ನಮಕ್ಕಲ್(ತಮಿಳುನಾಡು): ಎಟಿಎಂ ದೋಚಲು ಬಂದು ಪೇಚಿಗೆ ಸಿಲುಕಿಕೊಂಡ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನ ನಮಕ್ಕಲ್ ಬಳಿಯ ಅನಿಯಾಪುರಂ ಎಂಬಲ್ಲಿ ನಡೆದಿದೆ.
ಶುಕ್ರವಾರ ಮುಂಜಾನೆ ಬಿಹಾರ ಮೂಲದ ವಲಸೆ ಕಾರ್ಮಿಕನೋರ್ವ ಅನಿಯಾಪುರಂನಲ್ಲಿರುವ ಎಟಿಎಂಗೆ ನುಗ್ಗಿ ಹಣ ಕದಿಯಲು ಮುಂದಾಗಿದ್ದಾನೆ. ಈ ವೇಳೆ ಶಬ್ದ ಕೇಳಿ ಬಂದ ಕಾರಣದಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಪೊಲೀಸರು ಧಾವಿಸಿದಾಗ ಆರೋಪಿ, ಎಟಿಎಂ ಹಿಂದಿನ ಗೋಡೆಯಲ್ಲಿ ಹಿಂದೆ ಅಡಗಿ ಕುಳಿತಿದ್ದು, ಪೊಲೀಸರ ಶೋಧ ಕಾರ್ಯಾಚರಣೆ ವೇಳೆ ಹೊರಗೆ ಬಂದಿದ್ದಾನೆ. ಈತ ಎಟಿಎಂ ಹಿಂದಿನ ಗೋಡೆಯ ಸಣ್ಣ ಜಾಗದಿಂದ ನುಸುಳಿ ಹೊರಬರುತ್ತಿರುವ ದೃಶ್ಯಗಳು ಪೊಲೀಸರ ಮೊಬೈಲ್ನಲ್ಲಿ ಸೆರೆಯಾಗಿವೆ.
ಪ್ರಾಥಮಿಕ ಮಾಹಿತಿ ಪ್ರಕಾರ ಆರೋಪಿಯನ್ನು ಬಿಹಾರ ಮೂಲದ ಉಪೇಂದ್ರ ರೇ ಎಂದು ಗುರುತಿಸಲಾಗಿದ್ದು, ಈತ ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಈಗ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಎಟಿಎಂನಲ್ಲಿದ್ದ 2.65 ಲಕ್ಷ ರೂಪಾಯಿ ಸುರಕ್ಷಿತವಾಗಿದೆ ಎಂದು ನಮಕ್ಕಲ್ ಪೊಲೀಸರು ಮಾಹಿತಿ ನೀಡಿದ್ದು, ಎಟಿಎಂ ಹಿಂದಿನಿಂದ ಆರೋಪಿ ಹೊರಬರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಆ.15ರಂದು ಧ್ವಜಾರೋಹಣ ಮಾಡಲು ಬಿಡುವುದಿಲ್ಲ: ಯುಪಿ ಸಿಎಂ ಯೋಗಿಗೆ ಬೆದರಿಕೆ