ETV Bharat / bharat

ಧಾರ್ಮಿಕ ಉತ್ಸವದಲ್ಲಿ ಉಸಿರುಗಟ್ಟಿ ನಾಲ್ವರು ಭಕ್ತರ ಸಾವು

ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ದಂಡ ಮಹೋತ್ಸವ ಸ್ಥಗಿತವಾಗಿತ್ತು. ಇದೀಗ ಕೊರೊನಾ ಸೋಂಕು ಕಡಿಮೆಯಾದ ಕಾರಣ ಮಹೋತ್ಸವ ಮರು ಆರಂಭವಾಗಿದೆ. ಈ ವೇಳೆ ದುರಂತವೊಂದು ಸಂಭವಿಸಿದೆ.

four devotees died in West Bengal
ಧಾರ್ಮಿಕ ಉತ್ಸವದಲ್ಲಿ ಉಸಿರುಗಟ್ಟಿ ನಾಲ್ವರ ಭಕ್ತರ ಸಾವು
author img

By

Published : Jun 12, 2022, 7:17 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಧಾರ್ಮಿಕ ಉತ್ಸವದಲ್ಲಿ ಭಾರಿ ದುರಂತವೊಂದು ಸಂಭವಿಸಿದೆ. ಪಾನಿಹಟಿ ದಂಡ ಮಹೋತ್ಸವದಲ್ಲಿ ಭಾನುವಾರ ಉಸಿರುಗಟ್ಟಿ ನಾಲ್ವರು ಸಾವನ್ನಪ್ಪಿದ್ದಾರೆ. ಮೃತೆಲ್ಲರೂ 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ಅಲ್ಲದೇ, ಇನ್ನೂ ಕನಿಷ್ಠ 15 ಜನರು ಅಸ್ವಸ್ಥರಾಗಿದ್ದಾರೆ.

ಉತ್ತರ 24 ಪರಗಣ ಜಿಲ್ಲೆಯ ಪಾನಿಹಟಿಯಲ್ಲಿ ಈ ಮಹೋತ್ಸವಕ್ಕೆ 506 ವರ್ಷಗಳಷ್ಟು ಇತಿಹಾಸ ಇದೆ. ಇದು ಪಾನಿಹಟಿ ದಂಡಾ ಉತ್ಸವ ಎಂದೇ ಖ್ಯಾತಿಯಾಗಿದ್ದು, ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಉತ್ಸವ ಸ್ಥಗಿತವಾಗಿತ್ತು. ಇದೀಗ ಕೊರೊನಾ ಸೋಂಕು ಕಡಿಮೆಯಾದ ಕಾರಣ ಮಹೋತ್ಸವ ಪುನಾರಂಭವಾಗಿದೆ.

ಇಂದು ಬೆಳಗ್ಗೆ ಇಸ್ಕಾನ್​ ದೇವಸ್ಥಾನದಲ್ಲಿ ದಂಡ ಮಹೋತ್ಸವ ನಡೆಯುತ್ತಿದ್ದು, ದೂರದ ಊರುಗಳಿಂದ ಬಂದಿರುವ ಸಾವಿರಾರು ಜನರು ಪಾಲ್ಗೊಂಡಿದ್ದಾರೆ. ಈ ವೇಳೆ ಹೆಚ್ಚಿನ ಜನಸಂದಣಿಯಾಗಿದ್ದು, ಉಷ್ಣಾಂಶ ಮತ್ತು ತೇವಾಂಶ ಸಮಸ್ಯೆ ಉಂಟಾಗಿದೆ ಎನ್ನಲಾಗುತ್ತಿದೆ.

ಪರಿಣಾಮ ವೃದ್ಧ ದಂಪತಿ ಸುಭಾಷ್ ಪಾಲ್ ಮತ್ತು ಶುಕ್ಲಾ ಪಾಲ್ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಈ ಘಟನೆ ಸಂಬಂಧ ಸಿಎಂ ಮಮತಾ ಬ್ಯಾನರ್ಜಿ ಟ್ವೀಟ್​ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಈಗಾಗಲೇ ದೌಡಾಯಿಸಿದ್ದು, ಅಗತ್ಯ ನೆರವು ಕಲ್ಪಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ಇದನ್ನೂ ಓದಿ: ಪಬ್​ಜಿ ಗೇಮ್ ಸೋತಿದ್ದಕ್ಕೆ ಸ್ನೇಹಿತರಿಂದ ಗೇಲಿ: ನೇಣಿಗೆ ಶರಣಾದ ಕಾಂಗ್ರೆಸ್​ ಮುಖಂಡನ ಮಗ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.