ETV Bharat / bharat

ಓವೈಸಿ ಮೇಲೆ ಗುಂಡಿನ ದಾಳಿ : ಆರೋಪಿಗಳು ಪೊಲೀಸ್ ಕಸ್ಟಡಿಗೆ - ಓವೈಸಿ ಮೇಲೆ ಗ ದಾಳಿ ನಡೆಸಿದ ಇಬ್ಬರು ಆರೋಪಿಗಳ ಬಂಧನ

ಓವೈಸಿ ಮೇಲೆ ಗುಂಡಿನ ದಾಳಿ ನಡೆಸಿದ ಇಬ್ಬರು ಆರೋಪಿಗಳನ್ನು ಹಾಪೂರ್ ಸ್ಥಳೀಯ ನ್ಯಾಯಾಲಯವು 24 ಗಂಟೆಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಪೊಲೀಸರ ಬಿಗಿ ಭದ್ರತೆಯೊಂದಿಗೆ ಆರೋಪಿಗಳ ವಿಚಾರಣೆ ನಡೆಯುತ್ತಿರುವುದಾಗಿ ತಿಳಿದು ಬಂದಿದೆ..

ಓವೈಸಿ ಮೇಲೆ ಗುಂಡಿನ ದಾಳಿ : ಆರೋಪಿಗಳು ಪೊಲೀಸ್ ಕಸ್ಟಡಿಗೆ
author img

By

Published : Feb 13, 2022, 5:21 PM IST

ಹಾಪುರ್ : ಎಐಎಂಐಎಂ ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಮೇಲೆ ಗುಂಡು ಹಾರಿಸಿದ ಆರೋಪದಲ್ಲಿ ಅಮಾನತುಗೊಂಡಿದ್ದ ಇಬ್ಬರನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯವು 24 ಗಂಟೆಗಳ ಪೊಲೀಸ್ ಕಸ್ಟಡಿಗೆ ನೀಡಿದೆ.

ಫೆಬ್ರವರಿ 3ರಂದು ಉತ್ತರಪ್ರದೇಶದ ಚುನಾವಣಾ ಪ್ರಚಾರ ಸಭೆ ಮುಗಿಸಿ ಮೀರತ್‌ನ ಕಿಥೋಡ್‌ನಿಂದ ವಾಪಸಾಗುತ್ತಿದ್ದಾಗ ಚಿಜರ್ಸಿ ಟೋಲ್ ಗೇಟ್‌ನಲ್ಲಿ ಓವೈಸಿಯ ಬೆಂಗಾವಲು ಪಡೆಯ ಮೇಲೆ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದರು.

ಆದರೆ, ಅದೃಷ್ಟವಶಾತ್ ಗುಂಡು ಕಾರಿಗೆ ತಗುಲಿದ್ದರಿಂದ ಓವೈಸಿ ಪಾರಾಗಿದ್ದರು. ಮರುದಿನ ಹಾಪುರ್ ಪೊಲೀಸರು ದಾಳಿ ನಡೆಸಿದ ಸಚಿನ್ ಮತ್ತು ಶುಭಂ ಎಂಬುವರನ್ನು ಬಂಧಿಸಿದ್ದರು.

ಈ ದುಷ್ಕರ್ಮಿಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದ ವ್ಯಕ್ತಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಇಂದು ಪೊಲೀಸರು ಬಿಗಿ ಭದ್ರತೆಯೊಂದಿಗೆ ಇಬ್ಬರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.