ETV Bharat / bharat

ಮಳೆಯಿಂದ ಹೈವೇ ಬಂದ್: ನಾಲ್ಕು ತಾಸು 10 ಕಿ.ಮೀ ಟ್ರಾಫಿಕ್​​ನಲ್ಲಿ ಸಿಲುಕಿದ ವಾಹನಗಳು

ಭಾರಿ ಮಳೆಯಿಂದಾಗಿ ಕೇದಾರನಾಥ್ ಹಾಗೂ ಬದ್ರಿನಾಥ್ ದೇವಾಲಯ ಮಾರ್ಗದಲ್ಲಿ ಟ್ರಾಫಿಕ್​​​ ಜಾಮ್​​​​ನಿಂದ ಸವಾರರು ಪರದಾಡಿದರು. 4 ಗಂಟೆಗಳ ಕಾಲ ಪ್ರಯಾಣಿಕರು ಟ್ರಾಫಿಕ್​​ನಲ್ಲೇ ಸಿಲುಕಿದ್ದರು.

badrinath-kedarnath-highway-was-jammed-10-km-long-for-four-hours
4 ಗಂಟೆ ಕಾಲ 10 ಕಿ.ಮೀ ಟ್ರಾಫಿಕ್​​ ಜಾಮ್​ನಲ್ಲಿ ಸಿಲುಕಿದ ವಾಹನಗಳು
author img

By

Published : Oct 16, 2021, 7:26 AM IST

ರುದ್ರಪ್ರಯಾಗ್​ (ಉತ್ತರಾಖಂಡ್​): ಧಾರಾಕಾರ ಮಳೆ ಸುರಿದ ಪರಿಣಾಮ ಕೇದಾರನಾಥ-ಬದ್ರಿನಾಥ ದೇವಾಲಯ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬರೋಬ್ಬರಿ 10 ಕಿ.ಮೀ ದೂರದವರೆಗೂ ಟ್ರಾಫಿಕ್ ಜಾಮ್​ನಿಂದಾಗಿ ಸವಾರರು ಪರದಾಡಬೇಕಾದ ಪರಿಸ್ಥಿತಿ ಉಂಟಾಗಿತ್ತು.

ಈ ಮಾರ್ಗದಲ್ಲಿ ಧಾರಾಕಾರ ಮಳೆ ಸುರಿದಿದ್ದರಿಂದ ರಸ್ತೆ ಮೇಲೆ ನೀರು ನಿಂತಿತ್ತು. ಜೊತೆಗೆ ಮಳೆ ನೀರಿನಲ್ಲಿ ಮಣ್ಣು, ಕಲ್ಲುಗಳು ರಸ್ತೆಗೆ ಬಿದ್ದಿದ್ದರಿಂದಾಗಿ ಸಂಚಾರಕ್ಕೆ ಅಡೆತಡೆಯಾಗಿತ್ತು. ಹೀಗಾಗಿ ವಾಹನ ಸವಾರರು 4 ಗಂಟೆಗಳ ಕಾಲ ಟ್ರಾಫಿಕ್ ಜಾಮ್​ನಲ್ಲಿಯೇ ಸಿಲುಕಿ ಪರದಾಡಿದರು.

ಹೀಗಾಗಿ ಮಾರ್ಗ ಬದಲಾಯಿಸಿದ ಸವಾರರು ಕಿರಿದಾದ ರಸ್ತೆಯಲ್ಲಿ ಸಂಚರಿಸಿದರು. ಪರಿಣಾಮ ಇಲ್ಲಿನ ಚಂದ್ರಪುರಿ, ಬಿರಿ, ಗುಪ್ತಕಾಶಿ, ಕುಂಡ್​​ ಮಾರುಕಟ್ಟೆ ಸ್ಥಳದಲ್ಲಿ 1 ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಕಂಡುಬಂತು.

ಬಳಿಕ ಪೊಲೀಸ್ ಹಾಗೂ ಪಿಆರ್​​​ಡಿ (ಪ್ರಾಂತೀಯ ರಕ್ಷಕ ದಳ) ಟ್ರಾಫಿಕ್​ ತೆರವುಗೊಳಿಸಲು ಒಂದು ಗಂಟೆ ಕಾಲ ಹರಸಾಹಸ ಪಡಬೇಕಾಯಿತು.

ಇದನ್ನೂ ಓದಿ: ಕಳೆದ ವಾರವಷ್ಟೇ ಚಾಲನೆಗೊಂಡಿದ್ದ Toy trainನಲ್ಲಿ ಬೆಂಕಿ.. 45 ಮಂದಿ ಕೂದಲೆಳೆ ಅಂತರದಲ್ಲಿ ಪಾರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.