ಅಯೋಧ್ಯೆ(ಯು.ಪಿ): ರಾಮಜನ್ಮಭೂಮಿ ಅಯೋಧ್ಯೆ ನಗರಿ ತನ್ನದೇ ಆದ ವಿಶಿಷ್ಟ ಗುರುತನ್ನು ಹೊಂದುವ ನಿಟ್ಟಿನಲ್ಲಿ ಏಕರೂಪದ ಬಣ್ಣ ಸಂಹಿತೆ ಜಾರಿಗೆ ಬರಲಿದೆ. ಈ ಸಲುವಾಗಿ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ವಿಭಿನ್ನ ಸ್ವರೂಪದ ಕಟ್ಟಡಗಳಿಗೆ ಬಳಸಬೇಕಾದ ಬಣ್ಣಗಳ ಬಗ್ಗೆ ತನ್ನ ಯೋಜನೆಯನ್ನು ಅಂತಿಮಗೊಳಿಸಿದೆ.
ಅಭಿವೃದ್ಧಿ ಪ್ರಾಧಿಕಾರದ ಯೋಜನೆಯ ಪ್ರಕಾರ ವಾಣಿಜ್ಯ, ವಸತಿ, ಧಾರ್ಮಿಕ ಮತ್ತು ಐತಿಹಾಸಿಕ ಕಟ್ಟಡಗಳಿಗೆ ಮೀಸಲಾದ ಪ್ರತ್ಯೇಕ ಬಣ್ಣವಿರುತ್ತದೆ. ಆದರೆ ರಾಮಜನ್ಮಭೂಮಿ ಸ್ಥಳಕ್ಕೆ ಹೋಗುವ ದೇವಾಲಯಗಳ ಬಣ್ಣ ಕೇಸರಿ ಇರಲಿದೆ. ಅಲ್ಲಿಯ ಸುತ್ತಮುತ್ತಲಿನ ವಿವಿಧ ಕಟ್ಟಡಗಳು ಮತ್ತು ಪಾದಚಾರಿ ಮಾರ್ಗಗಳಲ್ಲಿ ಏಕರೂಪತೆಯ ಬಣ್ಣ ಕಂಡುಬರಲಿದೆ.
'ವಾಣಿಜ್ಯ, ವಸತಿ, ಧಾರ್ಮಿಕ ಮತ್ತು ಪುರಾತತ್ತ್ವ ಶಾಸ್ತ್ರದ ಪ್ರಾಮುಖ್ಯತೆಯ ಕಟ್ಟಡಗಳಿಗೆ ವಿವಿಧ ರೀತಿಯ ಬಣ್ಣಗಳ ಆಯ್ಕೆ ಇರುತ್ತದೆ. ಆದರೆ, ರಾಮಜನ್ಮಭೂಮಿ ಸ್ಥಳಕ್ಕೆ ತೆರಳುವ ದೇವಾಲಯಗಳು ಕೇಸರಿ ಬಣ್ಣದಲ್ಲಿ ಕಂಗೊಳಿಸಲಿವೆ' ಎಂದು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ವಿಶಾಲ್ ಸಿಂಗ್ ತಿಳಿಸಿದರು.
ಮೂಲಗಳ ಮಾಹಿತಿ ಪ್ರಕಾರ, ರಾಮಮಂದಿರ ರಸ್ತೆಯಲ್ಲಿರುವ ದೇವಾಲಯಗಳನ್ನು ಹೊರತುಪಡಿಸಿ, ಫೈಜಾಬಾದ್ ನಗರದ ಸಾದತ್‌ಗಂಜ್ ಪ್ರದೇಶದಿಂದ ಸರಯೂ ನದಿ ತೀರದವರೆಗಿನ ಎಲ್ಲಾ ಖಾಸಗಿ ಕಟ್ಟಡಗಳೂ ಸಹ ಒಂದೇ ಬಣ್ಣ ಹೊಂದಲಿವೆ.
ಇದನ್ನೂ ಓದಿ: ಹಳೆಯ ಜೀವನ ಪದ್ಧತಿಯ ತಾಣ 'ಕೂರ್ಮ'... ಇದು ಆಧುನಿಕ ತಂತ್ರಜ್ಞಾನದ ಸೌಲಭ್ಯ ಬಳಸದ ಗ್ರಾಮ