ನವದೆಹಲಿ : ದೇಶದ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಕೆ ಕೆ ವೇಣುಗೋಪಾಲ್ ಅವರ ಅಧಿಕಾರ ಅವಧಿಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ವೇಣುಗೋಪಾಲ್ ಅಧಿಕಾರ ಅವಧಿ ಎರಡನೇ ಬಾರಿಗೆ ವಿಸ್ತರಣೆಯಾಗಿದೆ. ಅವರು 2022ರ ಜೂನ್ 30ರವರೆಗೆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ಮುಕುಲ್ ರೋಹ್ಟಗಿ ಬಳಿಕ ಅಟಾರ್ನಿ ಜನರಲ್ ಹುದ್ದೆಗೆ ನೇಮಕಗೊಂಡಿದ್ದ ಇವರು ರಾಫೇಲ್ ಜೆಟ್ನಂತಹ ಮಹತ್ವದ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರದ ಪರ ವಾದಿಸಿ ಗೆದ್ದಿದ್ದಾರೆ. ಇನ್ನು, 2017ರಲ್ಲಿ ಮೂರು ವರ್ಷಗಳ ಅವಧಿಗೆ ಅಟಾರ್ನಿ ಜನರಲ್ ಆಗಿ ನೇಮಕವಾಗಿದ್ದರು.
ಇದನ್ನು ಓದಿ: ಕೆಂಪುಕೋಟೆ ಗಲಭೆ ಪ್ರಕರಣ: ಪ್ರಮುಖ ಆರೋಪಿ ಗುರ್ಜೋತ್ ಸಿಂಗ್ ಬಂಧನ
ಭಾರತದ ಅಟಾರ್ನಿ ಜನರಲ್ರನ್ನ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ನೇಮಕವಾಗಲು ಇರಬೇಕಾದ ಅರ್ಹತೆಗಳೇ ಈ ಹುದ್ದೆಗೂ ಅನ್ವಯ ಆಗುತ್ತವೆ. ಇನ್ನು, ಕೆ ಕೆ ವೇಣುಗೋಪಾಲ್ ಅವರು ಮೂಲತಃ ಕೇರಳದ ಕಾಸರಗೋಡಿನವರು. ಖ್ಯಾತ ಸಾಂವಿಧಾನಿಕ ತಜ್ಞರಾಗಿದ್ದು, ಪದ್ಮ ವಿಭೂಷಣ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.