ಲಾಹೌಲ್-ಸ್ಪಿತಿ(ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿತಿ ಜಿಲ್ಲೆಯ ಗೊಂಧಲಾ ಪ್ರದೇಶದ ಬಳಿ ಬುಧವಾರ ಬೆಳಗ್ಗೆ ಬೆಟ್ಟದಿಂದ ಮಂಜುಗಡ್ಡೆಯೊಂದು ಬಿದ್ದಿದ್ದು, ಮಂಜುಗಡ್ಡೆ ಒಡೆದ ಕಾರಣ ಇಡೀ ಕಣಿವೆಯಲ್ಲಿ ಸಂಚಲನ ವಾತವರಣ ಉಂಟಾಯಿತು. ಅಕ್ಕಪಕ್ಕದ ಜನರು ತಮ್ಮ ಮೊಬೈಲ್‌ನಲ್ಲಿ ಹಿಮಪಾತವಾಗುತ್ತಿರುವುದನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ.
ಇದೇ ತಿಂಗಳ ಆರಂಭದಲ್ಲಿ ಲಾಹೌಲ್ ಕಣಿವೆಯಲ್ಲಿ ಹಿಮಪಾತವಾಗಿತ್ತು, ಆದರೆ, ನಂತರ ಹವಾಮಾನವು ಸ್ಪಷ್ಟವಾಗಿದ್ದು ಬಹಲ ಸುಂದರವಾಗಿ ಕಾಣಿಸಿದೆ ಎಂದು ಸ್ಥಳೀಯ ನಿವಾಸಿ ನಂದ್ ಕಿಶೋರ್ ಹೇಳಿದರು. ಹಾಗೆಯೇ ಹಿಮಪಾತದಿಂಧ ಯಾವುದೇ ಹಾನಿ ತೊಂದರೆ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ: ಮದುವೆಯ ಸಂಭ್ರಮಕ್ಕೆ ರಾಯಲ್ ಟಚ್ ನೀಡುವ ವಿಂಟೇಜ್ ಕಾರುಗಳು