ಡೆಹ್ರಾಡೂನ್ (ಉತ್ತರಾಖಂಡ): ಕೇದಾರನಾಥ ದೇಗುಲದಲ್ಲಿನ ಚಿನ್ನದ ಲೇಪನ ಹಗರಣ ಕುರಿತ ವಿವಾದ ಮತ್ತೆ ಭುಗಿಲೆದಿದ್ದೆ. ವಿರೋಧ ಪಕ್ಷದ ನಾಯಕರು ಮಾತ್ರ ಪ್ರಸ್ತಾಪಿಸುತ್ತಿದ್ದ ವಿಷಯವನ್ನು, ಇದೀಗ ದೇವಸ್ಥಾನದ ಸಮಿತಿ ಸದಸ್ಯರು ಈ ಬಗ್ಗೆ ಎಸ್‌ಐಟಿ ತನಿಖೆ ನಡೆಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಕೂಡ ಆಗ್ರಹಿಸಿದೆ. ಆದರೆ, ಈ ಕುರಿತು ಬಿಕೆಟಿಸಿ ಅಧ್ಯಕ್ಷ ಅಜೇಂದ್ರ ಅಜಯ್ ಸದಸ್ಯರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಅಕ್ರಮಗಳ ಬಗ್ಗೆ ತನಿಖೆ ಆರಂಭಿಸಿದ ಸದಸ್ಯರೇ ಈಗ ಸಿಎಂಗೆ ಪತ್ರ ಬರೆದಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.
-
केदारनाथ जी में जो सोना लगा था उसका सच ये है। ये है वो पित्तल की दीवारें जिनका सोना अब उतरने लगा है। माफ़ी चाहूँगा मुझे ये सार्वजनिक नहीं करनी चाहिए थे लेकिन जब हमारे आदरणीय बागेश्वर धाम वाले बाबा गर्भ गृह की तस्वीरें अपने पेज से पूरे दुनिया को दिखाकर बाबा केदार की मर्यादा को भंग… pic.twitter.com/3JHY4dLcBO
— Umesh Kumar (@Umeshnni) November 6, 2023 " class="align-text-top noRightClick twitterSection" data="
">केदारनाथ जी में जो सोना लगा था उसका सच ये है। ये है वो पित्तल की दीवारें जिनका सोना अब उतरने लगा है। माफ़ी चाहूँगा मुझे ये सार्वजनिक नहीं करनी चाहिए थे लेकिन जब हमारे आदरणीय बागेश्वर धाम वाले बाबा गर्भ गृह की तस्वीरें अपने पेज से पूरे दुनिया को दिखाकर बाबा केदार की मर्यादा को भंग… pic.twitter.com/3JHY4dLcBO
— Umesh Kumar (@Umeshnni) November 6, 2023केदारनाथ जी में जो सोना लगा था उसका सच ये है। ये है वो पित्तल की दीवारें जिनका सोना अब उतरने लगा है। माफ़ी चाहूँगा मुझे ये सार्वजनिक नहीं करनी चाहिए थे लेकिन जब हमारे आदरणीय बागेश्वर धाम वाले बाबा गर्भ गृह की तस्वीरें अपने पेज से पूरे दुनिया को दिखाकर बाबा केदार की मर्यादा को भंग… pic.twitter.com/3JHY4dLcBO
— Umesh Kumar (@Umeshnni) November 6, 2023
ದೇವಸ್ಥಾನ ಸಮಿತಿಯ ಹಲವು ಸದಸ್ಯರು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ 18 ಮೇ 2023 ರಂದು ಮತ್ತು ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಅವರಿಗೆ 12 ಜುಲೈ 2023 ರಂದು ಬರೆದ ಪತ್ರಗಳಲ್ಲಿ, ಅಜೇಂದ್ರ ಅಜಯ್ ಅವರ ಸಹೋದರನ ಸಂಬಳ, ದೇವಸ್ಥಾನದಲ್ಲಿ ಮಲಗುವುದು, ಪಾಲಿಕೆ ಸಭೆಯಲ್ಲಿ ಸದಸ್ಯರನ್ನು ನಿರ್ಲಕ್ಷಿಸಿರುವುದು, ವಿಐಪಿ ಪ್ರೋಟೋಕಾಲ್‌ನಲ್ಲಿ ಸದಸ್ಯರನ್ನು ನಿರ್ಲಕ್ಷಿಸಿರುವುದು, ಗರ್ಭಗುಡಿಯಲ್ಲಿ ಫೋಟೋ ತೆಗೆಯುವುದು ಮತ್ತು ರೀಲ್ಸ್ ಮಾಡುವ ಬಗ್ಗೆ ಪ್ರಶ್ನೆಗಳು ಸೇರಿದಂತೆ 21 ಅಂಶಗಳ ಬಗ್ಗೆ ಪ್ರಸ್ತಾಪಿಸಿದ್ದರು.
2023ರ ಜುಲೈ 12ರಂದು ದೇವಸ್ಥಾನ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಅವರಿಗೆ ಬರೆದಿರುವ ಪತ್ರದಲ್ಲಿ ಈಗಿನ ಕೇದಾರನಾಥ ದೇವಾಲಯದ ಗರ್ಭಗುಡಿಯಲ್ಲಿ ಚಿನ್ನ ಲೇಪನ ವಿವಾದವ ಬಗ್ಗೆ ಪ್ರಶ್ನಿಸಲಾಗಿದೆ . ಈ ವಿವಾದದ ನಂತರ, ಯಾವುದೇ ದಾನಿ ಇನ್ನು ಮುಂದೆ ದಾನ ಮಾಡಲು ಆಸಕ್ತಿ ತೋರುವುದಿಲ್ಲ, ಏಕೆಂದರೆ ಈ ವಿವಾದವು ಪ್ರಪಂಚದಾದ್ಯಂತ ಚರ್ಚೆಯ ವಿಷಯವಾಗಿದೆ ಮತ್ತು ಜನರು ತಮ್ಮ ಚಿನ್ನವೂ ಹಿತ್ತಾಳೆಯಾಗಬಹುದು ಎಂದು ಯೋಚಿಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೆಖಿಸಿಲಾಗಿದೆ. ಪತ್ರದಲ್ಲಿ ಕೇದಾರನಾಥನ ಗರ್ಭಗುಡಿಯಲ್ಲಿ ಚಿನ್ನ ಲೇಪನ ಮಾಡುವ ಪ್ರಸ್ತಾವನೆಯನ್ನು ಯಾವ ಸಭೆಯಲ್ಲಿ ಅಂಗೀಕರಿಸಲಾಗಿದೆ ಎಂಬ ಬಗ್ಗೆ ಅಧ್ಯಕ್ಷರಿಂದ ಸ್ಪಷ್ಟನೆ ಕೇಳಲಾಗಿದೆ.
ಮತ್ತೊಂದೆಡೆ, ದೇವಾಲಯ ಸಮಿತಿ ಸದಸ್ಯ ಪುಷ್ಕರ್ ಜೋಶಿ ಅವರು ಪ್ರಧಾನಿ ಮೋದಿ ಮತ್ತು ಸಿಎಂ ಧಾಮಿ ಸೇರಿದಂತೆ ಕೋಟ್ಯಂತರ ದೇಶವಾಸಿಗಳು ಧಾಮಗಳಲ್ಲಿ ನಂಬಿಕೆ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಏನೇ ಆಗಿದ್ದರೂ ತನಿಖೆಯಾಗಬೇಕು ಎಂಬುದು ಸಮಿತಿಯ ಸದಸ್ಯರ ಆಗ್ರಹವಾಗಿದೆ. ನಾವು ಯಾರ ವಿರುದ್ಧವೂ ಇಲ್ಲ. ಹಗರಣದ ಕುರಿತ ಚರ್ಚೆಗಳ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂಬ ಕಾರಣದಿಂದ ಮುಖ್ಯಮಂತ್ರಿಗೆ ಈ ಪತ್ರ ಬರೆದಿದ್ದೇನೆ ಎಂದು ದೇವಸ್ಥಾನ ಸಮಿತಿ ಸದಸ್ಯ ಶ್ರೀನಿವಾಸ್ ಪೋಸ್ಟಿ ತಿಳಿಸಿದ್ದಾರೆ. ಮೇ ತಿಂಗಳಿನಲ್ಲಿ ಮುಖ್ಯಮಂತ್ರಿಗಳಿಗೆ ಈ ಪತ್ರ ಬರೆಯಲಾಗಿದ್ದು, ಇದುವರೆಗೂ ಈ ಬಗ್ಗೆ ಸ್ಪಷ್ಟನೆ ಬಂದಿಲ್ಲ. ಭಕ್ತರು ತಮ್ಮ ಬಳಿ ಹಲವು ಪ್ರಶ್ನೆಗಳನ್ನು ಕೇಳುತ್ತಾರೆ, ಹೀಗಾಗಿ ಸದಸ್ಯರು ಸರ್ಕಾರಕ್ಕೆ ಈ ಪತ್ರ ಬರೆದಿದ್ದಾರೆ ಎಂದರು.
ದೇವಸ್ಥಾನ ಸಮಿತಿ ಸದಸ್ಯ ಅಶುತೋಷ್ ಡಿಮ್ರಿ, ಸತ್ಯ ಏನೇ ಅದು ಹೊರಬರಬೇಕು ಎಂದು ನಾವು ಬಯಸುತ್ತೇವೆ. ಹೀಗಾಗಿ ಸಮಿತಿ ಸದಸ್ಯರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಈ ಕುರಿತು ಪತ್ರ ಬರೆದಿದ್ದಾರೆ. ಈ ಸಂಪೂರ್ಣ ಪ್ರಕರಣದ ಬಗ್ಗೆ ರಾಜ್ಯ ಸರ್ಕಾರ ಶೀಘ್ರದಲ್ಲೇ ತನಿಖೆ ನಡೆಸಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಪತ್ರ ಬರೆದಿದ್ದು ಮೇ ತಿಂಗಳಲ್ಲೇ ಆದರೂ ಪತ್ರ ಈಗ ಬೆಳಕಿಗೆ ಬಂದಿದೆ ಎಂದರು.
ಖಾನಪುರದ ಪಕ್ಷೇತರ ಶಾಸಕ ಉಮೇಶ್ ಕುಮಾರ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ, ಕೇದಾರನಾಥ ಗರ್ಭಗುಡಿಯಲ್ಲಿರುವ ಚಿನ್ನ ಲೇಪನದ ಕೆಲವು ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಹಿತ್ತಾಳೆಯ ಗೋಡೆಗಳಿಂದ ಈಗ ಚಿನ್ನ ಬರಲಾರಂಭಿಸಿದೆ ಎಂದು ಉಮೇಶ್ ಕುಮಾರ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕೇದಾರನಾಥ ಪ್ರವಾಸದಲ್ಲಿರುವ ರಾಹುಲ್ ಗಾಂಧಿ: ಲಂಗರ್ನಲ್ಲಿ ಭಕ್ತರಿಗೆ ಆಹಾರ ಬಡಿಸಿದ ಕಾಂಗ್ರೆಸ್ ನಾಯಕ