ಮುಂಬೈ(ಮಹಾರಾಷ್ಟ್ರ) : ವೈದ್ಯಕೀಯ ಲೋಕಕ್ಕೆ ಸವಾಲು ಎಸೆದಿದ್ದ ಪ್ರಕರಣವೊಂದನ್ನ ಯಶಸ್ವಿಯಾಗಿ ಬೇಧಿಸುವಲ್ಲಿ ಮಹಾರಾಷ್ಟ್ರ ವೈದ್ಯರು ಯಶಸ್ವಿಯಾಗಿದ್ದು, ಬಾಲಕಿಗೆ ಮರುಜನ್ಮ ನೀಡಿದ್ದಾರೆ.
ಮೂಲತಃ ಉತ್ತರಪ್ರದೇಶದ 9 ವರ್ಷದ ರೋಶ್ನಿ ಎಂಬ ಬಾಲಕಿ ಹೊಟ್ಟೆಯಲ್ಲಿ ಹುಟ್ಟಿನಿಂದಲೇ ಮಗು ಹೊಂದಿದ್ದಳು. ಹೀಗಾಗಿ, ಮೇಲಿಂದ ಮೇಲೆ ಹೊಟ್ಟೆ ನೋವು ಅನುಭವಿಸುತ್ತಿದ್ದಳು. ಇದರ ಜೊತೆಗೆ ಹೊಟ್ಟೆಯಲ್ಲಿ ಗಟ್ಟಿಯಾದ ಗಡ್ಡೆ ಬೆಳೆಯಲು ಶುರುವಾಗಿತ್ತು.
ಮೂಢನಂಬಿಕೆಗೊಳಗಾದ ಕುಟುಂಬ ಬಾಬಾನೋರ್ವನ ಮೊರೆ ಹೋಗಿತ್ತು. ಆದರೆ, ಸಮಸ್ಯೆ ಬಗೆಹರಿದಿರಲಿಲ್ಲ. ಇದಾದ ಬಳಿಕ ಬಾಲಕಿಯನ್ನ ಮುಂಬೈನ ಸಿಯಾನ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ.
ಇದನ್ನೂ ಓದಿರಿ: ಟ್ವಿಟರ್ ಸಿಇಒ ಸ್ಥಾನಕ್ಕೆ ಜಾಕ್ ಡಾರ್ಸಿ ರಾಜೀನಾಮೆ: ಭಾರತೀಯ ಪರಾಗ್ ಅಗರ್ವಾಲ್‌ಗೆ ಮಹತ್ವದ ಹುದ್ದೆ
ಮುಂಬೈನ ಮುನ್ಸಿಪಲ್ ಕಾರ್ಪೊರೇಶನ್ ಸಿಯಾನ್ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಿದಾಗ ವೈದ್ಯರು ಸೋನೋಗ್ರಫಿ ಮಾಡಿದ್ದಾರೆ. ಈ ವೇಳೆ ಆಕೆಯ ಹೊಟ್ಟೆಯಲ್ಲಿರುವುದು ಗಡ್ಡೆ ಅಲ್ಲ ಬದಲಿಗೆ ಮಗು ಎಂಬುದು ಕಂಡುಕೊಂಡಿದ್ದಾರೆ. ಹೊಟ್ಟೆಯಲ್ಲಿದ್ದ ಮಗುವಿಗೆ ತಲೆ, ಎರಡು ಕಣ್ಣು, ಕೈ-ಕಾಲು, ಬೆನ್ನುಮೂಳೆ ಎಲ್ಲವೂ ಇದ್ದವು. ಆದರೆ, ಜೀವ ಇರಲಿಲ್ಲ.
ಮಕ್ಕಳ ಶಸ್ತ್ರಚಿಕಿತ್ಸಕರ ತಂಡ ರೋಶ್ನಿ ಹೊಟ್ಟೆಯಿಂದ ಶಸ್ತ್ರಚಿಕಿತ್ಸೆ ನಡೆಸಿ ಮಗುವಿನ ಭ್ರೂಣ ಹೊರ ತೆಗೆದಿದ್ದಾರೆ. ಇದೀಗ ಬಾಲಕಿ ಚೇತರಿಸಿಕೊಳ್ಳುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿಸಿದ್ದಾರೆ.