ಹೈದರಾಬಾದ್: ಛತ್ತೀಸ್ಗಢದ ಬಿಜಾಪುರ ಜಿಲ್ಲೆಯ ತಾರೆಮ್ ಪ್ರದೇಶದಲ್ಲಿ ಶನಿವಾರ ನಕ್ಸಲರು-ಯೋಧರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಐವರು ಯೋಧರು ಹುತಾತ್ಮರಾಗಿದ್ದರೆ, 9 ಮಂದಿ ನಕ್ಸಲರು ಹತರಾಗಿದ್ದಾರೆ. ನಕ್ಸಲರ ಬಹುತೇಕ ದಾಳಿಗಳು ಬೇಸಿಗೆ ಸಮಯದಲ್ಲೇ ನಡೆಯುತ್ತವೆ ಎಂಬುದು ತಿಳಿದುಬಂದಿದೆ.
ಬೇಸಿಗೆಯ ತಿಂಗಳಲ್ಲೇ ಹೆಚ್ಚಾಗಿ ನಕ್ಸಲರ ದಾಳಿ:
ಬೇಸಿಗೆಯಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಾಗಿರಲು ಕಾರಣ ಶುಷ್ಕ (ಒಣ) ಹವಾಮಾನ. ಶುಷ್ಕ ಹವಾಮಾನವು ವಿಶಾಲವಾದ ಕಾಡಿನಲ್ಲೂ ದಾಳಿಗೆ ಹೊಂಚು ಹಾಕಲು ಸಹಾಯಕಾರಿಯಾಗಿದೆ. ಅಲ್ಲದೆ, ಬಂಡುಕೋರರು ಬೇಸಿಗೆಯನ್ನು ವಾರ್ಷಿಕ ಟ್ಯಾಕ್ಟಿಕಲ್ ಕೌಂಟರ್ ಅಪರಾಧ ಅಭಿಯಾನ (ಟಿಸಿಒಸಿ) ಕ್ಕೆ ಸೂಕ್ತ ಅವಧಿಯೆಂದು ಪರಿಗಣಿಸುತ್ತಾರೆ.
ಟ್ಯಾಕ್ಟಿಕಲ್ ಕೌಂಟರ್ ಅಪರಾಧ ಅಭಿಯಾನ:
ಮಾನ್ಸೂನ್ ಆರಂಭಕ್ಕೂ ಮುನ್ನ ನಕ್ಸಲರು ಟ್ಯಾಕ್ಟಿಕಲ್ ಕೌಂಟರ್ ಅಪರಾಧ ಅಭಿಯಾನ (ಟಿಸಿಒಸಿ) ನಡೆಸುತ್ತಾರೆ. ಆ ಸಂದರ್ಭದಲ್ಲಿ ಸ್ಥಳೀಯರನ್ನು ಸಂಪರ್ಕಿಸುವುದಲ್ಲದೆ, ಹೊಸದಾಗಿ ಯುವಕರನ್ನು ನೇಮಿಸಿಕೊಳ್ಳುವುದು, ತರಬೇತಿ ನೀಡುವ ಕಾರ್ಯ ನಡೆಯುತ್ತದೆ. ಇದೇ ಸಮಯದಲ್ಲಿ ಹೆಚ್ಚಾಗಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುತ್ತಾರೆ.
ಇದನ್ನೂ ಓದಿ: ಎನ್ಕೌಂಟರ್ನಲ್ಲಿ 9 ಮಂದಿ ನಕ್ಸಲರ ಬೇಟೆ: ಐವರು ಯೋಧರು ಹುತಾತ್ಮ