ಹೈದರಾಬಾದ್ : ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕಾಗಿ ನಾಲ್ವರು ಯುವಕರು ಸೇರಿಕೊಂಡು ಅಸಿಸ್ಟೆಂಟ್ ಇಂಜಿನಿಯರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯ ಬಂಧನ ಮಾಡಲಾಗಿದೆ.
ಹಳೆ ಹೈದರಾಬಾದ್ನ ವಿವಿಧ ಪ್ರದೇಶಗಳಲ್ಲಿ ಬಾಕಿ ಉಳಿದಿರುವ ವಿದ್ಯುತ್ ಬಿಲ್ ವಸೂಲಿ ಕಾರ್ಯದಲ್ಲಿ ವಿದ್ಯುತ್ ಇಲಾಖೆ ಸಹಾಯಕ ಎಂಜಿನಿಯರ್ ವಿಜಯ್ ಕುಮಾರ್ ಭಾಗಿಯಾಗಿದ್ದರು. ವಾಲ್ಮೀಕಿನಗರದ ಮನೆವೊಂದರಲ್ಲಿ ಕಳೆದ ಎರಡು ವರ್ಷದಿಂದ ಬಿಲ್ ಪಾವತಿ ಮಾಡಿರಲಿಲ್ಲ. ಹೀಗಾಗಿ, 17,714 ರೂ. ಪಾವತಿ ಬಾಕಿ ಉಳಿದಿತ್ತು. ಈ ವೇಳೆ ಮಹಿಳೆಗೆ ಮಾಹಿತಿ ನೀಡಿ, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ಇದನ್ನೂ ಓದಿ: ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ, ತಾಯಿ-ಮಗಳ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ
ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ಮಾಹಿತಿ ಮಹಿಳೆಯ ಮಗ ವಿಶಾಲ್ಗೆ ಗೊತ್ತಾಗುತ್ತಿದ್ದಂತೆ ತಕ್ಷಣವೇ ತನ್ನ ಸ್ನೇಹಿತರೊಂದಿಗೆ ವಿದ್ಯುತ್ ಕಚೇರಿಗೆ ಹೋಗಿದ್ದು, ಅಲ್ಲಿ ಎಇಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ತದ ನಂತರ ಹಲ್ಲೆ ನಡೆಸಿ ಎದೆಗೆ ಒದ್ದಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ವಿಜಯ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ವಿಡಿಯೋ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದು, ವಿಶಾನ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗಾಯಗೊಂಡಿರುವ ಎಇ ಉಸ್ಮಾನಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.