ETV Bharat / bharat

ಅಧಿಕೃತವಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಾಬುಲ್‌ ಸುಪ್ರಿಯೋ - ಸ್ಪೀಕರ್‌ ಓಂ ಬಿರ್ಲಾ

ಕಳೆದ ಕೆಲ ದಿನಗಳ ಹಿಂದಷ್ಟೇ ಬಿಜೆಪಿ ತೊರೆದು ಟಿಎಂಸಿ ಸೇರಿದ್ದ ಪಶ್ಚಿಮ ಬಂಗಾಳದ ಬಾಬುಲ್‌ ಸುಪ್ರಿಯೋ ಇಂದು ಅಧಿಕೃತವಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ನೀಡಿದ್ದಾರೆ.

Babul Supriyo formally resigns as MP
ಅಧಿಕೃತವಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಾಬುಲ್‌ ಸುಪ್ರಿಯೋ
author img

By

Published : Oct 19, 2021, 1:58 PM IST

ನವದೆಹಲಿ: ಬಿಜೆಪಿ ಮಾಜಿ ನಾಯಕ ಬಾಬುಲ್‌ ಸುಪ್ರಿಯೋ ಇಂದು ಅಧಿಕೃತವಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ಒಂದು ತಿಂಗಳ ಹಿಂದಷ್ಟೇ ಬಾಬುಲ್​ ಬಿಜೆಪಿ ತೊರೆದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ ಸೇರಿದ್ದರು.

ಸಂಸತ್‌ನಲ್ಲಿಂದು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿರುವ ಸುಪ್ರಿಯೋ, ತಮ್ಮ ಮೇಲೆ ತೋರಿಸಿದ ವಿಶ್ವಾಸಕ್ಕೆ ಬಿಜೆಪಿ ನಾಯಕರಿಗೆ ಧನ್ಯವಾದ ಸಲ್ಲಿಸಿದ್ದಾರೆ. ನಾನು ನನ್ನ ರಾಜಕೀಯ ಜೀವನವನ್ನು ಬಿಜೆಪಿಯಿಂದ ಆರಂಭಿಸಿದ್ದರಿಂದ ನನ್ನ ಹೃದಯ ಭಾರವಾಗಿದೆ. ಪ್ರಧಾನಮಂತ್ರಿ, ಪಕ್ಷದ ಮುಖ್ಯಸ್ಥರು ಮತ್ತು ಅಮಿತ್ ಶಾ ಅವರಿಗೆ ಧನ್ಯವಾದ ಹೇಳುತ್ತೇನೆ. ಅವರು ನನ್ನ ಮೇಲೆ ವಿಶ್ವಾಸವನ್ನು ತೋರಿಸಿದ್ದರು. ಪಕ್ಷದ ಸದಸ್ಯನಲ್ಲದಿದ್ದರೆ, ನನಗಾಗಿ ಯಾವುದೇ ಸ್ಥಾನವನ್ನು ಉಳಿಸಿಕೊಳ್ಳಬಾರದು ಎಂದು ನಾನು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಅಸನ್ಸೋಲ್‌ನ ಕ್ಷೇತ್ರದಲ್ಲಿ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಬಾಬುಲ್‌ ಸುಪ್ರಿಯೋ ಕಳೆದ ಸೆಪ್ಟೆಂಬರ್ 20 ರಂದು ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿದ್ದರು. ಇದಾದ ಎರಡು ದಿನಗಳ ನಂತರ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ಬಗ್ಗೆ ಔಪಚಾರಿಕವಾಗಿ ಪತ್ರ ಬರೆದಿದ್ದರು.

ಇದನ್ನೂ ಓದಿ: ರಾಜಕೀಯ ನಿವೃತ್ತಿ ಘೋಷಿಸಿದ್ದ ಬಾಬುಲ್ ಸುಪ್ರಿಯೋ TMC ಸೇರ್ಪಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.