ETV Bharat / bharat

ಜೋಧ್‌ಪುರದಿಂದ ಎತ್ತಿನ ಬಂಡಿಯಲ್ಲಿ ಅಯೋಧ್ಯೆ ತಲುಪಿದ 600 ಕೆಜಿ ಹಸುವಿನ ತುಪ್ಪ! ಕಾಂಬೋಡಿಯಾದಿಂದ ಬಂತು ಶುದ್ಧ ಅರಿಶಿನ

Ayodhya Ram Temple: ಜೋಧಪುರದಿಂದ 600 ಕೆಜಿ ಶುದ್ಧ ನಾಟಿ ತುಪ್ಪ ಅಯೋಧ್ಯೆಗೆ ಬಂದು ತಲುಪಿತು. ಈ ತುಪ್ಪದಿಂದ ಶ್ರೀರಾಮನ ಮೊದಲ ಆರತಿ ನಡೆಯಲಿದ್ದು, ನಾಟಿ ತುಪ್ಪವನ್ನು ಎತ್ತಿನ ಬಂಡಿಯಲ್ಲಿ ಆಗಮಿಸಿತು. ಇದಲ್ಲದೇ ಕಾಂಬೋಡಿಯಾದಿಂದ ರಾಮ ಲಲ್ಲಾ ಸೇವೆಗೆ ಅರಿಶಿನ ಕೂಡ ಬಂದು ತಲುಪಿತು.

Ayodhya Ram Temple Turmeric Came from Cambodia for Lord Ram 600 kg Cow Ghee Arrived from Jodhpur

author img

By ETV Bharat Karnataka Team

Published : Dec 7, 2023, 2:03 PM IST

ಅಯೋಧ್ಯಾ(ಉತ್ತರ ಪ್ರದೇಶ): ಇಲ್ಲಿಯ ಭಗವಾನ್ ಶ್ರೀರಾಮ ಜನ್ಮ ಭೂಮಿ ಸ್ಥಳದಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಜ. 22 ರಂದು ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಧಾರ್ಮಿಕ ವಿಧಿ ವಿಧಾನಗಳು ಭರದಿಂದ ಸಾಗಿವೆ. ಈ ಕಾರ್ಯಕ್ರಮದ ಭಾಗವಾಗಿ ಹಲವರು ಶ್ರೀರಾಮನಿಗೆ ತಮ್ಮಿಷ್ಟದ ಕಾಣಿಕೆ ಸಲ್ಲಿಸುತ್ತಿದ್ದಾರೆ. ಕೆಲವರು ದೇಣಿಗೆ ರೂಪದಲ್ಲಿ, ಇನ್ನು ಕೆಲವರು ಸೇವಾ ರೂಪದಲ್ಲಿ ಅರ್ಪಣೆ ಸಲ್ಲಿಸುತ್ತಿದ್ದಾರೆ. ಈ ಪಟ್ಟಿಗೆ ಇದೀಗ ಜೋಧ್‌ಪುರದ ಹಸುವಿನ ಶುದ್ಧ ತುಪ್ಪ ಕೂಡ ಸೇರಿದೆ. ಜೋಧಪುರದಿಂದ ತಂದ ಈ ತುಪ್ಪದಿಂದಲೇ ರಾಮನ ಮೊದಲ ಆರತಿ ನಡೆಯಲಿದೆ!

Ayodhya Ram Temple Turmeric Came from Cambodia for Lord Ram 600 kg Cow Ghee Arrived from Jodhpur
ಅಯೋಧ್ಯೆಗೆ ಬಂದ 600 ಕೆಜಿ ಹಸುವಿನ ತುಪ್ಪ

ಭಗವಾನ್ ಶ್ರೀರಾಮ ವಿಗ್ರಹದ ಪ್ರಾಣಪ್ರತಿಷ್ಠಾಪನೆಗಾಗಿ ರಾಜಸ್ಥಾನದ ಜೋಧ್‌ಪುರದಿಂದ 600 ಕೆಜಿಯಷ್ಟು ಪರಿಶುದ್ಧ ತುಪ್ಪ ಗುರುವಾರ ಅಯೋಧ್ಯೆಗೆ ಬಂದು ತಲುಪಿದೆ. ಎತ್ತಿನ ಗಾಡಿಯಲ್ಲಿ ಇಂದು ಬೆಳಗ್ಗೆ ರಾಮನಗರಿ ಅಯೋಧ್ಯೆಗೆ ಬಂದು ತಲುಪಿತು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರೈ ಹಾಗೂ ಖಜಾಂಚಿ ಗೋವಿಂದ ದೇವಗಿರಿ ಮಹಾರಾಜ್‌ ಅವರು ಆರತಿ ಮಾಡಿ ಎತ್ತಿನ ಬಂಡಿಗಳ ಮೂಲಕ ತಂದ ಹಸುವಿನ ತುಪ್ಪವನ್ನು ಸ್ವಾಗತಿಸಿದರು. ಗೋಘೃತ್ ಪಾದಯಾತ್ರೆ ಎಂದು ಕರೆಯಲಾಗುವ ಈ ಎತ್ತಿನ ಬಂಡಿ ಪ್ರಯಾಣವನ್ನು ನವೆಂಬರ್ 27 ರಂದು ಜೋಧಪುರ ರಾಜಸ್ಥಾನದಿಂದ ಆರಂಭಿಸಲಾಗಿತ್ತು. ಜೋಧಪುರದ ರಾಮ್ ಧಾಮ್ ಗೋಶಾಲಾ ನಿರ್ದೇಶಕ ಮಹರ್ಷಿ ಸಾಂದೀಪನ್​ ಮಹಾರಾಜ್​ ಇದರ ನೇತೃತ್ವ ವಹಿಸಿಕೊಂಡಿದ್ದರು.

ಭಾವುಕರಾದ ಚಂಪತ್ ರೈ: ಅಯೋಧ್ಯೆಗೆ ಈ ದೇಶೀ ತುಪ್ಪವನ್ನು ಅರ್ಪಿಸಿದ ಸಂತ ಮಹಾಪುರುಷನಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ಸಾಂದೀಪನ್ ಅವರ ಭಕ್ತಿಯನ್ನು ಕೊಂಡಾಡಿದರು. ನಾವು ಜೋಧಪುರದ ಭೂಮಿಗೆ ನಮಸ್ಕರಿಸುತ್ತೇವೆ. ನವೆಂಬರ್ 2, 1990 ರಂದು, ದಿಗಂಬರ ಅಖಾರದ ಮುಂದೆ ಗುಂಡುಗಳನ್ನು ಹಾರಿಸಿದಾಗ, ಇಬ್ಬರು ಹುತಾತ್ಮರಾಗಿದ್ದರು. ಅದರಲ್ಲಿ ಒಬ್ಬರು ಜೋಧ್‌ಪುರದ ಪ್ರೊಫೆಸರ್ ಮಹೇಂದ್ರ ಅರೋರಾ ಇದ್ದರೆ, ಮಥನಿಯಾ ಗ್ರಾಮದ ನಿವಾಸಿಯಾಗಿದ್ದ ಚಿಕ್ಕ ಮಗುವೂ ಇತ್ತು. ಅವನ ಹೆಸರು ಸೇತುರಾಮ್ ಮಾಲಿ. ಈ ಗೋಘೃತ್ ಇಂದು ಆ ಪವಿತ್ರ ಸ್ಥಳದಿಂದ ಇಲ್ಲಿಗೆ ಬಂದಿದೆ. ಬಹುಶಃ ಅವರ ಆತ್ಮವೇ ಇದಕ್ಕೆ ಸ್ಫೂರ್ತಿ ನೀಡಿರಬಹುದು. ಅದಕ್ಕೂ ಮೀರಿ ಹೆಚ್ಚೇನು ಹೇಳಲಾರೆ ಎಂದು ಉಸಿರು ಬಿಗಿಹಿಡಿದರು.

ನಮ್ಮ ಧಾರ್ಮಿಕ ಪಂಥದಲ್ಲಿ ಗೋವಿನ ತುಪ್ಪವನ್ನು ಅತ್ಯಂತ ಪವಿತ್ರ ಎಂದು ಕರೆಯುತ್ತೇವೆ. ಈ ತುಪ್ಪದಿಂದ ಶ್ರೀರಾಮನ ಜೀವನಾಭಿಷೇಕ, ಯಾಗ, ಹವನ ಇತ್ಯಾದಿಗಳನ್ನು ನಡೆಸಲಾಗುವುದು. ಇದಲ್ಲದೇ ಕಾಂಬೋಡಿಯಾದಿಂದ ರಾಮ ಲಲ್ಲಾ ಸೇವೆಗೆ ಅರಿಶಿನ ಕೂಡ ಬಂದಿದೆ. ಭಗವಾನ್ ಶ್ರೀರಾಮನ ಸೇವೆಗಾಗಿ ನಾವು ಅದನ್ನು ಸ್ವೀಕರಿಸಿದ್ದೇವೆ. ಭಗವಾನ್ ರಾಮನ ಸೇವೆಗಾಗಿ ಪ್ರಪಂಚದಾದ್ಯಂತ ಅರ್ಪಣೆಗಳನ್ನು ಸಲ್ಲಿಸಲಾಗುತ್ತಿದೆ. ಇದು ಅತ್ಯಂತ ಮಂಗಳಕರ ಸಂಕೇತ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಖಜಾಂಚಿ ಗೋವಿಂದ ದೇವ ಗಿರಿ ಮಹಾರಾಜ್ ಹೇಳಿದರು.

  • प्रभु श्री राम की नगरी अयोध्या की तरह एक और आयोध्या थाइलैंड में भी बसती है, जिसे स्थानीय भाषा में ‘अयुत्थया' कहते हैं। वहाँ से आयी पावन रज को पूज्य गोविंद देव गिरी जी महाराज ने मुझे सौंपा। pic.twitter.com/hNwMQsdxyK

    — Champat Rai (@ChampatRaiVHP) December 7, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಅಯೋಧ್ಯಾ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭ: ಕೊಹ್ಲಿ, ತೆಂಡೂಲ್ಕರ್ ಸೇರಿ 7 ಸಾವಿರ ವಿಐಪಿಗಳಿಗೆ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.