ಮಥುರಾ, ಉತ್ತರ ಪ್ರದೇಶ: ದೇವಾಲಯಕ್ಕೆ ಬಂದ ಭಕ್ತರಿಗೆ ಉಗುಳಿದ ಪ್ರಸಾದ ಹಂಚುತ್ತಿರುವ ಬಾಬಾನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಉತ್ತರ ಪ್ರದೇಶದ ಗೋವರ್ಧನ ಜಿಲ್ಲೆಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆ.
ಇಲ್ಲಿನ ಶ್ರೀಧಾಮ ರಾಧಾಕುಂಡದ ಸೇರಿದ ಪ್ರಾಣ್ ಕೃಷ್ಣದಾಸ್ ಮಹಾರಾಜ್ ಈ ರೀತಿಯಾಗಿ ಪ್ರಸಾದದಲ್ಲಿ ಉಗುಳಿ ಭಕ್ತರಿಗೆ ಹಂಚಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸ್ಥಳೀಯವಾಗಿ ಈ ಬಾಬಾನನ್ನು ಬೆಲಾವಾಲೆ ಬಾಬಾ ಎಂದು ಕರೆಯಲಾಗುತ್ತದೆ.
ದೇವಾಲಯಕ್ಕೆ ಬರುವ ಭಕ್ತರಿಗೆ ಪ್ರತಿದಿನ ಕಿಚಡಿಯನ್ನ ಪ್ರಸಾದವನ್ನಾಗಿ ನೀಡುವ ಬಾಬಾ ಅದರಲ್ಲಿ ಉಗುಳಿ ಕೊಡುತ್ತಾನೆ. ಹಲವು ದಿನಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆ.
ಇದನ್ನೂ ಓದಿ: ರಾಷ್ಟ್ರೀಯ ಸ್ಮಾರಕವಾಗಲಿದೆ ಅಮೆರಿಕದ ಪಲ್ಸ್ ನೈಟ್ ಕ್ಲಬ್
ಕೆಲವು ದಿನಗಳ ಹಿಂದೆ ಗಾಜಿಯಾಬಾದ್ ಜಿಲ್ಲೆಯ ಹೋಟೆಲೊಂದರಲ್ಲಿ ರೊಟ್ಟಿ ತಯಾರಿಸುವ ವೇಳೆ ಯುವಕನೋರ್ವ ಉಗುಳುತ್ತಿದ್ದ ವಿಡಿಯೋ ಕೂಡ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆತನನ್ನು ಪೊಲೀಸರು ವಶಕ್ಕೆ ಪಡೆದು ಎಚ್ಚರಿಕೆ ನೀಡಿದ್ದರು.