ಗುಜರಾತ್: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇ-ಮೇಲ್ ಮೂಲಕ ಪ್ರಾಣ ಬೆದರಿಕೆ ಹಾಕಿದ್ಧ ಯುವಕನನ್ನು ಗುಜರಾತ್ ಎಟಿಎಸ್ ಬಂಧಿಸಿದೆ. ಉತ್ತರ ಪ್ರದೇಶದ ಬಡಾಯು ಮೂಲದ ಅಮನ್ ಸಕ್ಸೇನಾ ಎನ್ನುವಾತ ಕೆಲ ದಿನಗಳ ಹಿಂದೆ ದುಷ್ಕೃತ್ಯ ಎಸಗಿದ್ದ. ಇದೀಗ ಆತನನ್ನು ಎಟಿಎಸ್ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಬಡಾಯುವಿನಲ್ಲಿ ಬಂಧಿಸಿ ವಿಚಾರಣೆ ಆರಂಭಿಸಿದೆ.
ಆರೋಪಿಯು ಮುಂಬೈನಲ್ಲಿ ಐಟಿಐ ವ್ಯಾಸಂಗ ಮಾಡುತ್ತಿದ್ದ. ಈ ಅಪರಾಧದ ಆರೋಪಿಯ ಜೊತೆ ಗುಜರಾತ್‌ನ ಯುವತಿ ಹಾಗು ದೆಹಲಿಯ ಯುವಕನಿಗೆ ಸಂಬಂಧವಿರುವ ಅನುಮಾನಗಳಿದ್ದು ತನಿಖೆ ನಡೆಯುತ್ತಿದೆ. ಪ್ರಧಾನಿಗೆ ಬೆದರಿಕೆ ಪತ್ರದ ಹಿಂದಿನ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಹಿರಿಯ ಎಟಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಮುಖಂಡ, ವ್ಯಾಪಾರಿ ಮಲ್ಲಿಕಾರ್ಜುನ ಮುತ್ಯಾಲ ಕೊಲೆ ಆರೋಪಿಗಳ ಬಂಧನ