ್ಕೆ ಬೆಂಕಿ ಹಚ್ಚಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ.
ಗುಜರಾತ್ನ ಸೂರತ್ನಲ್ಲಿನ ರೆಸ್ಟೋರೆಂಟ್ವೊಂದರಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇಲ್ಲಿಗೆ ತೆರಳಿರುವ ಬಜರಂಗದಳದ ಕಾರ್ಯಕರ್ತರು, ಜೈಶ್ರೀರಾಮ್, ಹರ್ ಹರ್ ಮಹಾದೇವ್ ಎಂಬ ಘೋಷಣೆ ಕೂಗಿ, ಬ್ಯಾನರ್ ಕಿತ್ತೆಸೆದಿದ್ದಾರೆ.
ಇದನ್ನೂ ಓದಿರಿ: ತನ್ನ ಇಚ್ಛೆಗೆ ವಿರುದ್ಧವಾಗಿ ಬಲವಂತದ ಲೈಂಗಿಕ ಕ್ರಿಯೆ... ಗಂಡನ ಮರ್ಮಾಂಗ ಕತ್ತರಿಸಿದ ಹೆಂಡ್ತಿ!
ಕಟ್ಟಡದ ಮೇಲೆ ನಿಲ್ಲಿಸಲಾಗಿದ್ದ ಬ್ಯಾನರ್ ತೆಗೆದು, ಬೆಂಕಿ ಹಚ್ಚಿ ತಮ್ಮ ಆಕ್ರೋಶ ಹೊರಹಾಕಿದ್ದು, ಇಂತಹ ಕಾರ್ಯಕ್ರಮ ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ದಕ್ಷಿಣ ಗುಜರಾತ್ ಬಜರಂಗದಳದ ಅಧ್ಯಕ್ಷ ದೇವಿಪ್ರಸಾದ್ ದುಬೆ, ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕಾಗಿ ರೆಸ್ಟೋರೆಂಟ್ ಕ್ಷಮೆಯಾಚನೆ ಮಾಡಿದೆ ಎಂದಿದ್ದಾರೆ.