ಕೊಲ್ಲಂ (ಕೇರಳ): ಮೀನುಗಾರನ ಮೇಲೆ ನಡೆದ ಹಲ್ಲೆಯ ವರದಿ ಮಾಡಿದ ಕಾರಣಕ್ಕೆ ಈಟಿವಿ ಭಾರತ್ ಪ್ರತಿನಿಧಿಯ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಮೂವರು ಹೆಲ್ಮೆಟ್ ಧರಿಸಿ, ಚಾಕುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕೊಲ್ಲಂ ಜಿಲ್ಲೆಯ ರಾಮನ್ಕುಲಂಗರ ಮೂಲದ ಈಟಿವಿ ಭಾರತ್ ವರದಿಗಾರ ಜಯಮೋಹನ್ ಥಂಪಿ ಅವರು ಮಂಗಳವಾರ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಮೂವರು ಸದಸ್ಯರ ಗ್ಯಾಂಗ್ ದಾಳಿ ಮಾಡಿದೆ.
ಘಟನೆಯಲ್ಲಿ ಜಯಮೋಹನ್ ಅವರ ಬಲಗೈಗೆ ತೀವ್ರವಾಗಿ ಗಾಯಗೊಂಡಿದ್ದು, ಸದ್ಯಕ್ಕೆ ಅವರಿಗೆ ಕೊಲ್ಲಂನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜುಲೈ 18ರಂದು ಉದ್ಯಮಿಯೊಬ್ಬ ಮೀನುಗಾರನ ಮೇಲೆ ಹಲ್ಲೆ ಮಾಡಿದ್ದನು. ಇದನ್ನು ವರದಿ ಮಾಡಿದ ಕಾರಣದಿಂದ ಹಲ್ಲೆ ನಡೆಸಲಾಗಿದೆ ಎಂದು ಜಯಮೋಹನ್ ಹೇಳಿದ್ದಾರೆ.
ಈ ಹೇಳಿಕೆಗೆ ಮೀನುಗಾರ ಕೂಡಾ ಸಹಮತ ವ್ಯಕ್ತಪಡಿಸಿದ್ದಾನೆ . ಜಯಮೋಹನ್ ಥಂಪಿ ಅವರ ಹೇಳಿಕೆಯನ್ನು ಆಧರಿಸಿ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಗುರುದೇವ ರವೀಂದ್ರನಾಥ ಟ್ಯಾಗೋರ್ ಚರ್ಮದ ಬಣ್ಣದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ