ಉಜ್ಜೈನಿ(ಮಧ್ಯಪ್ರದೇಶ): ದೇಶಾದ್ಯಂತ ಉಲ್ಬಣಗೊಂಡಿದ್ದ ಕೊರೊನಾ ಎರಡನೇ ಹಂತದ ಅಲೆ ಇದೀಗ ಕಡಿಮೆಯಾಗಿದ್ದು, ಹೀಗಾಗಿ ಎಲ್ಲವೂ ಈ ಹಿಂದಿನಂತೆ ಸಹಜ ಸ್ಥಿತಿಗೆ ಮರಳುತ್ತಿದೆ. ಇದೀಗ ದೇವಸ್ಥಾನಗಳು ರೀ ಓಪನ್ ಆಗ್ತಿದ್ದು, ಬರುವ ಜೂನ್ 28ರಿಂದ ಉಜ್ಜೈನಿ ವಿಶ್ವ ಪ್ರಸಿದ್ಧ ಮಹಾಕಾಳೇಶ್ವರ ದರ್ಶನ ನೀಡಲಿದ್ದಾನೆ.
ಸುಮಾರು 80 ದಿನಗಳ ಕಾಲ ಈ ದೇವಸ್ಥಾನ ಬಂದ್ ಆಗಿತ್ತು. ಆದರೆ, ಇದೀಗ ರೀ ಓಪನ್ ಆಗುತ್ತಿರುವ ಕಾರಣ ಕೊರೊನಾ ಮಾರ್ಗಸೂಚಿ ಪಾಲನೆ ಕಡ್ಡಾಯ ಎಂದು ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಜತೆಗೆ ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರು ಕೋವಿಡ್ ಲಸಿಕೆ ಪಡೆದುಕೊಳ್ಳುವುದು ಕಡ್ಡಾಯವಾಗಿದ್ದು, ಲಸಿಕೆ ಪಡೆದುಕೊಂಡಿರುವ ಪ್ರಮಾಣಪತ್ರ ತೋರಿಸಿದ ನಂತರ ದೇವರ ದರ್ಶನ ಪಡೆದುಕೊಳ್ಳಲು ಅನುಮತಿ ನೀಡಲಾಗುವುದು ಎಂದಿದೆ.
ಇದನ್ನೂ ಓದಿರಿ: Girl friend ಮೇಲೆ ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರ ಎಸಗಿದ ಬಾಯ್ಫ್ರೆಂಡ್
ದೇವಸ್ಥಾನಕ್ಕೆ ಭೇಟಿ ನೀಡಲು ಇಂದಿನಿಂದಲೇ ಬುಕ್ಕಿಂಗ್ ಆರಂಭ ಮಾಡಿತ್ತು. ಆದರೆ, ಕೇವಲ ನಾಲ್ಕು ಗಂಟೆಯಲ್ಲಿ ಎಲ್ಲ ಟಿಕೆಟ್ ಖರೀದಿಯಾಗಿವೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಇದಕ್ಕೆ ದೇವಾಲಯ ವೆಬ್ಸೈಟ್ ಲಿಂಕ್ ನೀಡಿತ್ತು. ಒಂದು ದಿನದಲ್ಲಿ 3,500 ಭಕ್ತರಿಗೆ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದರ್ಶನಕ್ಕೆ ಅನುಮತಿ ನೀಡಿದೆ.
ಸಾಮಾಜಿಕ ಅಂತರ ಗಮನದಲ್ಲಿಟ್ಟುಕೊಂಡು ದೇವಾಲಯದ ಗರ್ಭಗುಡಿ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ ಎಂದು ಹೇಳಲಾಗಿದ್ದು, ದೇವಸ್ಥಾನದ ಆವರಣದಲ್ಲಿ ಒಟ್ಟುಗೂಡಿ ನಿಲ್ಲುವಂತಿಲ್ಲ ಎಂದಿದೆ. ಬೆಳಗ್ಗೆ 6 ಗಂಟೆಯಿಂದ ದೇವಾಲಯ ಓಪನ್ ಆಗಲಿದ್ದು, ರಾತ್ರಿ 8ಗಂಟೆವರೆಗೆ ದರ್ಶನ ಪಡೆದುಕೊಳ್ಳಬಹುದಾಗಿದೆ.