ಡೆಹ್ರಾಡೂನ್: ಉತ್ತರಾಖಂಡದ ಆಯುರ್ವೇದ ಮತ್ತು ಯುನಾನಿ ಪರವಾನಗಿ ಪ್ರಾಧಿಕಾರವು ತಪ್ಪುದಾರಿಗೆಳೆಯುವ ಜಾಹೀರಾತು ಉಲ್ಲೇಖಿಸಿ ಪತಂಜಲಿಯ ಉತ್ಪನ್ನ ತಯಾರಕ ದಿವ್ಯ ಫಾರ್ಮಸಿಗೆ 5 ಔಷಧಗಳನ್ನು ಉತ್ಪಾದನೆ ನಿಲ್ಲಿಸುವಂತೆ ಸೂಚಿಸಿದೆ. ಈ ಹೆಸರಿನ BPgrit, Madhugrit, Thyrogrit, Lipidome ಮತ್ತು iGrit Gold ಔಷಧಗಳಿಗೆ ತಡೆಯೊಡ್ಡಿದ್ದು,ಇವುಗಳನ್ನು ರಕ್ತದೊತ್ತಡ, ಮಧುಮೇಹ, ಗಾಯಿಟರ್ (ಗೋಯಿಟರ್), ಗ್ಲುಕೋಮಾ ಮತ್ತು ಅಧಿಕ ಕೊಲೆಸ್ಟ್ರಾಲ್ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.
ದೂರು ಏನು?: ಕೇರಳದ ವೈದ್ಯ ಕೆ.ವಿ.ಬಾಬು ಅವರು ಜುಲೈನಲ್ಲಿ ದೂರು ನೀಡಿದ್ದರು. ಪತಂಜಲಿಯ ದಿವ್ಯ ಫಾರ್ಮಸಿ ಪರವಾಗಿ ಡ್ರಗ್ಸ್ ಅಂಡ್ ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತು) ಕಾಯಿದೆ 1954, ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಆಕ್ಟ್ 1940 ಮತ್ತು ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ನಿಯಮಗಳು 1945 ರ ಅಡಿ ಕಾನೂನು ನಿಯಮ ಉಲ್ಲಂಘನೆ ಬಗ್ಗೆ ಆರೋಪಿಸಿದ್ದರು. ಅವರು ಮತ್ತೊಮ್ಮೆ ಅಕ್ಟೋಬರ್ 11 ರಂದು ಇಮೇಲ್ ಮೂಲಕ ರಾಜ್ಯ ಪರವಾನಗಿ ಪ್ರಾಧಿಕಾರಕ್ಕೆ (ಎಸ್‌ಎಲ್‌ಎ) ದೂರು ಸಲ್ಲಿಸಿದ್ದರು.
ಪತಂಜಲಿ ಜಾಹೀರಾತು ಹಿಂಪಡೆಯಲು ಸೂಚನೆ: ಫಾರ್ಮುಲೇಶನ್ ಶೀಟ್ ಮತ್ತು ಲೇಬಲ್ ಅನ್ನು ಬದಲಾಯಿಸುವ ಜತೆಗೆ ಎಲ್ಲ 5 ಔಷಧಗಳಿಗೆ ಮರು ಅನುಮೋದನೆ ಪಡೆಯಲು ಪ್ರಾಧಿಕಾರವು ಪತಂಜಲಿಗೆ ತಿಳಿಸಿದೆ. ತಿದ್ದುಪಡಿಗೆ ಒಪ್ಪಿಗೆ ಪಡೆದ ಬಳಿಕವೇ ಕಂಪನಿಯು ಮತ್ತೆ ಉತ್ಪಾದನೆ ಆರಂಭಿಸಬಹುದು ಎಂದು ತನ್ನ ಆದೇಶದಲ್ಲಿ ತಿಳಿಸಿದೆ.
ಬಾಬಾ ರಾಮದೇವ ಪ್ರತಿಕ್ರಿಯೆ ಏನು: ಕಂಪನಿ ಎಲ್ಲ ಉತ್ಪನ್ನಗಳು ಮತ್ತು ಔಷಧಗಳನ್ನು ನಿಗದಿತ ಮಾನದಂಡಗಳ ಪ್ರಕಾರ ಉತ್ಸಾದಿಸುತ್ತಿದೆ. ಈ ಎಲ್ಲ ಶಾಸನಬದ್ಧ ಪ್ರಕ್ರಿಯೆಗಳನ್ನು ಪಾಲಿಸಿ ಪೂರೈಕೆ ಮಾಡಲಿದೆ ಎಂದು ದಿವ್ಯಾ ಫಾರ್ಮಸಿ ಪರ ಬಾಬಾ ರಾಮ್ ದೇವ್ ಅವರು ಪ್ರತಿಕ್ರಿಯಿಸಿದ್ದಾರೆ.
ದಿವ್ಯಾ ಫಾರ್ಮಸಿ ಹೇಳಿದ್ದಿಷ್ಟು: ಪತಂಜಲಿಯ ಔಷಧ ತಯಾರಿಕಾ ಘಟಕ ದಿವ್ಯ ಫಾರ್ಮಸಿಯು ಅತ್ಯುನ್ನತ ಸಂಶೋಧನೆ ಮತ್ತು ಗುಣಮಟ್ಟದೊಂದಿಗೆ ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ಔಷಧಗಳನ್ನು ತಯಾರಿಸುವ ಸಂಸ್ಥೆ, 500 ಕ್ಕೂ ಹೆಚ್ಚು ವಿಜ್ಞಾನಿಗಳ ಸಹಾಯದಿಂದ, ಪೂರ್ವಭಾವಿ ಮತ್ತು ಕ್ಲಿನಿಕಲ್ ಪ್ರಯೋಗಗಳ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳುತ್ತದೆ.
ಆಯುರ್ವೇದದ ವಿರುದ್ಧ ಇರುವವರು ಯಾವಾಗಲೂ ತಮ್ಮ ಸಂಶೋಧನೆ, ಪುರಾವೆಗಳು ಮತ್ತು ಸತ್ಯಗಳೊಂದಿಗೆ ಉತ್ತರಿಸುತ್ತಾರೆ. ಔಷಧದ ಹೆಸರಿನಲ್ಲಿ ನಡೆಯುತ್ತಿರುವ ಗೊಂದಲ, ಭಯದ ದಂಧೆಯ ಮೇಲೆ ಹೆಚ್ಚು ದಾಳಿಗೆ ಒಳಗಾಗಿದ್ದು, ಪತಂಜಲಿ ಸಂಸ್ಥಾನ ಎಂದು ಎಂದು ದಿವ್ಯಾ ಫಾರ್ಮಸಿ ಅಧಿಕಾರಿಗಳು ತಿಳಿಸಿದ್ದಾರೆ.
ಆಯುರ್ವೇದ ವಿರೋಧಿ ಔಷಧ ಮಾಫಿಯಾದ ಕೈವಾಡ ಇದರಲ್ಲಿ ಗೋಚರಿಸುತ್ತಿದೆ ಎಂಬುದು ಮಾಧ್ಯಮಗಳ ಮಾಹಿತಿಯಿಂದ ಸ್ಪಷ್ಟವಾಗುತ್ತದೆ. ಈ ಪಿತೂರಿ ಯಾವುದೇ ರೀತಿಯಲ್ಲಿ ಯಶಸ್ವಿಯಾಗಲು ನಾವು ಬಿಡುವುದಿಲ್ಲ ಎಂದಿದ್ದಾರೆ.
ಈ ಷಡ್ಯಂತ್ರದಲ್ಲಿ ಭಾಗಿಯಾಗಿರುವ ಇಲಾಖೆಯ ಹೊಣೆಗಾರಿಕೆಯನ್ನು ತಪ್ಪಿಸಿ ಆಯುರ್ವೇದ ಮತ್ತು ಯುನಾನಿ ಸರ್ವಿಸಸ್ ಉತ್ತರಾಖಂಡ್ ಪ್ರಾಯೋಜಿತ ರೀತಿಯಲ್ಲಿ 09.11.2022 ರಂದು ಪಿತೂರಿ ಬರೆದು ಮಾಧ್ಯಮಗಳಲ್ಲಿ ಪ್ರಸಾರ ಮಾಡಿರುವ ಪತ್ರವು ಪತಂಜಲಿ ಸಂಸ್ಥಾನಕ್ಕೆ ಇದುವರೆಗೆ ಯಾವುದೇ ರೂಪದಲ್ಲಿ ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ.
ಪತ್ರ ಬಂದಿಲ್ಲ ಎಂದ ದಿವ್ಯಾ ಫಾರ್ಮಸಿ: ಇಲಾಖಾ ಮಟ್ಟದಲ್ಲಿ ಸಂಪರ್ಕಿಸಿದರೂ ಇದುವರೆಗೂ ಪತ್ರ, ಮಾಹಿತಿ ನೀಡಿಲ್ಲ. ಮಾಧ್ಯಮಗಳ ವದಂತಿಗಳು ಜಾಹೀರಾತಿನ' ಕುರಿತು ಈಗಾಗಲೇ ಪತಂಜಲಿಯು ಪರವಾನಗಿ ಅಧಿಕಾರಿಗೆ 30.09.2022 ರಂದು ಉತ್ತರಿಸಿದೆ. ಆದರೆ ಇದೀಗ ಮಾನ್ಯ ಹೈಕೋರ್ಟ್ ನ ಆದೇಶವನ್ನು ಉಲ್ಲಂಘಿಸಿ ಏಕಪಕ್ಷೀಯ ಕ್ರಮ ಕೈಗೊಳ್ಳುವ ಬಗ್ಗೆ ಮಾಧ್ಯಮಗಳಿಂದ ಮಾಹಿತಿ ಲಭಿಸಿದೆ ಎಂದು ತಿಳಿಸಿದೆ.
ದಿವ್ಯಾ ಫಾರ್ಮಸಿ ಎಚ್ಚರಿಕೆ : ಇಲಾಖೆ ತನ್ನ ತಪ್ಪನ್ನು ಸರಿಪಡಿಸಿಕೊಂಡು ಈ ಷಡ್ಯಂತ್ರದಲ್ಲಿ ಭಾಗಿಯಾಗಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಸಂಸ್ಥೆಯು ಪತಂಜಲಿ ಸಂಸ್ಥಾನಕ್ಕೆ ಉಂಟಾದ ಸಾಂಸ್ಥಿಕ ನಷ್ಟಕ್ಕೆ ಪರಿಹಾರ ಸೇರಿದಂತೆ ಕ್ರಿಮಿನಲ್ ಕೃತ್ಯಗಳಿಗೆ ಈ ಸಂಚಿಗೆ ಕಾರಣರಾದ ವ್ಯಕ್ತಿಗಳನ್ನು ಶಿಕ್ಷಿಸಲು ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದೆ.
ಇದನ್ನೂ ಓದಿ:ಉತ್ತರ ಬಂಗಾಳದಲ್ಲಿ ಅಶಾಂತಿ ಸೃಷ್ಟಿಸಲು ಶಸ್ತ್ರಾಸ್ತ್ರ ಕಳ್ಳಸಾಗಣೆ: ಮಮತಾ ಬ್ಯಾನರ್ಜಿ ಆರೋಪ