ನಾಗ್ಪುರ (ಮಹಾರಾಷ್ಟ್ರ): ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ನಾಗ್ಪುರದ ಜನತೆಗೆ ಆಟೋರಿಕ್ಷಾ ಚಾಲಕರೊಬ್ಬರು 'ಆಕ್ಸಿಜನ್ ಮ್ಯಾನ್' ಆಗಿದ್ದಾರೆ. ಆನಂದ್ ವಾರ್ಧೆವಾರ್ ತಮ್ಮ ಆಟೋದಲ್ಲಿ ಆಮ್ಲಜನಕ ಸಿಲಿಂಡರ್ ಅಳವಡಿಸಿದ್ದಾರೆ ಮತ್ತು ಅವರು ಈ ಸೇವೆಯನ್ನು ಕೋವಿಡ್ ರೋಗಿಗಳಿಗೆ ಉಚಿತವಾಗಿ ನೀಡುತ್ತಾರೆ.
ಕೊರನಾ ಸಾಂಕ್ರಾಮಿಕ ಸಮಯದಲ್ಲಿ ಕೆಲವರು ಸಾರ್ವಜನಿಕರನ್ನು ಲೂಟಿ ಮಾಡುವಲ್ಲಿ ನಿರತರಾಗಿದ್ದಾರೆ. ಆದರೆ, ಆನಂದ್ ವಾರ್ಧೆವಾರ್ ಅವರಂಥ ಕೆಲವು ಮಹಾನುಭಾವರು ತೊಂದರೆಯಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ.
ಸಾಮಾಜಿಕ ಜವಾಬ್ದಾರಿಯ ಭಾವನೆಯು ಆನಂದ್ ವಾರ್ಧೆವಾರ್ ಅವರನ್ನು ಕೋವಿಡ್ ರೋಗಿಗಳಿಗೆ ಆಮ್ಲಜನಕ ಸೇವೆಯನ್ನು ಒದಗಿಸಲು ಪ್ರೇರೇಪಿಸಿತು.
ವಾರ್ಧೆವಾರ್ ಅವರ ಇಡೀ ಕುಟುಂಬವು ಕೊರೊನಾ ಸೋಂಕಿಗೆ ತುತ್ತಾಗಿತ್ತು ಮತ್ತು ಅವರು ಆಮ್ಲಜನಕವನ್ನು ಪಡೆಯಲು ಬಹಳ ಕಷ್ಟಪಟ್ಟಿದ್ದರು. ಈ ಅನುಭವದ ನಂತರ ಅವರು ಕೋವಿಡ್‌ನಿಂದ ಬಳಲುತ್ತಿರುವವರಿಗೆ ಮತ್ತು ಆಮ್ಲಜನಕದ ಅಗತ್ಯವಿರುವ ಪ್ರಯಾಣಿಕರಿಗಾಗಿ ತಮ್ಮ ರಿಕ್ಷಾದಲ್ಲಿ ಸಿಲಿಂಡರ್ ಅಳವಡಿಸಿದರು. ಉಚಿತವಾಗಿ ಆಮ್ಲಜನಕ ನೀಡುವುದರ ಜೊತೆಗೆ ಉಚಿತವಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾರೆ.