ಪುರಿ(ಒಡಿಶಾ): ಗುಂಡಿಚಾ ದೇವಸ್ಥಾನದಲ್ಲಿ 9 ದಿನಗಳ ವಾರ್ಷಿಕ ವಾಸ್ತವ್ಯದ ನಂತರ, ಭಗವಾನ್ ಬಲಭದ್ರ, ದೇವಿ ಸುಭದ್ರ ಮತ್ತು ಭಗವಾನ್ ಜಗನ್ನಾಥ ಇಂದು ಪುರಿಯ ನಿವಾಸ ಶ್ರೀಮಂದಿರಕ್ಕೆ ವಾಪಸ್ ಆಗಲಿದ್ದಾರೆ. ಹೀಗೆ ಗುಂಡಿಚಾ ದೇವಸ್ಥಾನದಿಂದ ತಮ್ಮ ಮೂಲ ದೇವಸ್ಥಾನಕ್ಕೆ ಹಿಂದಿರುಗುವ ಪ್ರಯಾಣವನ್ನು ಬಹುದಾ ಯಾತ್ರೆ ಎಂದು ಕರೆಯಲಾಗುತ್ತದೆ. ಬಹುದಾ ಯಾತ್ರೆ ಸುಗಮವಾಗಿ ನೆರವೇರಿಸಲು ಒಡಿಶಾ ಸರ್ಕಾರ ಸಕಲ ವ್ಯವಸ್ಥೆಯನ್ನೂ ಮಾಡಿದೆ.
-
#WATCH | Odisha: Devotees dance and celebrate as Bahuda Rath Yatra or the ‘Return Car Festival’ to begin today from Gundicha Temple to Jagannath Temple in Puri, on the 9th day of Jagannath Rath Yatra. pic.twitter.com/T4ToyL2fh6
— ANI (@ANI) June 28, 2023 " class="align-text-top noRightClick twitterSection" data="
">#WATCH | Odisha: Devotees dance and celebrate as Bahuda Rath Yatra or the ‘Return Car Festival’ to begin today from Gundicha Temple to Jagannath Temple in Puri, on the 9th day of Jagannath Rath Yatra. pic.twitter.com/T4ToyL2fh6
— ANI (@ANI) June 28, 2023#WATCH | Odisha: Devotees dance and celebrate as Bahuda Rath Yatra or the ‘Return Car Festival’ to begin today from Gundicha Temple to Jagannath Temple in Puri, on the 9th day of Jagannath Rath Yatra. pic.twitter.com/T4ToyL2fh6
— ANI (@ANI) June 28, 2023
ಗುಂಡಿಚಾ ದೇವಸ್ಥಾನದೊಳಗೆ ಒಂದು ವಾರ ಕಳೆದ ನಂತರ, ದೇವತೆಗಳು 10 ನೇ ದಿನದಂದು ತಮ್ಮ ಬಹುದಾ ಯಾತ್ರೆ ನಡೆಯಲಿದೆ. ರಥ ಯಾತ್ರೆಯ ಸಮಯದಲ್ಲಿ ನಡೆಯುವ ಆಚರಣೆಯೇ ಬಹುದಾಯಾತ್ರೆ ವೇಳೆಯೂ ನಡೆಯಲಿದೆ. ಜಗನ್ನಾಥನ ರಥಯಾತ್ರೆಯಂದು ನಡೆಯುವ ಎಲ್ಲ ನಿಯಮಗಳು ಈ ಯಾತ್ರೆಯಲ್ಲೂ ಪಾಲನೆ ಆಗಲಿವೆ. ಭಗವಾನ್ ಜಗನ್ನಾಥ, ಬಲಭದ್ರ ಹಾಗೂ ಸುಭದ್ರಾ ತಮ್ಮ ಮೂಲ ಆವಾಸಕ್ಕೆ ಹಿಂದಿರುಗುವ ಪ್ರಯಾಣದ ಸಮಯದಲ್ಲಿ, ಮೂರು ರಥಗಳು ಅರ್ಧಸಾನಿ ದೇವಾಲಯ ಎಂದೂ ಕರೆಯಲ್ಪಡುವ ಮೌಸಿಮಾ ದೇವಾಲಯದಲ್ಲಿ ಸ್ವಲ್ಪ ಸಮಯದವರೆಗೆ ವಿರಮಿಸುತ್ತವೆ. ಈ ದೇವಾಲಯವು ಜಗನ್ನಾಥನ ಚಿಕ್ಕಮ್ಮನಿಗೆ ಸಮರ್ಪಿತವಾಗಿದೆ. ಇಲ್ಲಿ ಮೂರು ದೇವತೆಗಳಿಗೆ ಅಕ್ಕಿ, ತೆಂಗಿನಕಾಯಿ, ಉದ್ದಿನಬೇಳೆ ಮತ್ತು ಬೆಲ್ಲದಿಂದ ಮಾಡಿದ ವಿಶೇಷ ಸಿಹಿಯಾದ 'ಪೋಡಾ ಪಿತಾ'ವನ್ನು ಅರ್ಪಿಸಲಾಗುತ್ತದೆ.
-
#WATCH | Odisha: Bahuda Rath Yatra or the ‘Return Car Festival’ to begin today from Gundicha Temple to Jagannath Temple in Puri, on the 9th day of Jagannath Rath Yatra pic.twitter.com/dB7RTj5iHy
— ANI (@ANI) June 28, 2023 " class="align-text-top noRightClick twitterSection" data="
">#WATCH | Odisha: Bahuda Rath Yatra or the ‘Return Car Festival’ to begin today from Gundicha Temple to Jagannath Temple in Puri, on the 9th day of Jagannath Rath Yatra pic.twitter.com/dB7RTj5iHy
— ANI (@ANI) June 28, 2023#WATCH | Odisha: Bahuda Rath Yatra or the ‘Return Car Festival’ to begin today from Gundicha Temple to Jagannath Temple in Puri, on the 9th day of Jagannath Rath Yatra pic.twitter.com/dB7RTj5iHy
— ANI (@ANI) June 28, 2023
ಒಡಿಸ್ಸಿ ಮತ್ತು ಗೋಟಿಪುವಾ ನೃತ್ಯಗಾರರು ರಥಗಳ ಮುಂದೆ ಸಂಗೀತದ ಟ್ಯೂನ್‌ಗೆ ಸೆರೆನೇಡ್ ಮಾಡುತ್ತಾರೆ. ಸಮರ ಕಲಾವಿದರು ದೇವತೆಗಳ ಮುಂದೆ ಸಾಂಪ್ರದಾಯಿಕ ಸಮರ ಕಲೆಯಾದ ಬಾನಾಟಿಯನ್ನು ಪ್ರದರ್ಶಿಸುತ್ತಾರೆ. ದೇವತೆಗಳನ್ನು ಅವರು ಬರುವ ಅದೇ ರಥಗಳಲ್ಲಿ ಕರೆದೊಯ್ಯಲಾಗುತ್ತದೆ, ಭಕ್ತರು ಮತ್ತೆ ಮುಖ್ಯ ದೇವಾಲಯಕ್ಕೆ ಎಳೆಯುತ್ತಾರೆ. ತಮ್ಮ ರಥಗಳ ಮೇಲೆ ದೇವತೆಗಳ ದರ್ಶನ ಪಡೆಯುವುದು ಮಂಗಳಕರ ಎಂದು ಪರಿಗಣಿಸಲಾಗಿದೆ.
ಭಗವಾನ್ ಜಗನ್ನಾಥ ಮತ್ತು ದೇವಿ ಶುಭದ್ರ ಮತ್ತು ಬಲಭದ್ರ ದೇವರ ವಾರ್ಷಿಕ ರಥಯಾತ್ರೆ ಜೂನ್ 20 ರಂದು ಅದ್ದೂರಿಯಾಗಿ ನೆರವೇರಿತ್ತು. ರಥಯಾತ್ರೆ ಶ್ರೀಮಂದಿರದಿಂದ ಗುಂಡಿಚಾ ದೇವಸ್ಥಾನದವರೆಗೆ ಸಾಗಿ ಬಂದಿತ್ತು.
ಲಕ್ಷಾಂತರ ಭಕ್ತರು ಸೇರಿ ದೇವರ ರಥಗಳನ್ನು ಎಳೆದು ಭಗವಾನ್ ಜನನ್ನಾಥನ ಕೃಪೆಗೆ ಪಾತ್ರರಾಗಿದ್ದರು. ರಥದಲ್ಲಿ ಕುಳ್ಳಿರಿಸಿರುವ ಜಗನ್ನಾಥನ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯವು ಚಾರ್‌ಧಾಮ ಕ್ಷೇತ್ರಗಳಲ್ಲೊಂದಾಗಿದೆ. ವಿಶಿಷ್ಟವಾದ ಹಿನ್ನೆಲೆ ಹೊಂದಿರುವ ಈ ದೇವಾಲಯಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ಈ ದೇವಾಲಯದಲ್ಲಿ ಪ್ರತಿ ವರ್ಷ ನಡೆಯುವ ವಾರ್ಷಿಕ ರಥೋತ್ಸವದಿಂದ ದೇಶಾದ್ಯಂತ ಹೆಸರುವಾಸಿ.
ಚಾರ್‌ಧಾಮ್ ತೀರ್ಥಯಾತ್ರೆಯ ತಾಣಗಳಲ್ಲಿ ಒಂದಾಗಿರುವ ಈ ದೇವಾಲಯವನ್ನು ಮರದಿಂದಲೇ ನಿರ್ಮಿಸಲಾಗಿದೆ. ಅಬಂಟಿಯ ಸೋಮವಂಶದ ರಾಜ ಇಂದ್ರದ್ಯುಮ್ನನು ಪುರಿಯಲ್ಲಿ ಜಗನ್ನಾಥನ ಮುಖ್ಯ ದೇವಾಲಯವನ್ನು ನಿರ್ಮಿಸಿದ್ದನು ಎಂಬ ಪ್ರತೀತಿ ಇದೆ. ಪ್ರಸ್ತುತ ದೇವಾಲಯವನ್ನು ಹತ್ತನೇ 10 ನೇ ಶತಮಾನದಿಂದ ಪುನರ್ ನಿರ್ಮಿಸಲಾಯಿತು ಎಂದು ಇತಿಹಾಸ ಹೇಳುತ್ತದೆ.
ಇದನ್ನು ಓದಿ: ಪುರಿ ಜಗನ್ನಾಥ ರಥೋತ್ಸವ 2023: ಸುಂದರ ಫೋಟೋಗಳು ನಿಮಗಾಗಿ