ETV Bharat / bharat

ವೀಕ್ಷಿಸಿ: ಮೈಕ್, ಸ್ಪೀಕರ್ ಇರುವ ಮಾಸ್ಕ್ ಅಭಿವೃದ್ಧಿಪಡಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿ - ಇಂಜಿನಿಯರಿಂಗ್ ವಿದ್ಯಾರ್ಥಿಯಿಂದ ವಿಶಿಷ್ಟ ಮಾಸ್ಕ್

ಸಾಮಾನ್ಯ ಮಾಸ್ಕ್ ಧರಿಸಿ ಮಾತನಾಡುವಾಗ ಉಂಟಾಗುವ ಅಡಚಣೆಗೆ ಕೇರಳದ ವಿದ್ಯಾರ್ಥಿಯೊಬ್ಬ ಪರಿಹಾರ ಕಂಡು ಹಿಡಿದಿದ್ದಾನೆ.

B-Tec Student  designs 'masks with mics' to ease communication amid COVID
ಮೈಕ್ ಮಾಸ್ಕ್ ಅಭಿವೃದ್ದಿಪಡಿ ವಿದ್ಯಾರ್ಥಿ
author img

By

Published : May 24, 2021, 8:22 AM IST

Updated : May 24, 2021, 10:39 AM IST

ತ್ರಿಶ್ಶೂರ್ (ಕೇರಳ): ಮಾಸ್ಕ್​ ಧರಿಸಿ ಬೇರೆಯವರೊಂದಿಗೆ ಮಾತನಾಡಲು ಕಷ್ಟವಾಗುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ, ಕೋವಿಡ್​ನಿಂದ ರಕ್ಷಣೆ ಹೊಂದಬೇಕಾದರೆ ಮಾಸ್ಕ್ ಧರಿಸಲೇಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ.

ಕೇರಳದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಈ ಸಮಸ್ಯೆಗೆ ಪರಿಹಾರವಾಗಿ ಮೈಕ್ ಮತ್ತು ಸ್ಪೀಕರ್ ಇರುವ ಮಾಸ್ಕ್ ತಯಾರಿಸಿದ್ದಾನೆ​. ತ್ರಿಶ್ಶೂರ್‌ನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ಬಿ-ಟೆಕ್ ವ್ಯಾಸಂಗ ಮಾಡುತ್ತಿರುವ ಕೆವಿನ್ ಜಾಕೋಬ್, ಈ ವಿನೂತನ ಮಾಸ್ಕ್ ಅಭಿವೃದ್ಧಿಪಡಿಸಿದ್ದಾನೆ.

ಮೈಕ್ ಮಾಸ್ಕ್ ಅಭಿವೃದ್ಧಿಪಡಿಸಿದ ವಿದ್ಯಾರ್ಥಿ

ತನ್ನ ವಿನೂತನ ಮಾಸ್ಕ್​ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಕೆವಿನ್, ನನ್ನ ಅಪ್ಪ, ಅಮ್ಮ ಇಬ್ಬರೂ ವೈದ್ಯರಾಗಿದ್ದು, ಕೋವಿಡ್ ಆರಂಭದಿಂದಲೂ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿದ್ದಾರೆ. ಡಬಲ್ ಲೇಯರ್ ಮಾಸ್ಕ್​ ಮತ್ತು ಫೇಸ್ ಶೀಲ್ಡ್ ಧರಿಸಿಕೊಂಡು ಅವರು ರೋಗಿಗಳೊಂದಿಗೆ ಮಾತನಾಡಲು ಕಷ್ಟಪಡುತ್ತಿರುವುದನ್ನು ನಾನು ಗಮನಿಸಿದ್ದೇನೆ. ಇದಕ್ಕೆ ಏನಾದರು ಪರಿಹಾರ ಕಂಡು ಹಿಡಿಯಬೇಕೆಂದು ಯೋಚನೆಯಲ್ಲಿದ್ದಾಗ ನನಗೆ ಹೊಳೆದಿದ್ದು ಮೈಕ್ ಮತ್ತು ಸ್ಪೀಕರ್ ಇರುವ ಮಾಸ್ಕ್​ ಎಂದು ಹೇಳಿದ್ದಾನೆ.

ಕೆವಿನ್ ತಯಾರಿಸಿದ ಮಾಸ್ಕ್​ ಅನ್ನು ಮೊದಲ ಬಾರಿಗೆ ಆತನ ಪೋಷಕರಾದ ಡಾ. ಶೆನೋಜ್ ಕೆ.ಸಿ ಮತ್ತು ಡಾ. ಜ್ಯೋತಿ ಮೇರಿ ಪರೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ. ಈ ವಿಶೇಷ ಮಾಸ್ಕ್​​ನಲ್ಲಿ ಮ್ಯಾಗ್ನೆಟ್ ಚಾರ್ಜಿಂಗ್ ಸಿಸ್ಟಮ್ ಇದ್ದು, 30 ನಿಮಿಷ ಚಾರ್ಜ್​ ಮಾಡಿದರೆ 4 ರಿಂದ 6 ಗಂಟೆಗಳ ಕಾಲ ಬಳಸಬಹುದು.

ಇದುವರೆಗೆ ಈ ಮಾಸ್ಕ್​ ಬಳಸಿದ ವೈದ್ಯರು ಒಳ್ಳೆಯ ಅಭಿಪ್ರಾಯ ಹೇಳಿದ್ದಾರೆ ಎಂದಿರುವ ಕೆವಿನ್, ನೂತನ ಅವಿಷ್ಕಾರವನ್ನು ಜನರಿಗೆ ತಲುಪಿಸುವ ಕಂಪನಿಗಾಗಿ ಎದುರು ನೋಡುತ್ತಿದ್ದಾನೆ.

Last Updated : May 24, 2021, 10:39 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.