ETV Bharat / bharat

ಹೈದರಾಬಾದ್​​ನಲ್ಲಿ ಮತ್ತೊಂದು ನೀಚ ಕೃತ್ಯ: 9ರ ಬಾಲೆ ಮೇಲೆ ಆಟೋ ಚಾಲಕನಿಂದ ಅತ್ಯಾಚಾರ - ಹೈದರಾಬಾದ್​​ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ರೇಪ್​

ಸಂತ್ರಸ್ತ ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ಈಗಾಗಲೇ ಆರೋಪಿ ಸಲೀಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

auto driver raped a minor girl at lb nagar in hyderabad
ಹೈದರಾಬಾದ್​​ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಆಟೋ ಚಾಲಕನಿಂದ ಅತ್ಯಾಚಾರ
author img

By

Published : Jun 10, 2022, 4:07 PM IST

ಹೈದರಾಬಾದ್​​ (ತೆಲಂಗಾಣ): ಹೈದರಾಬಾದ್​​ನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಎಲ್.​​ಬಿ.ನಗರದಲ್ಲಿ ಒಂಬತ್ತು ವರ್ಷದ ಬಾಲಕಿಯ ಮೇಲೆ ಆಟೋ ಚಾಲಕನೋರ್ವ ಅತ್ಯಾಚಾರ ಎಸಗಿದ್ಧಾನೆ.

ಮೇ 31ರಂದು ಜುಬಿಲಿ ಹಿಲ್ಸ್​​ನಲ್ಲಿ ಪಬ್​​ಗೆ ಹೋಗಿದ್ದ 17 ವರ್ಷದ ಬಾಲಕಿ ಮೇಲೆ ನಡೆದ ಸಾಮಾಹಿಕ ಅತ್ಯಾಚಾರ ಪ್ರಕರಣ ತೆಲಂಗಾಣದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ಮಾಸುವ ಮುನ್ನವೇ ಈಗ ಮತ್ತೊಂದು ದುಷ್ಕೃತ್ಯ ಬಯಲಿಗೆ ಬಂದಿದೆ. ಸಂತ್ರಸ್ತೆ ಬಾಲಕಿಯ ಪೋಷಕರು ಎಲ್​.ಬಿ.ನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ಧಾರೆ. ಈ ದೂರಿನ ಮೇರೆಗೆ ಆರೋಪಿ ಸಲೀಂ ಎಂಬಾತನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.

ಇತ್ತ, ವನಸ್ಥಲಿಪುರಂನಲ್ಲಿ ನೊಂದ ಬಾಲಕಿಯ ಕುಟುಂಬಸ್ಥರನ್ನು ಬಿಜೆಪಿ ಶಾಸಕ ಈಟಲ ರಾಜೇಂದ್ರ ಹಾಗೂ ಮುಖಂಡರು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಈ ವೇಳೆ ಮಾತನಾಡಿರುವ ಶಾಸಕರು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.

ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೊಂದು ಆ್ಯಸಿಡ್​ ದಾಳಿ.. ಮಗುವಿದ್ದ ಮಹಿಳೆಗೆ ಮದುವೆಯಾಗುವಂತೆ ಪೀಡಿಸುತ್ತಿದ್ದ ಲವರ್​ನಿಂದ ಕೃತ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.