ETV Bharat / bharat

ಎಎಪಿ ಸಚಿವ ನವದೀಪ್ ಸಿಂಗ್ ಕಾರ್​ ಮೇಲೆ ಕಲ್ಲು ತೂರಾಟ..!

author img

By

Published : Jul 27, 2023, 8:07 PM IST

ಪಂಜಾಬ್ ರಾಜ್ಯದ ಸಚಿವ ಹಾಗೂ ಪಂಜಾಬ್‌ನ ಶುಗರ್​ಫೆಡ್ ಕಂಪನಿಯ ಅಧ್ಯಕ್ಷ ನವದೀಪ್ ಸಿಂಗ್ ಜಿದಾ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಈ ಕುರಿತು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Attack On AAP Minister in MP
ಎಎಪಿ ಸಚಿವ ನವದೀಪ್ ಸಿಂಗ್ ಕಾರ್​ ಮೇಲೆ ಕಲ್ಲು ತೂರಾಟ

ಖಾಂಡ್ವಾ (ಮಧ್ಯಪ್ರದೇಶ): ಇನ್ನು ಕೆಲವೇ ತಿಂಗಳುಗಳಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮೊನ್ನೆಯಷ್ಟೇ ಬಿಜೆಪಿ- ಕಾಂಗ್ರೆಸ್ ಜೊತೆಗೂಡಿ ರಾಷ್ಟ್ರೀಯ ಪಕ್ಷ ಎಂಬ ಸ್ಥಾನಮಾನವನ್ನು ಆಮ್ ಆದ್ಮಿ ಪಕ್ಷ ಪಡೆದುಕೊಂಡಿದೆ. ಹೀಗಾಗಿ ಆಪ್​​​​ ಮುಖಂಡರು ಮಧ್ಯಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಆದರೆ, ಖಾಂಡ್ವಾದಲ್ಲಿ ಭಗವಂತ್ ಮಾನ್ ಸಂಪುಟದ ಸಚಿವ ನವದೀಪ್ ಸಿಂಗ್ (ಪಂಜಾಬ್ ರಾಜ್ಯದ ಸಚಿವ ನವದೀಪ್ ಸಿಂಗ್ ಜಿದಾ) ಮೇಲೆ ಹಲ್ಲೆ ನಡೆದಿದೆ.

ಪಕ್ಷದ ಕೆಲಸಕ್ಕಾಗಿ ಪಂಜಾಬ್ ತಲುಪಿದ್ದ ನಾಯಕ: ಮುಂಬರುವ ರಾಜ್ಯ ಚುನಾವಣೆಗಳಿಗೆ, ವಿಶೇಷವಾಗಿ ಮಧ್ಯಪ್ರದೇಶದಲ್ಲಿ ಎಎಪಿ ತನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ. ಈ ಪ್ರಯತ್ನದಲ್ಲಿ ಪಂಜಾಬ್‌ನಿಂದ ಬಂದಿರುವ ಆಮ್ ಆದ್ಮಿ ಪಕ್ಷದ ನಾಯಕ ನವದೀಪ್ ಸಿಂಗ್ ಕೂಡ ಇದ್ದರು. ಪಕ್ಷದ ಕಾರ್ಯ ನಿಮಿತ್ತ ಮಧ್ಯಪ್ರದೇಶದ ಖಾಂಡ್ವಾ ತಲುಪಿದ್ದರು. ಅಲ್ಲಿ ಅವರ ಕಾರಿನ ಮೇಲೆ ದಾಳಿ ನಡೆದಿದೆ. ಅವರ ಕಾರಿನ ಗಾಜಿನ ಮೇಲೆ ಕಲ್ಲು ತೂರಾಟ ನಡೆದಿದ್ದು, ಕಾರಿನ ಗಾಜು ಒಡೆದಿದೆ. ಘಟನೆ ಸಿನಿಮಾ ಚೌಕ್‌ನಲ್ಲಿ ನಡೆದಿದೆ. ಈ ವಿಧ್ವಂಸಕ ಕೃತ್ಯದ ವಿಡಿಯೋ ಕೂಡ ಬೆಳಕಿಗೆ ಬಂದಿದೆ.

ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು: ಸ್ವತಃ ತಾವೇ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರೊಂದಿಗೆ ಆಮ್ ಆದ್ಮಿ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಹಲವು ಕಾರ್ಯಕರ್ತರು ಕೂಡ ಠಾಣೆಯಲ್ಲಿ ಹಾಜರಿದ್ದರು. ಪಂಜಾಬಿನ ಕೆಲವು ಕಾರ್ಯಕರ್ತರು ಮತ್ತು ಮುಖಂಡರೂ ಅವರೊಂದಿಗೆ ಬಂದರು. ಈ ದಾಳಿಯಲ್ಲಿ ನವದೀಪ್ ಸಿಂಗ್​ ಗಾಯಗೊಂಡಿಲ್ಲ. ಆದರೆ, ಹತ್ಯೆಗೆ ಸಂಚು ರೂಪಿಸಿ ಈ ದಾಳಿ ನಡೆಸಲಾಗಿದೆ ಎಂದು ಅವರು ದೂರಿದರು.

ನವದೀಪ್ ಸಿಂಗ್ ಯಾರು?: ನವ್‌ದೀಪ್ ಸಿಂಗ್ ಪಂಜಾಬ್ ಸರ್ಕಾರದಲ್ಲಿ ರಾಜ್ಯ ಸಚಿವ ಸ್ಥಾನಮಾನ ಹೊಂದಿರುವ ಆಪ್‌ನ ನಾಯಕರಾಗಿದ್ದಾರೆ. ಇದರೊಂದಿಗೆ ಪಂಜಾಬ್‌ನ ಶುಗರ್​ಫೆಡ್ ಕಂಪನಿ ಅಧ್ಯಕ್ಷರೂ ಆಗಿದ್ದಾರೆ. ಅವರು ಪಂಜಾಬ್‌ನ ಮಾಜಿ ಸಂಸದರೂ ಆಗಿದ್ದಾರೆ.

ದಾಳಿಗೆ ಕಾರಣವೇನು?: ಎಎಪಿ ನಾಯಕನ ಮೇಲೆ ದಾಳಿ ಏಕೆ, ಯಾರು ಮಾಡಿದರು? ಇದಕ್ಕೆ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಿಜೆಪಿಯ ಸ್ಥಳೀಯ ನಾಯಕರ ಮೇಲೆ ಎಎಪಿ ನಾಯಕ ಆರೋಪ ಮಾಡುತ್ತಿದ್ದಾರೆ. ಈ ಕುರಿತು ಪೊಲೀಸರು ಇನ್ನೂ ಏನನ್ನೂ ಹೇಳಿಲ್ಲ.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ: ಪಿಎಫ್‌ಐನ ಕಾರ್ಯ ನಿರ್ವಹಕರಿಬ್ಬರ ಮೇಲೆ ಇಡಿ ದಾಳಿ, ತನಿಖೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.