ETV Bharat / bharat

ಶ್ರೀನಗರದಲ್ಲಿ ಅತ್ಯಂತ ಕಡಿಮೆ ತಾಪಮಾನ ದಾಖಲು.. ಇನ್ನೂ ಹೆಚ್ಚಾಗಲಿದೆ ಚಳಿ!

author img

By

Published : Nov 13, 2021, 4:32 PM IST

ಜಮ್ಮು ಕಾಶ್ಮೀರದ (Jammu Kashmir) ಬೇಸಿಗೆ ಕಾಲದ ರಾಜಧಾನಿಯಾದ ಶ್ರೀನಗರದಲ್ಲಿ ಶುಕ್ರವಾರ 0.7 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನ, ಇಂದು 0.1 ಡಿಗ್ರಿ ಸೆಲ್ಸಿಯಸ್​ಗೆ ಇಳಿಕೆಯಾಗಿದೆ.

At 0.1 degree, Srinagar records coldest night
ಶ್ರೀನಗರದಲ್ಲಿ ಅತ್ಯಂತ ಕಡಿಮೆ ತಾಪಮಾನ ದಾಖಲು, ಇನ್ನೂ ಹೆಚ್ಚಾಗಲಿದೆ ಚಳಿ

ಶ್ರೀನಗರ(ಜಮ್ಮು ಕಾಶ್ಮೀರ): ಹವಾಮಾನ ಬದಲಾವಣೆ (Climate Change) ಈಗಿನ ವಿಜ್ಞಾನಿಗಳ ಕಳಕಳಿ. ಪ್ರಸ್ತುತ ಚಳಿಗಾಲ ಆರಂಭವಾಗಿದ್ದು, ದಕ್ಷಿಣ ಭಾರತದ ಹಲವೆಡೆ ವರುಣ ಧಾರಾಕಾರವಾಗಿ ಸುರಿಯುತ್ತಿದ್ದಾನೆ. ಈ ಬೆನ್ನಲ್ಲೇ ಉತ್ತರದಲ್ಲಿ ಚಳಿಯ ನರ್ತನವೂ ಮುಂದುವರೆದಿದೆ.

ಶುಕ್ರವಾರವಷ್ಟೇ ಜಮ್ಮು ಕಾಶ್ಮೀರದ (Jammu Kashmir) ಬೇಸಿಗೆ ಕಾಲದ ರಾಜಧಾನಿಯಾದ ಶ್ರೀನಗರದಲ್ಲಿ 0.7 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನ, ಇಂದು 0.1 ಡಿಗ್ರಿ ಸೆಲ್ಸಿಯಸ್​ಗೆ ಇಳಿಕೆಯಾಗಿದೆ. ಇದು ತಾಪಮಾನ ವಿಚಾರದಲ್ಲಿ ಶ್ರೀನಗರಕ್ಕೆ ದಾಖಲೆಯ ವಿಷಯವಾಗಿದೆ.

ಇದಕ್ಕಿಂತ ತೀರಾ ಚಳಿಯಾಗಿ ಮಾರ್ಪಟ್ಟಿರುವ ಪ್ರದೇಶವೆಂದರೆ ಲಡಾಖ್ ಕೇಂದ್ರಾಡಳಿತ ಪ್ರದೇಶವಾದ ಡ್ರಾಸ್​ನಲ್ಲಿ. ಇಲ್ಲಿರೋದು ಮೈನಸ್ 12.7 ಡಿಗ್ರಿ ಸೆಲ್ಸಿಯಸ್ ತಾಪಮಾನ. ಅಂದಹಾಗೆ ಇಲ್ಲಿ ಭೀಭತ್ಸ ಚಳಿ ಸಾಮಾನ್ಯ.

ಜಮ್ಮು ಕಾಶ್ಮೀರದ ಪಹಲ್ಗಾಮ್ ಮತ್ತು ಗುಲ್ಮಾರ್ಗ್​ನಲ್ಲಿ ಈಗ ಸದ್ಯಕ್ಕೆ ದಾಖಲಾಗಿರುವ ತಾಪಮಾನ ಕ್ರಮವಾಗಿ ಮೈನಸ್ 3.5 ಡಿಗ್ರಿ ಸೆಲ್ಸಿಯಸ್ ಮತ್ತು ಮೈನಸ್ 0.2 ಡಿಗ್ರಿ ಸೆಲ್ಸಿಯಸ್​ನಷ್ಟಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲಡಾಖ್​ ಕೇಂದ್ರಾಡಳಿತ ಪ್ರದೇಶದಲ್ಲಿ ಡ್ರಾಸ್​ ಅತ್ಯಂತ ಶೀತ ಪ್ರದೇಶವಾದರೂ, ಅಲ್ಲಿರುವ ಇತರ ಪ್ರದೇಶಗಳಲ್ಲೂ ಭಾರಿ ಚಳಿ ದಾಖಲಾಗಿದೆ. ಲಡಾಖ್ ರಾಜಧಾನಿ ಲೇಹ್​ನಲ್ಲಿ (Leh) ಮೈನಸ್ 9.6 ಡಿಗ್ರಿ ಸೆಲ್ಸಿಯಸ್​, ಕಾರ್ಗಿಲ್​ನಲ್ಲಿ ಮೈನಸ್ 6.4 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಕಡಿಮೆ ಶೀತ ದಾಖಲಾಗಿದೆ.

ಜಮ್ಮು ಪ್ರದೇಶದಲ್ಲಿ 12.2 ಡಿಗ್ರಿ, ಕತ್ರಾದಲ್ಲಿ 11.2 ಡಿಗ್ರಿ, ಬಟೋಟೆಯಲ್ಲಿ 6 ಡಿಗ್ರಿ ಸೆಲ್ಸಿಯಸ್, ಬನಿಹಾಲ್​ನಲ್ಲಿ 2 ಡಿಗ್ರಿ, ಭರ್ದೇವಾದಲ್ಲಿ 2.9 ಡಿಗ್ರಿ ಸೆಲ್ಸಿಯಸ್ ಈ ದಿನದಲ್ಲಿ ದಾಖಲಾದ ಅತ್ಯಂತ ಕಡಿಮೆ ತಾಪಮಾನವಾಗಿದೆ.

ಈಗಿರೋದು ಅಷ್ಟೇ ಅಲ್ಲದೇ ನವೆಂಬರ್ 19ರವರೆಗೆ ಇನ್ನೂ ತಾಪಮಾನ ಕುಸಿಯಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಅಲ್ಲಿನ ಜನರಿಗೆ ಮತ್ತಷ್ಟು ಚಳಿಯ ಅನುಭವ ಸಿಗಲಿದೆ.

ಇದನ್ನೂ ಓದಿ: ಕರ್ನಾಟಕ ಬಿಟ್​ಕಾಯಿನ್ ಹಗರಣದ ಬಗ್ಗೆ ಪಕ್ಷಪಾತರಹಿತ ತನಿಖೆ ನಡೆಯಬೇಕು : ಸುರ್ಜೇವಾಲಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.