ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಇಲ್ಲಿನ ಬಾದಾಮ್ವಾರಿ ಉದ್ಯಾನ ಬಾದಾಮಿ ಹೂವುಗಳಿಂದ ಸಂಪೂರ್ಣವಾಗಿ ಕಂಗೊಳಿಸುತ್ತಿದ್ದು, ಪ್ರವಾಸಿಗರನ್ನು ಆಕರ್ಷಸುತ್ತಿದೆ. ಈ ಪ್ರಕೃತಿ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಾನಕ್ಕೆ ಆಗಮಿಸುತ್ತಿದ್ದಾರೆ. ಕಳೆದ ವಾರದಿಂದ ಬಾದಮ್ವಾರಿ ಉದ್ಯಾನಕ್ಕೆ ಅಧಿಕೃತವಾಗಿ ಸಾರ್ವಜನಿಕರಿಗೆ ಪ್ರವೇಶವನ್ನು ಕಲ್ಪಿಸಲಾಗಿದ್ದು, ಪ್ರತಿದಿನ ಸಾವಿರಾರು ಪ್ರವಾಸಿಗರು ಉದ್ಯಾನಕ್ಕೆ ಆಗಮಿಸುತ್ತಿದ್ದಾರೆ.
ಕೋಹ್-ಎ-ಮರನ್ ತಪ್ಪಲಿನಲ್ಲಿ ನೆಲಗೊಂಡಿರುವ ಬಾದಾಮ್ವಾರಿ ಉದ್ಯಾನವು ಛಾಯಗ್ರಾಹಕರ ಸ್ವರ್ಗ ಎಂದೇ ಹೇಳಬಹುದು. ಎತ್ತರದ ಜಬರ್ವಾನ್ ಪರ್ವತ ಶ್ರೇಣಿಗಳೊಂದಿಗೆ ಬಾದಮಿ ಹೂವುಗಳು ಕ್ಯಾಮರಾದಲ್ಲಿ ಅದ್ಭುತವಾದ ದೃಶ್ಯ ಸೆರೆಹಿಡಿಯುತ್ತದೆ. ಉದ್ಯಾನದ ಸೌಂದರ್ಯವನ್ನು ಆನಂದಿಸಲು ನೋಯ್ಡಾದಿಂದ ಆಗಮಿಸಿದ್ದ ಪ್ರವಾಸಿಗರರೊಬ್ಬರು ಮಾತನಾಡಿ, ‘‘ಬಾದಾಮ್ವಾರಿ ಗಾರ್ಡನ್ಗೆ ಬರುವುದು ‘‘ಸ್ವರ್ಗದಂತಹ ಅನುಭವ’’ವನ್ನು ನೀಡುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಬೇಕು, ವಿಶೇಷವಾಗಿ ವಸಂತಕಾಲದ ಬಾದಾಮ್ವಾರಿ ಗಾರ್ಡನ್ಗೆ ಬಂದು ಬಾದಮಿ ಹೂವುಗಳನ್ನು ಕಣ್ತುಂಬಿಕೊಳ್ಳಬೇಕು. ಈ ಪ್ರದೇಶವು ಮಾಲಿನ್ಯಗಳಿಂದ ದೂರವಿರುವ ಸುಂದರ ಸ್ಥಳವಾಗಿದೆ’’ ಎಂದು ಹೇಳಿದರು.
-
The first bud of the almond blossom, the first melody of spring in Kashmir. #HeavenOnEarth #jammuandkashmir#kashmir #beautifuldestinations #spring #visitkashmir #blossom #solitude #travel #explore #jktourism #G20India pic.twitter.com/mxjBKDCNoR
— Jammu & Kashmir Tourism (@JandKTourism) March 9, 2023 " class="align-text-top noRightClick twitterSection" data="
">The first bud of the almond blossom, the first melody of spring in Kashmir. #HeavenOnEarth #jammuandkashmir#kashmir #beautifuldestinations #spring #visitkashmir #blossom #solitude #travel #explore #jktourism #G20India pic.twitter.com/mxjBKDCNoR
— Jammu & Kashmir Tourism (@JandKTourism) March 9, 2023The first bud of the almond blossom, the first melody of spring in Kashmir. #HeavenOnEarth #jammuandkashmir#kashmir #beautifuldestinations #spring #visitkashmir #blossom #solitude #travel #explore #jktourism #G20India pic.twitter.com/mxjBKDCNoR
— Jammu & Kashmir Tourism (@JandKTourism) March 9, 2023
ನೋಯ್ಡಾದ ಮತ್ತೋರ್ವ ಪ್ರವಾಸಿ ಮಾತನಾಡಿ, ಈ ಸ್ಥಳವು ‘‘ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ ಮತ್ತು ಜನರು ಇಲ್ಲಿಗೆ ಬಂದು ಪ್ರಕೃತಿಯ ಸೌಂದರ್ಯವನ್ನು ಸವಿಯಬೇಕು ಎಂದು ಹೇಳಿದರು. ದೆಹಲಿ ಛಾಯಗ್ರಾಹಕ ಜಾವೇದ್-ಉಲ್-ಇಸ್ಲಾಂ ಮಾತನಾಡಿ, ‘‘ಕಾಶ್ಮೀರವು ಸುಂದರವಾದ ಸ್ಥಳಗಳಿಂದ ಆಶೀರ್ವಧಿಸಲ್ಪಟ್ಟಿದೆ, ಅದರಲ್ಲಿ ಬಾದಾಮ್ವಾರಿ ಉದ್ಯಾನವು ಒಂದು. ಅದ್ಭುತವಾದ ಚಿತ್ರಗಳನ್ನು ಕ್ಲಿಕ್ಕಿಸಲು ಇದು ಸುಂದರವಾದ ಸ್ಥಳವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬೇರೆ ಬೇರೆ ರಾಜ್ಯದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬೇಕು’’ ಎಂದು ಹೇಳಿದರು.
ಈ ಉದ್ಯಾನವು ಸುಮಾರು 400 ವರ್ಷಗಳ ಇತಿಹಾಸವನ್ನು ಹೊಂದಿದೆ. ಇದು 300 ಕನಾಲ್ (15 ಹೆಕ್ಟೇರ್) ಪ್ರದೇಶವನ್ನು ಆವರಿಸಿದ್ದು ಸುಮಾರು 1500 ಹೆಚ್ಚು ಜಾತಿಯ ಮರ-ಗಿಡಗಳನ್ನು ಒಳಗೊಂಡಿದೆ. ಶ್ರೀ ನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಸ್ಥಳವು ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಕಳೆದ ಕೆಲವು ವರ್ಷಗಳಿಂದ ಉದ್ಯಾನಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಾಗಿದ್ದು, ಈ ವರ್ಷ ಲಕ್ಷಾಂತರ ಮಂದಿ ಪ್ರವಾಸಿಗರು ಭೇಟಿ ನೀಡುವ ನಿರೀಕ್ಷೆ ಇದೆ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ಫಾರೂಕ್ ಅಹ್ಮದ್ ತಿಳಿಸಿದರು.
ಏಷ್ಯಾದ ಅತಿದೊಡ್ಡ ಟುಲಿಪ್ ಹೂದೋಟ ಮಾ.19 ರಿಂದ ವೀಕ್ಷಣೆಗೆ ಮುಕ್ತ: ಶ್ರೀನಗರದ ದಾಲ್ ಸರೋವರ ಮತ್ತು ಜಬರ್ವಾನ್ ಬೆಟ್ಟಗಳ ನಡುವೆ ಸುತ್ತುವರೆದಿರುವ ಏಷ್ಯಾದ ಅತಿದೊಡ್ಡ ಟುಲಿಪ್ ಗಾರ್ಡನ್ ನಳನಳಿಸುತ್ತಿದೆ. ಅರಳಿ ನಿಂತಿರುವ ಟುಲಿಪ್ ಹೂಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಸಿರಾಜ್ ಬಾಗ್ ಎಂದೂ ಕರೆಯಲ್ಪಡುವ ಈ ಉದ್ಯಾನ ಮಾ.19ರಿಂದ ಸಾರ್ವಜನಿಕರಿಗೆ ತೆರೆದಿರುತ್ತದೆ. ವಿವಿಧ ಬಣ್ಣಗಳ 1.5 ಮಿಲಿಯನ್ ಟುಲಿಪ್‌ಗಳಲ್ಲದೆ, ಇತರ ವಸಂತ ಹೂವುಗಳಾದ ಹಯಸಿಂತ್‌ಗಳು, ಡ್ಯಾಫಡಿಲ್‌ಗಳು, ಮಸ್ಕರಿ ಮತ್ತು ಸೈಕ್ಲಾಮೆನ್‌ಗಳನ್ನು ಒಳಗೊಂಡಿದೆ. ಈ ಹಿಂದೆ ಸಿರಾಜ್ ಬಾಗ್ ಎಂದು ಕರೆಯಲ್ಪಡುವ ಇಂದಿರಾ ಗಾಂಧಿ ಸ್ಮಾರಕ ಟುಲಿಪ್ ಗಾರ್ಡನ್ ಅನ್ನು 2008ರಲ್ಲಿ ಜಮ್ಮು ಮತ್ತು ಕಾಶ್ಮೀರದ ಆಗಿನ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರು ಲೋಕಾರ್ಪಣೆ ಮಾಡಿದ್ದರು.
ಇದನ್ನೂ ಓದಿ: ಹೋಳಿ ವೇಳೆ ಜಪಾನಿ ಮಹಿಳೆಗೆ ಕಿರುಕುಳ: ಬಾಲಾಪರಾಧಿ ಸೇರಿ ದೆಹಲಿಯಲ್ಲಿ ಮೂವರು ಸೆರೆ