ಕೊಚ್ಚಿ, ಕೇರಳ: ನಿನ್ನೆ ನಡೆದ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ರೋಚಕತೆಯಿಂದ ಕೂಡಿತ್ತು. ಈ ವೇಳೆ ಫ್ರಾನ್ಸ್ ತಂಡವನ್ನು ಸೋಲಿಸಿ ಅರ್ಜೆಂಟೀನಾ ತಂಡ ಗೆಲುವು ಸಾಧಿಸಿತ್ತು. ಇದರ ವಿಜಯೋತ್ಸವವನ್ನು ಯುವಕರು ನಗರದಲ್ಲಿ ಸಂಭ್ರಮಿಸುತ್ತಿದ್ದರು. ಆದ್ರೆ ಈ ವೇಳೆ ಕೆಲ ಯುವಕರ ಗುಂಪು, ಪೊಲೀಸರ ಮೇಲೆ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದಾರೆ.
ಹೌದು, ಇಲ್ಲಿನ ಯುವಕರ ಗುಂಪೊಂದು ಕಾಲೂರು ಮೆಟ್ರೋ ನಿಲ್ದಾಣದ ಬಳಿ ಸಿವಿಲ್ ಪೊಲೀಸ್ ಅಧಿಕಾರಿ ಮತ್ತು ಕಾನ್ಸ್ಟೇಬಲ್ನನ್ನು ಹಿಡಿದು ರಸ್ತೆಯಲ್ಲಿ ಎಳೆದಾಡಿ ಥಳಿಸಿದ್ದಾರೆ. ಪೊಲೀಸ್ರನ್ನು ರಸ್ತೆಯುದ್ದಕ್ಕೂ ಎಳೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೊಲೀಸರ ಮೇಲೆ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರು ಆರೋಪಿ ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ತನಿಖೆ ಮುಂದುವರಿದಿದೆ.
ಓದಿ: FIFA World Cup: ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿರುವ ಪೆನಾಲ್ಟಿ ಶೂಟೌಟ್ ವಿಡಿಯೋ!